ಮಂಗಳವಾರ, ಡಿಸೆಂಬರ್ 10, 2019
17 °C

ಸಲ್ಲು ಬಾಯ್‌ ಜೊತೆ ರೊಮ್ಯಾನ್ಸ್‌ ಮಾಡಲಿರುವ ಕನ್ನಡತಿ ಪೂಜಾ ಹೆಗ್ಡೆ

Published:
Updated:

ಬೆಂಗಳೂರು: ಕಿಕ್‌ 2 ಸಿನಿಮಾದ ಮೂಲಕ ಸಲ್ಮಾನ್‌ ಖಾನ್‌ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಭಾರತ್‌ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿರುವುದರಿಂದ ಕಿಕ್‌ 2 ಸಿನಿಮಾವನ್ನು ಯಶಸ್ವಿಗೊಳಿಸಲು ಸಲ್ಲು ಬಾಯ್‌ ಪಣತೊಟ್ಟಿದ್ದಾರೆ.

ಇದನ್ನೂ ಓದಿ: ಕಿಚ್ಚನ ದಬಾಂಗ್‌ ಲುಕ್‌ಗೆ ಫಿದಾ

ಈ ಸಿನಿಮಾದಲ್ಲಿ ಸಲ್ಲುಗೆ ನಾಯಕಿಯಾಗಿ ಕನ್ನಡತಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ ಎಂದು ಬಾಲಿವುಡ್‌ ಅಂಗಳದಲ್ಲಿ ಕೇಳಿಬರುತ್ತಿರುವ ಮಾತುಗಳು. ಆದಾಗ್ಯೂ ಚಿತ್ರತಂಡ ನಾಯಕಿಯ ಹೆಸರನ್ನು ಇನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಜಾಕ್ವೇಲಿನ್‌, ಕಿರ್ತಿ ಸನೂನ್‌ ಹಾಗೂ ಪೂಜಾ ಹೆಗ್ಡೆ ಅವರ ಹೆಸರುಗಳು ಕೇಳಿಬಂದಿದ್ದವು.

ಇದೀಗ ಪೂಜಾ ಹೆಗ್ಡೆ ಅವರ ಹೆಸರು ಅಂತಿಮವಾಗಿದೆ ಎನ್ನಲಾಗುತ್ತಿದೆ. ಈ ವೇಳೆ ಖಾಸಗಿ ಟಿ.ವಿಗೆ ಸಂದರ್ಶನ ನೀಡಿರುವ ಪೂಜಾ ಹೆಗ್ಡೆ ನಾನು ಸಲ್ಮಾನ್‌ ಖಾನ್‌ ಜೊತೆ ನಟಿಸಲು ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ. ಈ ಮಾತು ಕಿಕ್‌ 2 ಸಿನಿಮಾಗೆ ಆಯ್ಕೆಯಾಗಿರುವುದನ್ನು ಖಾತ್ರಿಪಡಿಸಿದೆ ಎಂದು ಪೂಜಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. 

‘ಕಿಕ್‌’ ಸಿನಿಮಾದ ಚಿತ್ರಕತೆ ಸಿದ್ಧವಾಗಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ’ ಎಂದು ನಿರ್ದೇಶಕ ಸಾಜಿದ್‌ ನಾಡಿಯಾವಾಲಾ ತಿಳಿಸಿದ್ದಾರೆ.

ಇದನ್ನೂ ಓದಿ: ಪೂಜಾ ಹೆಗ್ಡೆ ಸಂಭಾವನೆ ಎಷ್ಟು?

2014ರಲ್ಲಿ ಬಿಡುಗಡೆಯಾಗಿದ್ದ ಕಿಕ್‌ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವ ಮೂಲಕ ಬಾಕ್ಸ್‌ ಆಫೀಸಿನಲ್ಲಿ ಉತ್ತಮ ಗಳಿಕೆ ಮಾಡಿತ್ತು. 2021ರ ಈದ್‌ಗೆ ಕಿಕ್‌ 2 ಸಿನಿಮಾ ಬಿಡುಗಡೆಯಾಗಲಿದೆ ಎಂದು ಸಲ್ಮಾನ್‌ ಖಾನ್‌ ಟ್ವೀಟ್‌ ಮಾಡಿದ್ದಾರೆ. 

ಪ್ರಭುದೇವ ನಿರ್ದೇಶನದ ಸಲ್ಮಾನ್‌ ಖಾನ್‌ ನಟನೆಯ 'ದಬಾಂಗ್‌ 3' ಚಿತ್ರ ಕನ್ನಡಕ್ಕೂ ಡಬ್‌ ಆಗಿದೆ. ಇದರಲ್ಲಿ ನಟ ಸುದೀಪ್‌ ಕೂಡ ನಟಿಸಿದ್ದಾರೆ. ಡಿಸೆಂಬರ್‌ 20ರಂದು ಹಿಂದಿ, ಕನ್ನಡ, ತೆಲುಗು ಮತ್ತು ಮಲಯಾಳದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು