ಗುರುವಾರ , ಮಾರ್ಚ್ 4, 2021
29 °C

ಕಿರಿಕ್‌ ಪಾರ್ಟಿ ರಿಮೇಕ್‌ ಜಾಕ್ವೆಲಿನ್‌ ನಾಯಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ ಮುಖ್ಯಪಾತ್ರದಲ್ಲಿ ನಟಿಸಿದ್ದ ‘ಕಿರಿಕ್ ಪಾರ್ಟಿ’ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರ ಹಿಂದಿಗೆ ರಿಮೇಕ್‌ ಆಗಲಿದ್ದು, ಈ ಚಿತ್ರದಲ್ಲಿ ಕಾರ್ತಿಕ್‌ ಆರ್ಯನ್‌ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. 

ಹೊಸ ವಿಷಯವೇನೆಂದರೆ ಈ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ನಟಿಸಲಿದ್ದಾರೆ. 

ಈ ವಿಚಾರವನ್ನು ನಿರ್ಮಾಪಕ ಅಜಯ್‌ ಕಪೂರ್‌ ಅವರೇ ಸ್ಪಷ್ಟಪಡಿಸಿದ್ದು, ‘ಈ ಸಿನಿಮಾದಲ್ಲಿ ಜಾಕ್ವೆಲಿನ್‌ ಫರ್ನಾಂಡಿಸ್‌ ನಟಿಸಲಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ. ಅವರು ಈಗಿನ ಯುವಜನರಿಗೆ ತುಂಬ ಹತ್ತಿರವಾದ ವ್ಯಕ್ತಿ ಹಾಗೂ ಅದ್ಭುತವಾಗಿ ನಟಿಸುತ್ತಾರೆ. ಇದೇ ಮೊದಲ ಬಾರಿಗೆ ಕಾರ್ತಿಕ್‌ ಹಾಗೂ ಜಾಕ್ವೆಲಿನ್‌ ತೆರೆ ಮೇಲೆ ಒಟ್ಟಿಗೆ ನಟಿಸಿದ್ದು, ಪ್ರೇಕ್ಷಕರು ಈ ಜೋಡಿಯನ್ನು ಖಂಡಿತಾ ಇಷ್ಟಪಡಲಿದ್ದಾರೆ’ ಎಂದು  ಅವರು ಹೇಳಿದ್ದಾರೆ.

ಈ ಸುದ್ದಿಗೆ ಪ್ರತಿಕ್ರಿಯಿಸಿರುವ ಜಾಕ್ವೆಲಿನ್‌, ‘ಅಜಯ್‌ ಕಪೂರ್‌ ಅವರೊಂದಿಗೆ ಸಿನಿಮಾ ಮಾಡುವುದನ್ನೇ ಎದುರು ನೋಡುತ್ತಿದ್ದೇನೆ. ಅದ್ಭುತ ಚಿತ್ರಕತೆ, ಸಂಗೀತ ಈ ಸಿನಿಮಾಕ್ಕಿದೆ. ಇದರಲ್ಲಿ ನನ್ನ ಪಾತ್ರ ವಿಶೇಷವಾಗಿದೆ’ ಎಂದು ಹೇಳಿರುವುದು ಅವರು ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ.

‘ಕಿರಿಕ್‌ ಪಾರ್ಟಿ’ ಕನ್ನಡದ ಬ್ಲಾಕ್‌ ಬಸ್ಟರ್‌ ಸಿನಿಮಾಗಳಲ್ಲಿ ಒಂದಾಗಿದ್ದು, 150ಕ್ಕೂ ಹೆಚ್ಚು ದಿನ ಓಡಿತ್ತು. ಈಗ ಎಲ್ಲರ ಕುತೂಹಲವೂ ರಿಮೇಕ್‌ ಚಿತ್ರದತ್ತ ಹೊರಳಿದ್ದು, ಈ ಚಿತ್ರವೂ ಕನ್ನಡದಂತೆ ಹಿಟ್‌ ಆಗಲಿದೆಯೇ ಎಂದು ಕಾಯುವಂತೆ ಮಾಡಿದೆ.

ಈ ಚಿತ್ರವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಅಭಿಷೇಕ್‌ ಜೈನ್‌ ನಿರ್ದೇಶನ ಮಾಡಲಿದ್ದು, ಮುಂದಿನ ಅಕ್ಟೋಬರ್‌ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.