ಸೋಮವಾರ, ಜನವರಿ 24, 2022
28 °C

ಶಿಲ್ಪಾ ಶೆಟ್ಟಿಗೆ ’ಕಂಜೂಸ್‌’ ಎಂದ ಹಿರಿಯ ನಟಿ ಕಿರಣ್‌ ಖೇರ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ಬೆಡಗಿ ಶಿಲ್ಪಾ ಶೆಟ್ಟಿ ಅವರನ್ನು ಹಿರಿಯ ನಟಿ ಕಿರಣ್‌ ಖೇರ್‌ ’ಕಂಜೂಸ್‌’ ಎಂದು ಕರೆದಿರುವ ವಿಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.

ಸೋನಿ ಟಿ.ವಿ ನಡೆಸಿಕೊಡುವ ‘ಇಂಡಿಯಾಸ್​ ಗಾಟ್​ ಟ್ಯಾಲೆಂಟ್’ ಕಾರ್ಯಕ್ರಮದಲ್ಲಿ ಶಿಲ್ಪಾ ಜಡ್ಜ್​ ಆಗಿ ಭಾಗವಹಿಸುತ್ತಿದ್ದಾರೆ. ಈ ವೇಳೆ ಅವರನ್ನುಕಿರಣ್‌ ಕಂಜೂಸ್‌ ಎಂದಿದ್ದಾರೆ. ಹೀಗೆ ಕರೆಯಲು ನೆನೆಸಿಟ್ಟ ’ಬಾದಾಮಿ’ಯೇ ಕಾರಣ ಎಂಬುದು ಬಹಿರಂಗವಾಗಿದೆ. 

‘ಇಂಡಿಯಾಸ್​ ಗಾಟ್​ ಟ್ಯಾಲೆಂಟ್’ ಸರಣಿ ದೇಶದಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಕಾರ್ಯಕ್ರಮವಾಗಿದೆ. ಇದರಲ್ಲಿ ನಾಲ್ವರು ಜಡ್ಜ್‌ಗಳಿದ್ದು ಅವರಲ್ಲಿ ಶಿಲ್ಪಾ ಶೆಟ್ಟಿ ಹಾಗೂ ಕಿರಣ್‌ ಖೇರ್‌ ಕೂಡ ಸೇರಿದ್ದಾರೆ. 

ಕಾರ್ಯಕ್ರಮದ ನಡುವೆ ಶಿಲ್ಪಾ ಮಾತನಾಡುತ್ತ, ನಾನು ತಂದಿರುವ ಬಾದಾಮಿಯನ್ನು ಎಲ್ಲಾ ತಿನ್ನುತ್ತಾರೆ ಎಂದಿದ್ದರು. ಮೊನ್ನೆ 8, ನಿನ್ನೆ 6 ಬಾದಾಮಿ ತಂದಿದ್ದೆ ನನಗೆ ಉಳಿದಿದ್ದು ಕೇವಲ 1 ಮಾತ್ರ ಎಂದು ಬೇಸರ ವ್ಯಕ್ತಪಡಿಸಿದ್ದರು. ಕೂಡಲೇ ಮಾತನಾಡಿದ ಕಿರಣ್‌ , ನಾವು ಮೂರು ಜನ ಇದ್ದೀವಿ, ನೀನು ಕೇವಲ 8, 6 ಬಾದಾಮಿ ತರುತ್ತೀಯಾ ನೀನು ಕಂಜೂಸ್‌ ಇರುಬೇಕು ಎಂದು ಹೇಳುತ್ತಾರೆ.

ಕಿರಣ್‌ ಮಾತಿಗೆ ಇಡೀ ಕಾರ್ಯಕ್ರಮದಲ್ಲಿ ಇರುವವರು ನಗುತ್ತಾರೆ. ಈ ಹಾಸ್ಯದ ತುಣುಕನ್ನು ಸೋನಿ ಟಿ.ವಿ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. 

ಪತಿ ರಾಜ್​ ಕುಂದ್ರಾ ಅವರ ಅಶ್ಲೀಲ ಸಿನಿಮಾ ನಿರ್ಮಾಣ ಆರೋಪ ಪ್ರಕರಣದಿಂದಾಗಿಯೂ ಶಿಲ್ಪಾ ಶೆಟ್ಟಿ ಮುಜುಗರ ಅನುಭವಿಸುವಂತಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು