ಬಹುತೇಕ ಹೊಸಬರಿಂದಲೇ ಕೂಡಿರುವ ‘ಕೀರ್ತಿ ಐ ಲವ್ ಯು’ ಚಿತ್ರದ ‘ಮುದ್ದಾದ ಮೂಗುತಿ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಪ್ರೇಮಕಥೆ ಹೊಂದಿರುವ ಚಿತ್ರಕ್ಕೆ ನಿರಂಜನ್ ಆರಾಧ್ಯ ಆ್ಯಕ್ಷನ್–ಕಟ್ ಹೇಳಿದ್ದಾರೆ.

ಈ ಹಾಡಿಗೆ ಅಭಿರಾಮ್ ಸಂಗೀತ ನೀಡಿದ್ದು, ಅರುಣ್ ಕುಮಾರ್ ಸಾಹಿತ್ಯವಿದೆ. ಆರ್ಫಾಜ್ ಉಲ್ಲಾಳ್ ಧ್ವನಿಯಾಗಿದ್ದಾರೆ. ಪ್ರಜ್ಯೋತ್ ಎಸ್ ರಾವ್ಗೆ ನಿಧಿ ಗೌಡ ಜೋಡಿಯಾಗಿದ್ದಾರೆ.

‘ನೃತ್ಯ ಕಲಾವಿದನಾಗಿರುವ ನನಗೆ ಮೊದಲಿನಿಂದಲೂ ನಿರ್ದೇಶನದ ಬಗ್ಗೆ ಆಸಕ್ತಿಯಿತ್ತು. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಪ್ರೀತಿಯ ಕುರಿತು ಹಲವು ಚಿತ್ರಗಳು ಬಂದಿವೆಯಾದರೂ, ನಾವು ಈ ಚಿತ್ರದಲ್ಲಿ ಪ್ರೀತಿ ಕುರಿತು ನೀಡಿರುವ ವ್ಯಾಖ್ಯಾನವೇ ಬೇರೆ. ಅದರಲ್ಲೂ ಈಗಂತೂ ಚಿಕ್ಕವಯಸ್ಸಿನಲ್ಲೇ ಲವ್, ಡೇಟಿಂಗ್ ಎನ್ನುತ್ತಾರೆ. ಅದೆಲ್ಲ ತಪ್ಪು ಎಂದು ಯುವಜನತೆಗೆ ಜಾಗೃತಿ ಮೂಡಿಸುವ ಚಿತ್ರವೂ ಹೌದು. ಜುಲೈನಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕ.

ಪೂಜಿತಾ ಎಸ್ ರಾವ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಅಭಿಷೇಕ್ ಛಾಯಾಚಿತ್ರಗ್ರಹಣವಿದೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-51-581096689

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.