ಮಂಗಳವಾರ, ಮೇ 24, 2022
26 °C

ಖಳನಾಯಕನಾಗಿ ತೆರೆ ಮೇಲೆ ಬರಲಿದ್ದಾರೆ ಶ್ರೀನಗರ ಕಿಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಸಿಲಿಕಾನ್ ಸಿಟಿ’ ಚಿತ್ರದ ಮೂಲಕ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದ ನಟ ಶ್ರೀನಗರ ಕಿಟ್ಟಿ ಈಗ ಖಳನಾಯಕನಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಜಯರಾಂ ನಿರ್ದೇಶನದ ಬುದ್ಧಿವಂತ 2 ಚಿತ್ರದಲ್ಲಿ ಕಿಟ್ಟಿ ಅವರದ್ದು ಖಳನಾಯಕನ ಪಾತ್ರ. ಬುದ್ಧಿವಂತ ಚಿತ್ರವನ್ನು ಜಯರಾಂ ನಿರ್ದೇಶಿಸಿದ್ದು ಆ ಚಿತ್ರ ಸೂಪರ್ ಹಿಟ್ ಆಗಿತ್ತು. ಬುದ್ಧಿವಂತ 2 ಚಿತ್ರವು ಬುದ್ಧಿವಂತ ಚಿತ್ರದ ಸೀಕ್ವೆಲ್ ಆಗಿದೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಜಯರಾಂ ‘ಕಿಟ್ಟಿ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟಿಸುತ್ತಿದ್ದರು. ಅವರು ಹೀರೊ ಆಗಿ ತೆರೆ ಮೇಲೆ ಕಾಣಿಸಲು ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ಸೂಪರ್ ಸ್ಟಾರ್‌ ಉಪೇಂದ್ರ ಎದುರಿಗೆ ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿಟ್ಟಿ ಅವರ ನಡವಳಿಕೆಗಳು ದಿವಂಗತ ನಟ ರಘುವರನ್‌ ಅವರಿಗೆ ಹೋಲುತ್ತದೆ. ರಘುವರನ್ ಅವರು ಫೈಟ್‌ಗಿಂತ ಮೈಂಡ್‌ ಗೇಮ್‌ ಮಾಡುತ್ತಿದರು. ಈ ಚಿತ್ರದಲ್ಲಿ ಕಿಟ್ಟಿ ಮಾಫಿಯಾದ ಕಿಂಗ್‌ಪಿನ್‌ ಆಗಿದ್ದಾರೆ’ ಎಂದು ವಿವರಣೆ ನೀಡಿದ್ದಾರೆ.

ತೆಲುಗಿನ C/O ಕಂಚಾರಾಪಲ್ಲೆಂ ಕನ್ನಡ ಅವತರಣಿಕೆಯಲ್ಲೂ ಕಿಟ್ಟಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಓಂ ರಘು ನಿರ್ದೇಶನವಿದೆ. ಅವತಾರ್ ಪುರುಷ ಸಿನಿಮಾದಲ್ಲೂ ಕಿಟ್ಟಿ ನಟಿಸುತ್ತಿದ್ದು ಆ ಚಿತ್ರದ ಶೂಟಿಂಗ್ ಅನ್ನು ಈಗಾಗಲೇ ಮುಗಿಸಿದ್ದಾರೆ. ಇದರಲ್ಲಿ ಅವರದ್ದು ಮಂತ್ರವಾದಿಯ ಪಾತ್ರ. ಬಹುಪರಾಕ್ ನಂತರ ಅವತಾರ್ ಪುರುಷ್‌ದಲ್ಲಿ ಒಂದಾಗುತ್ತಿದೆ ಕಿಟ್ಟಿ ಹಾಗೂ ಸುನಿ ಜೋಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು