ಬುಧವಾರ, ಜೂನ್ 3, 2020
27 °C

ಕಿಯಾರಾ ಡೇಟಿಂಗ್ ಆ್ಯಪ್‌ ಕಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಯಾರಾ ಅಡ್ವಾಣಿ ಬಿಟೌನ್‌ನ ಬಹುಬೇಡಿಕೆಯ ನಟಿ. ಬಾಲಿವುಡ್‌, ಟಾಲಿವುಡ್‌ನ ಸ್ಟಾರ್‌ ನಟರ ಜೊತೆ ನಟಿಸಿರುವ ಆಕೆಗೆ ಹೆಚ್ಚು ಹೆಸರು ತಂದು ಕೊಟ್ಟ ಚಿತ್ರ ‘ಕಬೀರ್ ಸಿಂಗ್’. ಈ ಸಿನಿಮಾದಿಂದ ಈಕೆ ಬಾಲಿವುಡ್‌ನಲ್ಲಿ ‘ಕ್ರೇಜಿ ಹೀರೊಯಿನ್’ ಎನ್ನಿಸಿಕೊಂಡರು.

ಕೇವಲ ಸಿನಿಮಾಗಳಲ್ಲಷ್ಟೇ ಅಲ್ಲದೇ ವೆಬ್‌ ಸೀರಿಸ್‌ಗಳಲ್ಲೂ ನಟಿಸಿರುವ ಆಕೆಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಲಸ್ಟ್ ‌ಸ್ಟೋರಿ, ಗಿಲ್ಟಿ ಮುಂತಾದ ವೆಬ್‌ ಸಿರೀಸ್‌ಗಳಲ್ಲಿ ನಟಿಸುವ ಮೂಲಕ ಯುವಜನಾಂಗವನ್ನು ತಮ್ಮ ನಟನೆಯ ಮೂಲಕ ಆವರಿಸಿಕೊಂಡಿದ್ದಾರೆ ಈ ಮುಂಬೈ ಬೆಡಗಿ.  

ಈಕೆ ನಟಿಸಿರುವ ‘ಲಕ್ಷ್ಮಿ ಬಾಂಬ್‌, ‘ಶೇರ್‌ಷಾ’, ‘ಬೋಲ್ ಬುಲೈಯಾ 2’ ಹಾಗೂ ‘ಇಂದೂ ಕಿ ಜವಾನಿ’ ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ. ಇವುಗಳಲ್ಲಿ ಸದ್ಯಕ್ಕೆ ಆಕೆಯ ಕೈಯಲ್ಲಿರುವ ಕೊನೆಯ ಸಿನಿಮಾ ‘ಇಂದೂ ಕಿ ಜವಾನಿ’. ಇದು ಡೇಟಿಂಗ್‌ ಆ್ಯಪ್‌ನ ಪ್ರೇಮಕಥೆಗೆ ಸಂಬಂಧಿಸಿದ ಸಿನಿಮಾ. ಇದರಲ್ಲಿ ಕಿಯಾರಾ ಆದಿತ್ಯ ಸೀಲ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ‘ಇಂದೂ ಕಿ ಜವಾನಿ’ ಸಿನಿಮಾದ ಪರಿಕಲ್ಪನೆ ಬಗ್ಗೆ ಕೇಳಿದ ಪ್ರಶ್ನೆಗೆ ಆಕೆ ನೀಡಿದ ಉತ್ತರ ಆಸಕ್ತಿದಾಯಕವಾಗಿದೆ.

‘ನೀವು ಡೇಟಿಂಗ್ ಆ್ಯಪ್ ಬಳಸುತ್ತೀರಾ’ ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ‘ನಾನು ವೈಯಕ್ತಿಕ ಜೀವನದಲ್ಲಿ ಇಲ್ಲಿಯವರೆಗೆ ಯಾವುದೇ ಡೇಟಿಂಗ್ ಆ್ಯಪ್ ಬಳಸಿಲ್ಲ. ಪ್ರೀತಿಯ ವಿಷಯದಲ್ಲಿ ನಾನಿನ್ನೂ ಹಳೆಯ ಕಾಲದ ಶಾಲೆಯ ಹುಡುಗಿಯಂತೆ ಇದ್ದೇನೆ’ ಎಂದು ಉತ್ತರಿಸಿದ್ದಾರೆ ಈ ಕಬೀರ್ ಸಿಂಗ್ ಒಡತಿ. 

‘ನಾನು ಅಂತರಾಳದಲ್ಲಿ ರೊಮ್ಯಾಂಟಿಕ್ ಹುಡುಗಿ. ನನಗೆ ನಿಜವಾದ ಪ್ರೀತಿಯ ಮೇಲೆ ನಂಬಿಕೆ ಹೆಚ್ಚು. ಡಿಜಿಟಲ್ ವೇದಿಕೆಯಿಂದ ನನಗೆ ಹತ್ತಿರವಾಗುವುದಕ್ಕಿಂತ ಹಿಂದಿನ ಕಾಲದಂತೆ ನೇರವಾಗಿ ಪ್ರೀತಿಯ ವಿಷಯವನ್ನು ವ್ಯಕ್ತಪಡಿಸುವುದೇ ಇಷ್ಟ. ಆದರೆ, ನಮ್ಮ ಇಂದಿನ ಜೀವನದಲ್ಲಿನ ತಂತ್ರಜ್ಞಾನದ ಶಕ್ತಿಯನ್ನೂ ಅಲ್ಲಗೆಳೆಯುವುದಿಲ್ಲ’ ಎಂದಿದ್ದಾರೆ. ಅಷ್ಟೇ ಅಲ್ಲದೇ ತನ್ನ ಪರಿಚಯದ ಅನೇಕರು ಆನ್‌ಲೈನ್ ಮೂಲಕ ಪರಿಚಯವಾಗಿ ಮದುವೆಯಾಗಿದ್ದಾರೆ ಎಂಬ ವಿಷಯವನ್ನೂ ಆಕೆ ಬಹಿರಂಗಪಡಿಸಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ಕಿಯಾರಾ ಅವರದು ಡೇಟಿಂಗ್ ಆ್ಯಪ್ ಮೂಲಕ ಪ್ರೇಮಪಾಶಕ್ಕೆ ಸಿಲುಕುವ ಹಳ್ಳಿ ಹುಡುಗಿಯ ಪಾತ್ರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು