ಸ್ಯಾಂಡಲ್ವುಡ್ನ ಕಾಮಿಡಿ ಸ್ಟಾರ್ ಕೋಮಲ್ ಕುಮಾರ್ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಕೆಲ ದಿನಗಳ ಹಿಂದೆ ಇವರ ನಟನೆಯ ‘ತೆನಾಲಿ ಡಿ ಎ LLB' ಹೊಸ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿತ್ತು. ಈಗ ಈ ಚಿತ್ರ ಅದ್ದೂರಿಯಾಗಿ ಸೆಟ್ಟೇರಿದೆ.

ಬೆಂಗಳೂರಿನ ವಿಜಯನಗರದ ಮನುವನ ಬಳಿ ಇರುವ ಆದಿಚುಂಚನಗಿರಿ ಮಠದಲ್ಲಿ ಈ ಚಿತ್ರದ ಮುಹೂರ್ತ ಪೂಜೆ ನಡೆಯಿತು. ಆದಿಚುಂಚನಗಿರಿ ಸ್ವಾಮಿಗಳಾದ ನಿರ್ಮಲಾನಂದ ಮಹಾಸ್ವಾಮೀಜಿ ಅವರ ಸಮ್ಮುಖದಲ್ಲಿ ಹಿರಿಯ ನಟ ಜಗ್ಗೇಶ್ ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ.

ನಿಜ ಜೀವನದಲ್ಲೂ LLB ಓದಿರುವ ಕೋಮಲ್ ಅವರು ಈ ಚಿತ್ರದಲ್ಲೂ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಗ್ಗೇಶ್ ಅವರು ತಮ್ಮ ಕೋಮಲ್ ಅವರಿಗೆ ಕಪ್ಪು ಕೋಟು ಉಡುಗೊರೆಯಾಗಿ ನೀಡಿ ಚಿತ್ರ ಯಶಸ್ಸು ಕಾಣಲಿ ಎಂದು ಶುಭಹಾರೈಸಿದ್ದಾರೆ.

ಈ ಚಿತ್ರ ಕುರಿತು ಮಾತನಾಡಿರುವ ನಟ ಜಗ್ಗೇಶ್, ‘ಈ ಕಥಾಹಂದರವನ್ನು ‘ತೆನಾಲಿ ಡಿ ಎ LLB' ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಬೇಕು‘ ಎಂದಿದ್ದಾರೆ.

ಈ ಸಿನಿಮಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ನಟ ಕೋಮಲ್, ‘ಲಾಯರ್ ಆಗಬೇಕು ಎನ್ನುವುದು ನನ್ನ ತಂದೆಯ ಕನಸಾಗಿತ್ತು. ಈಗ ಸಿನಿಮಾದಲ್ಲಿ ಕರಿ ಕೋಟು ಧರಿಸಿ ಬರುತ್ತಿದ್ದೀನೆ, ಪಾತ್ರ ತುಂಬಾ ಚೆನ್ನಾಗಿದೆ' ಎಂದು ಹೇಳಿಕೊಂಡಿದ್ದಾರೆ.

‘ಈ ಚಿತ್ರದ ಪಾತ್ರ ಕೋಮಲ್ ಅವರಿಗೆ ಒಪ್ಪುವಂತಹ ಕಥೆಯಾಗಿದೆ. ಅವರು ನಿಜ ಜೀವನದಲ್ಲೂ ವಕೀಲರು ಆಗಿದ್ದರಿಂದ ನಮ್ಮ ಚಿತ್ರಕಥೆಗೆ ಇನ್ನಷ್ಟು ಸಹಕಾರಿಯಾಯಿತು. ಈ ಚಿತ್ರದ ನಾಯಕಿರಾದ ಕಾಜಲ್ ಕುಂದರ್, ನಟಿ ಅಕ್ಷಿತಾ ಬೋಪಯ್ಯ ಅವರಿಗೂ ಈ ಚಿತ್ರಕಥೆ ಒಪ್ಪಿಕೊಂಡಿರುವ ಬಗ್ಗೆ ಖುಷಿ ಇದೆ‘ ಎಂದು ಈ ಚಿತ್ರದ ನಿರ್ದೇಶಕ ಸಿದ್ದ್ರುವ್ ಸಿದ್ದು ಹೇಳಿದ್ದಾರೆ.

ಈ ಚಿತ್ರಕ್ಕೆ ನಿರ್ದೇಶಕ ಸಿದ್ದ್ರುವ್ ಸಿದ್ದು, ಸಂತೋಷ್ ಮಾಯಪ್ಪ, ಪ್ರದೀಪ್ ಕುಮಾರ್ ಮಹಾಲಿಂಗಯ್ಯ, ರೇಣುಕಾ ಪ್ರಸಾದ್ ಅವರು ಬಂಡವಾಳ ಹಾಕಿದ್ದಾರೆ. ರಿತ್ವಿಕ್ ಮುರಳಿಧರನ್ ಸಂಗೀತ ನಿರ್ದೇಶನ ಮಾಡುತ್ತಿದ್ದು ಉದಯ್ ಲೀಲಾ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.