ಮಂಗಳವಾರ, ಡಿಸೆಂಬರ್ 7, 2021
20 °C

ಆ.27ಕ್ಕೆ ಕೃಷ್ಣ ಟಾಕೀಸ್‌ ರಿರಿಲೀಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರ ಕೋವಿಡ್ ಲಾಕ್‌ಡೌನ್‌ ಅನ್ನು ಸಡಿಲಿಸಿ, ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನ ಆರಂಭಿಸಲು ಒಪ್ಪಿಗೆ ನೀಡಿದರೂ ಚಿತ್ರಮಂದಿರಗಳು ಇನ್ನೂ ಕಳೆಗಟ್ಟಿಲ್ಲ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಶೇ.50 ನಿರ್ಬಂಧಿಸಿರುವುದು ಚಿತ್ರರಂಗವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈ ಸಂಕಷ್ಟದ ನಡುವೆಯೇ ಲಾಕ್‌ಡೌನ್‌ಗೆ ಮುಂಚೆ ಬಿಡುಗಡೆಯಾಗಿದ್ದ ನಟ ಅಜೇಯ್ ರಾವ್‌ ಅಭಿನಯದ ‘ಕೃಷ್ಣ ಟಾಕೀಸ್‌’ ಮತ್ತೆ ಮರುಬಿಡುಗಡೆಗೆ ಸಜ್ಜಾಗಿದೆ. 

ಆ.27ರಂದು ಈ ಚಿತ್ರವು ರಿರಿಲೀಸ್‌ ಆಗಲಿದೆ. ಚಲನಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ ಸಂದರ್ಭದಲ್ಲಿ ಆಗಸ್ಟ್‌ ಮೊದಲ ವಾರದಲ್ಲೇ ಚಿತ್ರದ ಮರುಬಿಡುಗಡೆಗೆ ಚಿತ್ರತಂಡವು ಸಿದ್ಧತೆ ನಡೆಸಿತ್ತು. ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಪ್ರೇಕ್ಷಕರ ಭರ್ತಿಗೆ ಸರ್ಕಾರ ಅವಕಾಶ ನೀಡಿ ಆದೇಶ ಹೊರಡಿಸಬಹುದು ಎಂದು ಚಿತ್ರತಂಡವು ಕಾಯುತ್ತಿತ್ತು. ಆದರೆ ಸರ್ಕಾರ ಈ ಕುರಿತು ಯಾವುದೇ ನಿರ್ಧಾರವನ್ನು ಇಲ್ಲಿಯವರೆಗೂ ತೆಗೆದುಕೊಳ್ಳದೇ ಇರುವುದರಿಂದ ಹಾಗೂ ಸೆಪ್ಟೆಂಬರ್‌ನಲ್ಲಿ ‘ಸಲಗ’, ‘ಭಜರಂಗಿ–2’ ಮುಂತಾದ ಬಿಗ್‌ಬಜೆಟ್‌ ಚಿತ್ರಗಳು ತೆರೆಗೆ ಬರುವ ಕಾರಣದಿಂದ ಆಗಸ್ಟ್‌ 27ರಂದೇ ಚಿತ್ರದ ಮರುಬಿಡುಗಡೆಗೆ ನಿರ್ಧರಿಸಲಾಗಿದೆ.  

‘ಕಳೆದ ಏಪ್ರಿಲ್ 16ರಂದು ಬಿಡುಗಡೆಯಾದ ನಮ್ಮ ಕೃಷ್ಣ ಟಾಕೀಸ್ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಪ್ರೇಕ್ಷಕರಿಂದ ಲಭ್ಯವಾಗಿತ್ತು. ಆ.27ರಂದು ಚಿತ್ರದ ರಿರಿಲೀಸ್‌ ಮಾಡುತ್ತಿದ್ದೇವೆ. ಮರಳಿ ಯತ್ನವ ಮಾಡು ಎನ್ನುವಂತೆ, ಲಾಕ್‌ಡೌನ್ ಮುಗಿದ ನಂತರದ ಮತ್ತೊಂದು ಪ್ರಯತ್ನ ನಮ್ಮದು’ ಎಂದು ಚಿತ್ರದ ನಿರ್ದೇಶಕ ವಿಜಯಾನಂದ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು