ಸೂತಕದ ಮನೆಯಲ್ಲಿ ನಕ್ಕ ವಿಡಿಯೊ ವೈರಲ್‌: ನಟರ ವಿರುದ್ಧ ವ್ಯಾಪಕ ಟೀಕೆ

7

ಸೂತಕದ ಮನೆಯಲ್ಲಿ ನಕ್ಕ ವಿಡಿಯೊ ವೈರಲ್‌: ನಟರ ವಿರುದ್ಧ ವ್ಯಾಪಕ ಟೀಕೆ

Published:
Updated:
Deccan Herald

ಸತ್ತವರ ಮನೆಯಲ್ಲಿ ನೀರವ ಮೌನ ಆವರಿಸಿರುತ್ತದೆ. ಅದಕ್ಕೆ ಅನುಗುಣವಾಗಿ, ಮಡಿದವರ ಅಂತ್ಯಕ್ರಿಯೆ ಅಥವಾ ಅಂತಿಮ ದರ್ಶನಕ್ಕೆ ಹೋದವರಿಗೆ ಸಮಾಧಾನ ಹೇಳಿ, ಅವರೊಡನೆ ಸಾಧ್ಯವಾದರೆ ಕಣ್ಣೀರು ಹಾಕಿ ಬರುವುದು ಸಹಜ. ಆದರೆ, ಈ ಮೂವರು ಅಲ್ಲಿಯೂ ನಗುವಿನ ಅಲೆಯನ್ನು ತೇಲಿಸಿ ನೆಟ್ಟಿಜನ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಯಾರ ಅಂತಿಮ ದರ್ಶನದಲ್ಲಿ, ಯಾರು ನಕ್ಕರು ಎಂದು ಯೋಚಿಸುತ್ತಿದ್ದೀರಾ? ಕಳೆದ ಸೋಮವಾರ ಹಿರಿಯ ನಟ ರಾಜ್‌ ಕಪೂರ್ ಅವರ ಪತ್ನಿ ಕೃಷ್ಣಾ ರಾಜ್ ಕಪೂರ್ ನಿಧನರಾಗಿದ್ದಾರೆ. ಅವರ ಅಂತಿಮ ದರ್ಶನಕ್ಕೆ ಬಾಲಿವುಡ್‌ನ ತಾರಾಗಣವೇ ಹೋಗಿತ್ತು. ಅಲ್ಲಿ  ಹೋಗಿದ್ದ  ನಟಿ ರಾಣಿ ಮುಖರ್ಜಿ, ನಟ ಅಮೀರ್ ಖಾನ್ ಹಾಗೂ ನಿರ್ದೇಶಕ ಕರಣ್ ಜೊಹರ್ ಏನೋ ಮಾತಾಡಿಕೊಂಡು ನಕ್ಕಿದ್ದಾರೆ. ಆ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿದ್ದು, ಸೂತಕದ ಮನೆಯಲ್ಲಿ ನಗುತ್ತಿರುವುದಕ್ಕೆ ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ.

ಅದು ನಗುವ ಸಮಯವಲ್ಲ ಹಾಗೂ ಸಂಧರ್ಭವೂ ಅಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು, ‘ಅವರೆಲ್ಲರೂ ಒಟ್ಟಾಗಿ ಸೇರಿ ನಗುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು’ ಎಂದು ಕಿಡಿಕಾರಿದರೆ, ಮತ್ತೊಬ್ಬರು, ‘ಸಿನಿಮಾ ರಂಗದ ಈ ಮೂವರು ಮೂರ್ಖರು ಕಪಟವೇಷಧಾರಿಗಳು. ಅವರಿಂದ ಯಾವುದೇ ಸಾಮಾನ್ಯ ಪರಿಜ್ಞಾನವನ್ನು ನೀರಿಕ್ಷಿಸಲಾಗದು’ ಎಂದು ಗುಡುಗಿದ್ದಾರೆ.

87 ವರ್ಷದ ಕೃಷ್ಣರಾಜ್ ಕಪೂರ್ ಅವರ ಅಂತಿಮ ದರ್ಶನಕ್ಕೆ ಬಾಲಿವುಡ್‌ನ ಅನೇಕ ಗಣ್ಯರು ಸೇರಿದ್ದರು. ಅವರ ಪೈಕಿ, ರಾಣಿ ಮುಖರ್ಜಿ, ಅಮೀರ್ ಖಾನ್ ಹಾಗೂ ಕರಣ್ ಜೊಹರ್ ಸಹ ಇದ್ದರು. ಬಹಳ ದಿನಗಳ ನಂತರ ಒಟ್ಟಿಗೆ ಸೇರಿದ ಸ್ನೇಹಿತರು ಉಭಯಕುಶಲೋಪರಿಯಲ್ಲಿ ತೊಡಗಿಕೊಂಡಂತೆ, ನಗೆಗಡಲಲ್ಲಿ ಮುಳುಗಿ ಹೋದಂತೆ ಕಾಣುತ್ತಿದ್ದರು. 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 2

  Frustrated
 • 5

  Angry

Comments:

0 comments

Write the first review for this !