ಶನಿವಾರ, ಡಿಸೆಂಬರ್ 7, 2019
25 °C

ಕೃತಿಗೆ ಲವ್‌ ಆಗಿದೆ!

Published:
Updated:

ಕನ್ನಡದಿಂದ ಬಾಲಿವುಡ್‌ಗೆ ಹಾರಿದ ಮುದ್ದು ಮುಖದ  ನಟಿ ಕೃತಿ ಕರಬಂದಗೆ ಲವ್ ಆಗಿದೆ. ಹೌದು, ಈ ವಿಷಯವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

ಕಳೆದೊಂದು ವರ್ಷದಿಂದ ಬಾಲಿವುಡ್‌ ನಟ ಪುಲ್ಕಿತ್‌ ಸಾಮ್ರಾಟ್‌ ಜತೆ ಸುತ್ತಾಡುತ್ತಿದ್ದ ಕೃತಿ ಬಗ್ಗೆ ಗಾಸಿಪ್‌ ಹರಿದಾಡುತ್ತಿದ್ದವು. ಆದರೆ, ಈ ಜೋಡಿ ಎಲ್ಲಿಯೂ ಡೇಟಿಂಗ್‌ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಮಾಧ್ಯಮದವರ ಪ್ರಶ್ನೆಗಳಿಗೆ ಅಂತಹದ್ದು ಏನು ಇಲ್ಲ ಎಂದು ಹೇಳಿದ್ದರು. 

ಇದೀಗ ಅವರೇ ಡೇಟಿಂಗ್‌ನಲ್ಲಿ ಇರುವುದನ್ನು ಒಪ್ಪಿಕೊಂಡಿದ್ದಾರೆ. ‘ಇದು ಗಾಸಿಪ್‌ ಅಲ್ಲ, ನಿಜ’ ಎಂದು ಸೌಂದರ್ಯ ಮತ್ತು ಪ್ರತಿಭೆಯ ಪಾಕದಂತಿರುವ ಕೃತಿ ಕರಬಂದ ದೃಢಪಡಿಸಿದ್ದಾರೆ. 

ಕನ್ನಡದಲ್ಲಿ ಗೂಗ್ಲಿಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಕೃತಿ, ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನಲ್ಲಿ ‘ಪಾಗಲ್‌ಪಂತಿ’ ಚಿತ್ರದಲ್ಲಿ ತನ್ನೊಂದಿಗೆ ನಟಿಸಿದ್ದ ಪುಲ್ಕಿತ್‌ ಅವರನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾರೆ.   

ಈ ವಿಷಯವನ್ನು ಮೊದಲು ನನ್ನ ಪೋಷಕರಿಗೆ ಈ ವಿಷಯ ತಿಳಿಸಿರುವುದಾಗಿ ಹೇಳಿರುವ ಆಕೆ,  ಪುಲ್ಕಿತ್‌ ಜೊತೆ ಇರುವ ಹಲವು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಕೆಲವರಿಗೆ ಪ್ರೀತಿ ನಿವೇದಿಸಿಕೊಳ್ಳಲು ಐದು ವರ್ಷ ಬೇಕಾಗಬಹುದು. ಇನ್ನೂ ಕೆಲವರಿಗೆ ಐದು ತಿಂಗಳು ಸಾಕು. ನಾನು ಎರಡನೇ ವರ್ಗಕ್ಕೆ ಸೇರಿದವಳು ಎಂದು ಕೃತಿ ಹೇಳಿದ್ದಾರೆ.

ಈ ಹಿಂದೆ ಪುಲ್ಕಿತ್‌,  ಶ್ವೇತಾ ಅವರನ್ನು ಮದುವೆಯಾಗಿದ್ದರು. ವಿವಾಹವಾಗಿ ಒಂದೇ ವರ್ಷದಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ ನಟಿ ಯಾಮಿ ಗೌತಮಿ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿ ಹರಡಿದ್ದವು.

ಪುಲ್ಕಿತ್‌ ಸಾಮ್ರಾಟ್‌ ಮತ್ತು ಕೃತಿ ಪರಸ್ಪರ ಪ್ರೀತಿಸುತ್ತಿರುವ ವಿಷಯ ಈ ಮೊದಲೇ ತನಗೆ ಗೊತ್ತಿತ್ತು ಎಂದು ‘ಪಾಗಲ್‌ಪಂತಿ’ ನಟ ಜಾನ್‌ ಅಬ್ರಾಹಂ ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು