ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕ್ಕಾಗಿ ತೂಕ ಏರಿಸಿಕೊಂಡ ಕೃತಿ

krithi, entertainment
Last Updated 26 ಜನವರಿ 2020, 9:54 IST
ಅಕ್ಷರ ಗಾತ್ರ

ಬಾಲಿವುಡ್ ನಟಿ ಕೃತಿ ಸನಾನ್‌ ತಮ್ಮ ಮುಂದಿನ ಚಿತ್ರ ‘ಮಿಮಿ’ ಪಾತ್ರಕ್ಕಾಗಿ 15 ಕಿ.ಲೋ ದೇಹತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಬಾಡಿಗೆ ತಾಯಿ ಪಾತ್ರವನ್ನು ಮಾಡುತ್ತಿದ್ದಾರೆ.

ಈ ಚಿತ್ರವನ್ನು ಲಕ್ಷ್ಮಣ್‌ ಉಟೇಕರ್‌ ನಿರ್ದೇಶಿಸುತ್ತಿದ್ದಾರೆ. ಇದು ಮರಾಠಿಯ ‘ಮಲಾ ಆಯಿ ವ್ಯಹ್ಚೆ‘ ಚಿತ್ರದ ರಿಮೇಕ್ ಎನ್ನಲಾಗಿದೆ. ಈ ಮರಾಠಿ ಸಿನಿಮಾಕ್ಕೆ 2011ರಲ್ಲಿ ಅತ್ಯುತ್ತಮ ಕಥಾ ಚಿತ್ರ ಪ್ರಶಸ್ತಿ ಲಭಿಸಿದೆ.

‘ಈ ಚಿತ್ರದ ಕತೆ ನನ್ನ ಹೃದಯಕ್ಕೆ ಅತಿ ಸಮೀಪವಾದುದು, ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನ ಮಾಡುತ್ತೇನೆ’ ಎಂದು ಕೃತಿ ಹೇಳಿದ್ದಾರೆ.

ತೂಕ ಹೆಚ್ಚಿಸಿಕೊಂಡಿರುವುದರ ಬಗ್ಗೆ ಮಾತನಾಡಿರುವ ಅವರು, ‘ಈ ರೀತಿ ಚಿತ್ರಕ್ಕಾಗಿ ಬರೋಬ್ಬರಿ ತೂಕ ಏರಿಸಿಕೊಳ್ಳುವುದು ನನಗೆ ತೀರಾ ಹೊಸತು. ದೊಡ್ಡ ಚಾಲೆಂಜ್ ಆಗಿತ್ತು. ಕಡಿಮೆ ಸಮಯದಲ್ಲಿ ತೂಕ ಹೆಚ್ಚಿಸಿಕೊಳ್ಳಲು ನಾನು ಕೊಬ್ಬಿರುವ ಆಹಾರವನ್ನು ಹೆಚ್ಚು ಸೇವಿಸುತ್ತಿದ್ದೆ’ ಎಂದು ಹೇಳಿದ್ದಾರೆ.

ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಸಾಯ ತಮ್‌ಹಂಕಾರ್‌ ಹಾಗೂ ಪಂಕಜ್‌ ತ್ರಿಪಾಠಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT