ಶುಕ್ರವಾರ, ಆಗಸ್ಟ್ 12, 2022
26 °C

ಕೃತಿ ಸನೊನ್ ಅವರ ಚಿತ್ರ 'ಮಿಮಿ': ಜು.30ಕ್ಕೆ ನೆಟ್‌ಫ್ಲಿಕ್ಸ್, ಜಿಯೊ ಸಿನಿಮಾದಲ್ಲಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬಾಲಿವುಡ್ ನಟಿ ಕೃತಿ ಸನೊನ್ ಅವರ ಮುಂದಿನ ಚಿತ್ರ 'ಮಿಮಿ' ಚಿತ್ರವು ಸಾಕಷ್ಟು ಸಂಚಲನ ಸೃಷ್ಟಿಸುತ್ತಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಚಿತ್ರದಲ್ಲಿ ಕೃತಿ ಬಾಡಿಗೆ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಪಾತ್ರಕ್ಕಾಗಿ 15 ಕಿಲೋ ತೂಕವನ್ನು ಹೆಚ್ಚಿಸಿಕೊಂಡಿದ್ದರು.

ಜುಲೈ 10ರ ಶನಿವಾರ ಚಿತ್ರದ ನಿರ್ಮಾಪಕರು 'ಮಿಮಿ' ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ. ಮಿಮಿ ಜು. 30ರಂದು ನೆಟ್‌ಫ್ಲಿಕ್ಸ್ ಮತ್ತು ಜಿಯೋ ಸಿನೆಮಾದಲ್ಲಿ ಮೊದಲ ಪ್ರದರ್ಶನ ಕಾಣಲಿದೆ. ಚಿತ್ರದಲ್ಲಿ ಕೃತಿ ಜೊತೆಗೆ ಪಂಕಜ್ ತ್ರಿಪಾಠಿ, ಸಾಯಿ ತಮಹಂಕರ್, ಸುಪ್ರಿಯಾ ತ್ರಿಪಾಠಿ ಮತ್ತು ಮನೋಜ್ ಪಹ್ವಾ ತೆರೆಹಂಚಿಕೊಂಡಿದ್ದಾರೆ.

ಕೃತಿ ಸನೊನ್ ಅವರು ಜುಲೈ 8ರ ಶುಕ್ರವಾರದಂದು ಮಿಮಿಯ ಟ್ರೈಲರ್ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದರು. ಅದಾದ ಒಂದು ದಿನದ ನಂತರ, ತಮ್ಮ ಚಿತ್ರದ ಬಿಡುಗಡೆಯ ದಿನಾಂಕವನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಹಂಚಿಕೊಂಡಿದ್ದಾರೆ. 'ಅನಿರೀಕ್ಷಿತ ತಿರುವು ಅವಳ ಜೀವನವನ್ನು ಬದಲಾಯಿಸುತ್ತದೆ! ಇನ್ನು 3 ದಿನಗಳಲ್ಲಿ ಮಂಗಳವಾರ ಮಿಮಿ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ! ನೀವು ಅಂದುಕೊಂಡಿರುವಂತೆ ಏನೂ ಇಲ್ಲ! ಮಿಮಿ ಜುಲೈ 30 ರಂದು ಜಿಯೋ ಸಿನೆಮಾ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ' ಎಂದು ಬರೆದಿದ್ದಾರೆ.

ಮಿಮಿಯ ಟೀಸರ್ ಜೊತೆಗೆ, ಜುಲೈ 13 ರಂದು ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಲಿದೆ ಎಂದು ಕೃತಿ ಸನೊನ್ ಘೋಷಿಸಿದ್ದರು. ಟೀಸರ್ ಕೃತಿ ಸನೊನ್ ಅವರ ಪಾತ್ರ ಮಿಮಿ ಗರ್ಭಧಾರಣೆಯ ವಿವಿಧ ಹಂತಗಳನ್ನು ತೋರಿಸುತ್ತದೆ.

ಚಿತ್ರದಲ್ಲಿ ತನ್ನ ಪಾತ್ರದ ಬಗ್ಗೆ ಮಾತನಾಡುತ್ತಾ ಕೃತಿ ಸನೊನ್, 'ನಾನು ತುಂಬಾ ಉತ್ಸುಕಳಾಗಿದ್ದೇನೆ, ಇದು ಬಾಡಿಗೆ ತಾಯ್ತನದ ವಿಷಯವನ್ನು ಆಧರಿಸಿದೆ ಆದರೆ ವಾಸ್ತವವಾಗಿ ಇದು ನಟಿಯಾಗಲು ಬಯಸುವ ಈ ಯುವತಿಯ ಕಥೆ. ಅವಳು ಮಂಡವಾದಲ್ಲಿ ನರ್ತಕಿ ಮತ್ತು ಅವಳು ದಂಪತಿಗೆ ಬಾಡಿಗೆ ತಾಯಿಯಾಗುವ ಮೂಲಕ ಕೊನೆಗೊಳ್ಳುತ್ತಾಳೆ. ನಂತರದ ವಿಚಾರಗಳು ಅವಳ ಜೀವನವನ್ನು ಬದಲಾಯಿಸುತ್ತವೆ ಮತ್ತು ಒಬ್ಬ ವ್ಯಕ್ತಿಯಾಗಿಯೂ ಅವಳನ್ನು ಬದಲಾಯಿಸುತ್ತವೆ' ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು