‘ಕುಂಟ ಕೋಣ ಮೂಕ ಜಾಣ’ನ ಬೆಳ್ಳಿತೆರೆ ಪ್ರವೇಶ

7

‘ಕುಂಟ ಕೋಣ ಮೂಕ ಜಾಣ’ನ ಬೆಳ್ಳಿತೆರೆ ಪ್ರವೇಶ

Published:
Updated:
Deccan Herald

ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಜೇವರ್ಗಿ ರಾಜಣ್ಣ ರಚನೆಯ ‘ಕುಂಟ ಕೋಣ ಮೂಕ ಜಾಣ’ ಹಾಸ್ಯ ನಾಟಕ ರಾಜ್ಯದಾದ್ಯಂತ ಹದಿನೈದು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಈಗ ಈ ನಾಟಕ ಜನರನ್ನು ನಗೆಗಡಲಲ್ಲಿ ತೇಲಿಸಲು ಸಿನಿಮಾವಾಗಿ ಬರುತ್ತಿದೆ. 

ಈ ಹಾಸ್ಯ ನಾಟಕ ಮೈಸೂರು, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ದಾವಣಗೆರೆ, ಕಲಬುರ್ಗಿ, ಹಾವೇರಿ, ಕಾರವಾರ ಸೇರಿದಂತೆ ರಾಜ್ಯದ ವಿವಿಧೆಡೆ ನೂರಾರು ಪ್ರದರ್ಶನ ಕಂಡಿದೆ. ಲಕ್ಷಾಂತರ ಪ್ರೇಕ್ಷಕರ ಪ್ರಶಂಸೆಗೂ ಭಾಜನವಾಗಿದೆ. ಶಿವಮೊಗ್ಗದ ಪೋಸ್ಟ್‌ ಮಾಸ್ಟರ್‌ವೊಬ್ಬರು 150 ಬಾರಿ ಈ ನಾಟಕ ವೀಕ್ಷಿಸಿ ಬಹುಮಾನ ಗಿಟ್ಟಿಸಿಕೊಂಡಿದ್ದರು.

ಜನಪ್ರಿಯ ನಾಟಕವೊಂದು ಬೆಳ್ಳಿತೆರೆಯ ಮೇಲೆ ಮೂಡಿಬರಲು ವೈಭವ್‍ ಬಸವರಾಜ್ ಬಂಡವಾಳ ಹೂಡಿದ್ದಾರೆ. ಅವರಿಗೆ ಬಳಿಗಾರ್ ಹಾಗೂ ದಯಾನಂದ್ ರಾಯ್ಕರ್ ಸಾಥ್ ನೀಡಿದ್ದಾರೆ. ಜೇವರ್ಗಿ ರಾಜಣ್ಣ ಮತ್ತು ಬಸವರಾಜ್ ಈ ಚಿತ್ರ ನಿರ್ದೇಶಿಸಿದ್ದಾರೆ.

ರಂಗಭೂಮಿ ಕಲಾವಿದರಾದ ದಯಾನಂದ್ ಹರೀಶ್, ಮಾರುತಿ, ಪ್ರಿಯಾ, ಶ್ವೇತಾ ಬಿಳಗಿ, ರಾಕ್‌ಲೈನ್ ಸುಧಾಕರ್, ಸತ್ಯಜಿತ್ ಬಣ್ಣಹಚ್ಚಿದ್ದಾರೆ. ಕುರುಡ, ಮೂಗ, ಕುಂಟನ ನಡುವೆ ಸಿಕ್ಕ ರಂಗಿಯ ಪಾಡೇನು ಎಂಬುದೇ ಚಿತ್ರದ ಸಾರಾಂಶ. ತೆರೆಯ ಮೇಲೆ ಈ ಚಿತ್ರದ ಹಾಸ್ಯರಸವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಡಿಸೆಂಬರ್‌ವರೆಗೂ ಕಾಯಬೇಕಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !