ಡಾಲಿ ಧನಂಜಯ್ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ' ಚಿತ್ರದ ಟೀಸರ್ ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಐರಾ ಫಿಲ್ಮ್ಸ್ ಪ್ರೊಡಕ್ಷನ್ ಸಂಸ್ಥೆ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಈ ಚಿತ್ರದಲ್ಲಿ ಡಾಲಿ ಅವರು ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ‘ಮೈ ಡಿಯರ್ ಗೆಳೆಯ ವರ್ಲ್ಡ್ ಫೇಮಸ್ ಕರ್ನಾಟಕ ವೆಪನ್ ದಿ ಲಾಂಗ್..ಇದನ್ನು ನಾನು ಕೈಯಲ್ಲಿ ಹಿಡಿದ ಮೇಲೆ ಹುಡುಗರು ನನ್ನ ಕೈ ಹಿಡಿದಿದ್ದು’ ಎನ್ನುವ ಡೈಲಾಗ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಈ ಚಿತ್ರವನ್ನು ಚನ್ನರಾಜ ಹಟ್ಟಿಹೊಳಿ ಹಾಗೂ ಮೃಣಾಲ್ ಹೆಬ್ಬಾಳಕರ ಅವರು ಐರಾ ಫಿಲ್ಮ್ಸ್ ಹಾಗೂ ದಿ ರಾಯಲಾ ಸ್ಟುಡಿಯೊಸ್ ಬ್ಯಾನರ್ ಅಡಿ ಜಂಟಿಯಾಗಿ ನಿರ್ಮಿಸಿದೆ. ಶಂಕರ್ ಗುರು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸಂಗೀತಾ ನಿರ್ದೇಶಕರಾಗಿ ವಾಸುಕಿ ವೈಭವ್ ಮತ್ತು ಗೋಕುಲ್ ಅಭಿಷೇಕ್ ಅವರು ಕಾರ್ಯನಿರ್ವಹಿಸಿದ್ದಾರೆ.

ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ, ಹಿರಿಯ ನಟಿ ಉಮಾಶ್ರೀ, ರಂಗಾಯಣ ರಘು, ನಾಗಭೂಷಣ,ಸಾಧು ಕೋಕಿಲ,ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.