ಭಾರತದ ಜನಪ್ರಿಯ ಗಾಯಕಿ ಆಶಾ ಭೋಸ್ಲೆ (92) ಅವರು ಭಾನುವಾರ (ಏಪ್ರಿಲ್ 12) ನಿಧನರಾಗಿದ್ದಾರೆ. ಬಾಲಿವುಡ್ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿ ಅನೇಕರು ಆಶಾ ಅವರ ಜೊತೆಗಿನ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಆಶಾ ಅವರ ಜೊತೆಗಿನ ನೆನಪು ಮೆಲುಕು ಹಾಕಿರುವ ನಟ ಶಾರುಕ್ ಖಾನ್, ‘ಅವರ ಅಗಲಿಕೆ ನಿಜಕ್ಕೂ ಬೇಸರದ ಸಂಗತಿ, ಭಾರತೀಯ ಚಿತ್ರರಂಗದಲ್ಲಿ ಅವರ ಕಂಠ ಭದ್ರ ಬುನಾದಿಯಾಗಿತ್ತು. ಅವರು ದೈಹಿಕವಾಗಿ ನಮ್ಮಿಂದ ದೂರವಾಗಿದ್ದರೂ ಅವರ ಹಾಡುಗಳು ಪ್ರತಿಧ್ವನಿಸುತ್ತಲೇ ಇರುತ್ತದೆ. ಅವರು ನನ್ನನ್ನು ಭೇಟಿ ಆದಗಲೆಲ್ಲಾ ನನಗೆ ಅಪಾರ ಪ್ರೀತಿ ತೋರುತ್ತಿದ್ದರು’ ಎಂದಿದ್ದಾರೆ.

ಭೋಸ್ಲೆ ಅವರನ್ನು ಸ್ಮರಿಸಿದ ಸಲ್ಮಾನ್ ಖಾನ್, ‘ಆಶಾ ಜೀ ಅವರ ನಿಧನ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ನಿಮ್ಮ ಹಾಡುಗಳು ಮುಂಬರುವ ಪೀಳಿಗೆಗಳಿಗೆ ಸದಾ ಸ್ಫೂರ್ತಿ ಆಗಲಿವೆ’ ಎಂದು ಬರೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಹೃತಿಕ್ ರೋಷನ್ ಅವರು ಆಶಾ ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘ನಾವು ಅಮೂಲ್ಯ ರತ್ನವನ್ನು ಕಳೆದುಕೊಂಡಿದ್ದೇವೆ. ಆಶಾ ಜಿ, ಅವರು ಕೇವಲ ಒಬ್ಬ ದಿಗ್ಗಜರಷ್ಟೇ ಅಲ್ಲ. ಗುಣವಂತೆ ಆಗಿದ್ದರು. ಅವರು ಸದಾ ನನ್ನ ಜೀವನದಲ್ಲಿ ಶಕ್ತಿಯಂತಿದ್ದರು. ಯಾವಾಗಲೂ ನನ್ನ ಹಿತವನ್ನೇ ಬಯಸುತ್ತಿದ್ದರು. ನನಗೆ ಧೈರ್ಯ ತುಂಬುತ್ತಿದ್ದ ಅವರು, ನನ್ನನ್ನು ಭೇಟಿ ಆದಾಗ ತುಂಬಾ ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದರು. ನಿಮ್ಮನ್ನು ‘ಭಾರತೀಯ ಹಿನ್ನೆಲೆ ಗಾಯನದ ಮಹಾರಾಣಿ‘ ಎಂದರೂ ತಪ್ಪಗಲಾರದು’ ಎಂದು ಹೇಳಿಕೊಂಡಿದ್ದಾರೆ.

ಗಾಯಕಿ ಆಶಾ ಅವರನ್ನು ಕುರಿತು ಶ್ರೇಯಾ ಘೋಷಲ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ‘ನಾವಿಂದು ಅದ್ಭುತ ಧ್ವನಿಯನ್ನು ಕಳೆದುಕೊಂಡಿದ್ದೇವೆ. ಸಂಗೀತಕ್ಕೆ ಹೊಸ ವ್ಯಾಖ್ಯಾನ ನೀಡಿದ ಚೇತನ ನಮ್ಮನ್ನು ಅಗಲಿದೆ. ಅವರ ಹಾಡುಗಳನ್ನು ಕೇಳುತ್ತಾ ನಾನು ಬೆಳೆದಿದ್ದೇನೆ. ಅವರು ಬರೀ ಸ್ಫೂರ್ತಿ ಮಾತ್ರವಲ್ಲ ಸಂಗೀತದ ಆತ್ಮ ಆಗಿದ್ದರು. ಅವರ ಧ್ವನಿ ಯಾವಗಲೂ ಪ್ರತಿಧ್ವನಿಸುತ್ತಲೇ ಇರುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.