ಭಾನುವಾರ, ಸೆಪ್ಟೆಂಬರ್ 19, 2021
26 °C

ಆರ್ಟಿಕಲ್ 21 : ವಿಭಿನ್ನ ಲುಕ್‌ನಲ್ಲಿ ಲೆನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಲೋಟಕ್ಕೆ ಸುರಿಯುತ್ತಾ, ಸಿಗರೇಟು ಸೇದುತ್ತಿರುವ ಮಹಿಳೆ. ಆರ್ಟಿಕಲ್ 21 ಎಂಬ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾದಾಗ ಜನರು ಅಚ್ಚರಿಯಿಂದ ನೋಡಿದ್ದು ಆ ಮಹಿಳೆಯ ಮುಖವಾಗಿತ್ತು. ಆಕೆಯ ಹೆಸರು ತಾಮರ. ಹಳೆ ಪಾತ್ರೆ, ಕಬ್ಬಿಣ ಎಂದು ಕೂಗುತ್ತಾ ಗುಜರಿ ವಸ್ತುಗಳನ್ನು ಸಂಗ್ರಹಿಸುವ ತಮಿಳುನಾಡಿನ ಹೆಂಗಸು. ಈ ಕಥಾಪಾತ್ರಕ್ಕೆ ಜೀವ ತುಂಬಿರುವುದು ನಟಿ ಲೆನಾ. ಎನ್ನ್ ನಿಂಡೆ ಮೊಯ್ದೀನ್ ಎಂಬ ಚಿತ್ರದಲ್ಲಿ ಮೊಯ್ದೀನ್ ಕಥಾಪಾತ್ರದ ಅಮ್ಮನಾಗಿ ನಟಿಸಿದಾಕೆ. ಸದಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುನ ಲೆನಾ, ಈ ಬಾರಿ ತಾಮರ ಕಥಾಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಭಾರತದ ಸಂವಿಧಾನದ ಆರ್ಟಿಕಲ್ 21 ವ್ಯಕ್ತಿ ಸ್ವಾತಂತ್ರ್ಯ ಮತ್ತು ಬದುಕಿನ ಹಕ್ಕುಗಳ ಬಗ್ಗೆ ಹೇಳುತ್ತದೆ. ಇದನ್ನೇ ಆಧಾರವಾಗಿರಿಸಿ ನಮ್ಮ ಸಮಾಜದಲ್ಲಿರುವ ವಿವಿಧ ಸ್ತರಗಳ ಜನರ ಜೀವನದ ಕತೆ ಹೇಳುವ ಚಿತ್ರವಾಗಿದೆ ಇದು.

ತಾಮರ ಕಥಾಪಾತ್ರಕ್ಕಾಗಿ ತೂಕ ಇಳಿಸಿಕೊಂಡಿರುವ ಲೆನಾ, ಮೇಕಪ್ ಮಾಡಿ ಕನ್ನಡಿ ಮುಂದೆ ನಿಂತಾಗ ನನಗೆ ನನ್ನ ಗುರುತೇ ಸಿಗಲಿಲ್ಲ ಅಂತಾರೆ. ಕೊಚ್ಚಿ ಬ್ರಾಡ್‌ವೇನಲ್ಲಿ ಹಿಡನ್ ಕ್ಯಾಮೆರಾ ಇರಿಸಿ ಕೆಲವೊಂದು ದೃಶ್ಯಗಳನ್ನು ಶೂಟ್ ಮಾಡಲಾಗಿತ್ತು. ಅಲ್ಲಿ ಸೀರೆ ಮಾರುತ್ತಿದ್ದ ವ್ಯಕ್ತಿಯೊಬ್ಬರು ನನ್ನಲ್ಲಿ 100 ರೂಪಾಯಿಗೆ ಸೀರೆ ತೆಗೊಳ್ಳಿ ಅಂದರು. ಅವರ ಜತೆ ಸುಮ್ಮನೆ ಚೌಕಾಸಿ ಮಾಡಿದೆ. ಇನ್ನೊಂದು ಅಂಗಡಿಗೆ ಹೋದಾಗ ಆ ಅಂಗಡಿಯವರು ಬೈದು ಓಡಿಸಿದರು. ಅದೆಲ್ಲವೂ ಸಿನಿಮಾ ಶೂಟಿಂಗ್ ವೇಳೆ ನಾನು ಅನುಭವಿಸಿದ ಖುಷಿಯ ಕ್ಷಣಗಳಾಗಿದ್ದವು.

ಕೋಯಿಕ್ಕೋಡ್ ರಶೀದ್ ಅಹಮ್ಮದ್ ಅವರು ತಾಮರ ಕಥಾಪಾತ್ರದ ಮೇಕಪ್ ಮಾಡಿದ್ದು. ಈ ಬಗ್ಗೆ ಜನರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ವಾಕ್ ವಿದ್ ಸಿನಿಮಾ ಪ್ರೆಸೆನ್ಸ್ ಬ್ಯಾನರ್‌ನಲ್ಲಿ ಧನೂಪ್, ಪ್ರಸೀನಾ ನಿರ್ಮಾಣ ಮಾಡಿರುವ ಆರ್ಟಿಕಲ್ 21 ಸಿನಿಮಾವನ್ನು ಲೆನಿನ್ ಬಾಲಕೃಷ್ಣನ್ ನಿರ್ದೇಶಿಸಿದ್ದಾರೆ.
ಜೋಜು ಜಾರ್ಜ್, ಅಜು ವರ್ಗೀಸ್, ಬಿನೀಶ್ ಕೊಡಿಯೇರಿ, ಮಾಸ್ಟರ್ ಲೆಸ್ವಿನ್, ಮಾಸ್ಟರ್ ನಂದನ್ ರಾಜೇಶ್ ಪ್ರಧಾನ ಪಾತ್ರದಲ್ಲಿದ್ದು ಏಪ್ರಿಲ್‌ನಲ್ಲಿ ಚಿತ್ರ ತೆರೆಕಾಣಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು