ಮಂಗಳವಾರ, ಜನವರಿ 18, 2022
23 °C

 ‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’: ಚಿತ್ರೀಕರಣ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಿರ್ದೇಶಕ ಕರಣ್ ಜೋಹರ್‌ ಅವರ ಹೊಸ ಚಿತ್ರ ‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಚಿತ್ರದ ಚಿತ್ರೀಕರಣ ಆರಂಭವಾಗಿದೆ.

ರಣವೀರ್‌ ಸಿಂಗ್‌ – ಆಲಿಯಾ ಭಟ್‌ ಮುಖ್ಯ ಭೂಮಿಕೆಯ  ಈ ಸಿನಿಮಾದ ಚಿತ್ರೀಕರಣ ದೆಹಲಿಯ ಕುತಾಬ್‌ ಮಿನಾರ್‌ ಸಮೀಪದಲ್ಲಿ ಆರಂಭವಾಗಿದೆ. ಸಿನಿಮಾದ ಶೂಟಿಂಗ್‌ನಲ್ಲಿ ರಣವೀರ್‌ ಹಾಗೂ ಆಲಿಯಾ ಭಟ್‌ ಆಗಮಿಸಿದ್ದಾರೆ. ಚಿತ್ರೀಕರಣದಲ್ಲಿ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

2016ರಲ್ಲಿ ‘ಏ ದಿಲ್‌ ಹೈ ಮುಷ್ಕಿಲ್‌’ ಪ್ರೇಮ ಕಥೆಯ ಬಳಿಕ ಕರಣ್‌ ಕೆಲಕಾಲ ನಿರ್ದೇಶನದಿಂದ ದೂರ ಉಳಿದಿದ್ದರು. ಚಿತ್ರ ಸಾಹಿತ್ಯ (ಕಥೆ, ಚಿತ್ರಕಥೆ)ವನ್ನು ಇಶಿತಾ ಮೊಯಿತ್ರಾ, ಶಶಾಂಕ್‌ ಖೈತಾನ್‌ ಮತ್ತು ಸುಮಿತ್‌ ರಾಯ್‌ ಬರೆದಿದ್ದಾರೆ.

ಜೋಹರ್‌ ಅವರು 2012ರಲ್ಲಿ ಅಲಿಯಾ ಭಟ್‌ ಅವರ ‘ಸ್ಟೂಟೆಂಡ್‌ ಆಫ್‌ ದಿ ಇಯರ್‌’ ಚಿತ್ರವನ್ನು ನಿರ್ದೇಶಿಸಿದ್ದರು. ರಣವೀರ್‌ ಅವರೊಂದಿಗೆ ಜೋಹರ್‌ ಅವರ ಮೊದಲ ಚಿತ್ರವಿದು. ಈ ಚಿತ್ರ 2022ರಲ್ಲಿ ಬಿಡುಗಡೆ ಆಗಲಿದೆ.

ರಾಕಿ ಮತ್ತು ರಾಣಿ ಎಂದಿನ ಪ್ರೇಮ ಕಥೆಗಳನ್ನು ಮರು ವ್ಯಾಖ್ಯಾನಿಸಲಿದೆ. ಇದು ಎಂದಿನ ಸಾಮಾನ್ಯ ಪ್ರೇಮಕಥೆ ಅಲ್ಲ ಎಂದು ಜೋಹರ್ ಬಣ್ಣಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು