ಬಹುತೇಕ ಹೊಸಬರಿಂದಲೇ ಕೂಡಿರುವ ‘ಲೈಫ್ ಟುಡೇ’ ಚಿತ್ರದ ‘ನೀನೇ ನೀನೇ ನೋಡಲ್ಲಿ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಕಾಂತ ಕನ್ನಲ್ಲಿ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಶೀಘ್ರದಲ್ಲಿ ತೆರೆಗೆ ಬರಲಿದೆ.

ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಹಾಡು ಬಿಡುಗಡೆಗೊಂಡಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತವಿದೆ. ಕವಿರಾಜ್ ಸಾಹಿತ್ಯ ಬರೆದಿದ್ದು, ನಾಯಕ ಕಿರಣ್ ಆದಿತ್ಯ, ನಾಯಕಿ ಲೇಖಾ ಚಂದ್ರ ಈ ಗೀತೆಗೆ ನೃತ್ಯ ಮಾಡಿದ್ದಾರೆ.

‘ಸಂಬಂಧಗಳು ಮತ್ತು ಭಾವನೆಗಳು ಇದ್ದಾಗ ಸಿನಿಮಾ ಗೆಲ್ಲುತ್ತದೆ. ಅದೇ ರೀತಿಯ ಕಥಾವಸ್ತು ಹೊಂದಿರುವ ಚಿತ್ರವಿದು. ಇಲ್ಲಿನ ಸನ್ನಿವೇಶಗಳೆಲ್ಲ ಇಂದಿನ ಬದುಕಿನ ಪ್ರತಿಬಿಂಬದಂತಿದೆ. ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಿಸುತ್ತೇವೆ’ ಎಂದರು ನಿರ್ದೇಶಕ.

ಪ್ರದೀಪ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಯುಕ್ತಾ, ಕಾಕ್ರೋಚ್ ಸುಧಿ ಮುಂತಾದವರು ಚಿತ್ರದಲ್ಲಿದ್ದಾರೆ. ಗುರು ಪ್ರಸಾದ್ ಛಾಯಾಚಿತ್ರಗ್ರಹಣವಿದೆ.

‘ಇದೊಂದು ಮಹಿಳಾ ಪ್ರಧಾನ ಚಿತ್ರ. ಇದರಲ್ಲಿ ನನ್ನದು ಸಮಾಜಕ್ಕೆ ಸಂದೇಶ ಕೊಡುವ ಪಾತ್ರ. ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ದೊಡ್ಡ ಮಟ್ಟದಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶ ನಿರ್ಮಾಪಕರದ್ದು’ ಎಂದರು ಲೇಖಾ ಚಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.