ಇದು ಲೋಪರ್ಸ್‌ ಕಥೆ!

7

ಇದು ಲೋಪರ್ಸ್‌ ಕಥೆ!

Published:
Updated:
Deccan Herald

ಲೋಪರ್‌. ಈ ಶಬ್ದವನ್ನು ಬೈಗುಳ ರೂಪದಲ್ಲಿ ಕೇಳಿಸಿಕೊಂಡವರೇ ಹೆಚ್ಚು. ಇನ್ನು ಮುಂದೆ ಇದನ್ನು ಸಿನಿಮಾ ಶೀರ್ಷಿಕೆಯಾಗಿಯೂ ನೋಡುವ ಭಾಗ್ಯ ಕನ್ನಡಿಗರಿಗೆ ಲಭಿಸಲಿದೆ! ಇದು ಕೊಂಚ ಬದಲಾಗಿ ಲೋಪರ್ಸ್‌ ಎಂದಾದರೂ ಆಗಬಹುದು.

ಮೋಹನ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್ ಹೇಳಲಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ವಿವೇಕಾನಂದ ಪಾರ್ಕ್‌ನಲ್ಲಿ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಿತು. ಆದರೆ ಅಲ್ಲಿ ‘ಪ್ರೊಡಕ್ಷನ್‌ ನಂ. 26’ ಎಂದೇ ಹೇಳಿಕೊಳ್ಳಲಾಯ್ತು. ಇದಕ್ಕೂ ಒಂದು ಹಿನ್ನೆಲೆ ಇದೆ. ಅದನ್ನು ಮೋಹನ್‌ ಬಿಚ್ಚಿಟ್ಟರು. 

ಈ ಕಥೆ ಏಳು ಜನ ಅಲೆಮಾರಿಗಳದ್ದು. ಅಲೆಮಾರಿಗಳಿಗೆ ಇಂಗ್ಲಿಷಿನಲ್ಲಿ ಲೋಪರ್ಸ್‌ ಎಂದು ಕರೆಯಲಾಗುತ್ತದೆ. ಆದ್ದರಿಂದ ತಮ್ಮ ಚಿತ್ರಕ್ಕೆ ‘ಲೋಪರ್ಸ್‌’ ಎಂದೇ ಹೆಸರಿಡಬೇಕು ಎಂಬುದು ಅವರ ಬಯಕೆಯಾಗಿತ್ತು. ಆದರೆ ಈ ಶೀರ್ಷಿಕೆಯೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋದಾಗ ಶೀರ್ಷಿಕೆ ಇಡಲು ಒಪ್ಪಿಗೆ ಸಿಕ್ಕಿಲ್ಲ. ಬೇಕಾದರೆ ‘ಲೋಪರ್‌’ ಎಂದು ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ. 

‘ನನಗೆ– ಈ ಕಥೆಗೆ ಲೋಪರ್ಸ್‌ ಎಂಬ ಹೆಸರೇ ಹೆಚ್ಚು ಸೂಕ್ತವಾಗುತ್ತದೆ. ಆದ್ದರಿಂದ ಆ ಶೀರ್ಷಿಕೆಯೇ ಬೇಕು ಎಂಬುದು ನನ್ನ ಆಸೆ. ಅದನ್ನು ಕೊಡುವಂತೆ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದ್ದೇನೆ. ಏನಾಗುತ್ತದೋ ಗೊತ್ತಿಲ್ಲ. ಒಂದೊಮ್ಮೆ ಆ ಹೆಸರು ಸಿಕ್ಕಲ್ಲ ಎಂದಾದರೆ ಲೋಪರ್‌ ಎಂದು ಹೆಸರಿಟ್ಟುಕೊಂಡು ಸಿನಿಮಾ ಮಾಡುತ್ತೇನೆ. ಈ ಗೊಂದಲದ ಕಾರಣಕ್ಕಾಗಿಯೇ ಇನ್ನೂ ಹೆಸರು ಇಟ್ಟಿಲ್ಲ’ ಎಂದು ವಿವರಿಸಿದರು ಮೋಹನ್‌.

ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಮೋಹನ್ ಅವರೇ ಬರೆದಿದ್ದಾರೆ. ಬಿ.ಎನ್‌. ಗಂಗಾಧರ್‌ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. 

ನಾಲ್ಕು ನಾಯಕರು ಮತ್ತು ಮೂವರು ನಾಯಕಿಯರು ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಚೇತನ್‌, ಅರ್ಜುನ್‌ ಆರ್ಯ, ಮನು, ಕೆಂಪೇಗೌಡ, ಶ್ರಾವ್ಯಾ, ಸುಷ್ಮಾ ಮತ್ತು ಸಾಕ್ಷಿ ನಟಿಸುತ್ತಿದ್ದಾರೆ. 

‘ಮೊದಮೊದಲಿಗೆ ಇದೊಂದು ಹಾರರ್ ಅಥವಾ ಥ್ರಿಲ್ಲರ್‌ ಸಿನಿಮಾ ಅನಿಸುತ್ತದೆ. ಆದರೆ ಕೊನೆಯಲ್ಲಿ ಬೇರೆಯದೇ ತಿರುವು ಇದೆ’ ಎಂದು ವಿವರಿಸುತ್ತಾರೆ ಮೋಹನ್‌.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !