ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲವ್ 360’ ಚಿತ್ರ ತಂಡದಿಂದ ರೋಡ್ ಶೋ

Last Updated 1 ಆಗಸ್ಟ್ 2022, 2:58 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ: ಸ್ಥಳೀಯ ಯುವ ವೈದ್ಯ ಡಾ.ಪ್ರವೀಣ್ ನಟಿಸಿರುವ ‘ಲವ್ 360’ ಚಿತ್ರತಂಡ ಭಾನುವಾರ ಪಟ್ಟಣದಲ್ಲಿ ರೋಡ್ ಶೋ ನಡೆಸಿತು.

ಮಧ್ಯಾಹ್ನ 12ಗಂಟೆಗೆ ಎಪಿಎಂಸಿ ಉಪಮಾರುಕಟ್ಟೆ ಬಳಿ ಆಗಮಸಿದ ಚಿತ್ರ ತಂಡವನ್ನು ಅಭಿಮಾನಿಗಳು ಪಟಾಕಿ ಸಿಡಿಸಿ ಬರಮಾಡಿಕೊಂಡರು. ನಂತರ ಝಾಂಜ್‌ ಮೇಳದೊಂದಿಗೆ ತೆರೆದ ಜೀಪಿನಲ್ಲಿ ಆರಂಭವಾದ ರೋಡ್ ಶೋ ಪಟ್ಟಣ ಪ್ರಮುಖ ರಸ್ತೆಗಳಲ್ಲಿ ಸಾಗಿ ಮುಖ್ಯವೃತ್ತಕ್ಕೆ ಬಂದಿತು.

ಮುಖ್ಯವೃತ್ತದಲ್ಲಿ ಅಪ್ಪು ಭಾವಚಿತ್ರಕ್ಕೆ ನಾಯಕ ನಟ ಪ್ರವೀಣ್ ಮಾಲಾರ್ಪಣೆ ಮಾಡುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಪಟ್ಟಣ ಪಂಚಾಯ್ತಿ ಕಾರ್ಯಾಲಯದವರೆಗೆ ಸಾಗಿದ ರೋಡ್ ಶೋ ಪುನಃ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಿತು. ಅಲ್ಲಿ ಪೂಜೆ ಸಲ್ಲಿಸಿದರು.

ಚಿತ್ರ ತಂಡವನ್ನು ವೀಕ್ಷಿಸಲು ಎರಡು ಬದಿ ನೂರಾರು ಜನ ಸೇರಿದ್ದರು. ಮೆರವಣಿಗೆಯಲ್ಲಿ ನಾಯಕ ನಟ ಪ್ರವೀಣ್ ಅವರೊಂದಿಗೆ ನಾಯಕಿ ರಚನಾ, ನಿರ್ದೇಶಕ ಶಶಾಂಕ್, ನಿರ್ಮಾಪಕಿ ಡಾ.ಮಂಜುಳಾ, ಸಹೋದರ ಡಾ.ಪ್ರದೀಪ್ ಜೊತೆಗಿದ್ದರು.

ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿರ್ದೇಶಕ ಶಶಾಂಕ್, ನಿಮ್ಮೂರಿನ ವೈದ್ಯ ದಂಪತಿಯ ಪುತ್ರ ಯುವ ವೈದ್ಯ ನಟಿಸಿರುವ ಚಿತ್ರ ಇದೇ ಆ.19ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಹಾಡುಗಳು ಈಗಾಗಲೇ ಜನರ ನಡುವೆ ನಲಿದಾಡುತ್ತಿದ್ದು, ಎಲ್ಲರೂ ಸಿನಿಮಾ ಮಂದಿರದಲ್ಲಿ ವೀಕ್ಷಿಸಿ ಪ್ರೋತ್ಸಾಹಿಸುವಂತೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT