ನಾವು ನಮ್ಮನ್ನು ಪ್ರೀತಿಸುವ

7

ನಾವು ನಮ್ಮನ್ನು ಪ್ರೀತಿಸುವ

Published:
Updated:
ಪ್ರಿಯಾಂಕಾ ಚೋಪ್ರಾ

ಅದ್ಯಾಕೆ ಮಹಿಳೆಯರನ್ನು ಯಾವಾಗಲೂ ‘ಸೆಕೆಂಡ್‌ ಕ್ಲಾಸ್‌ ಸಿಟಿಜನ್ಸ್‌’ ಥರ ಟ್ರೀಟ್‌ ಮಾಡಲಾಗುತ್ತದೆ? ಮಹಿಳೆಯರ ಸೌಂದರ್ಯಕ್ಕೆ ಪುರುಷಗಣ ಒಂದು ಅಳತೆಗೋಲನ್ನು ಸಿದ್ಧಪಡಿಸಿದೆ. ಅದೂ ತನ್ನ ಅನುಕೂಲಕ್ಕೆ ತಕ್ಕಂತೆ! ಅದೆಲ್ಲವನ್ನೂ ಬದಿಗೊತ್ತಿ ಮಹಿಳೆಯರು ತಮ್ಮನ್ನು ತಾವು ಗೌರವಿಸಿಕೊಳ್ಳಬೇಕು. ತಮ್ಮನ್ನೇ ತಾವು ಪ್ರೀತಿಸಬೇಕು. ಚರ್ಮದ ಬಣ್ಣ ಯಾವುದಾದರೇನು? ಹೀಗೆ ಸೌಂದರ್ಯ ಮತ್ತು ಅಳತೆಗೋಲು, ಮಾನದಂಡ, ಬಣ್ಣ ಹತ್ತು ಹಲವು ವಿಷಯಗಳ ಜಿಜ್ಞಾಸೆಗಿಳಿದಿರುವುದು ಪ್ರಿಯಾಂಕಾ ಚೋಪ್ರಾ.

ಲಾಸ್‌ ಎಂಜಲಿಸ್‌ನಲ್ಲಿ ಅವರ ಚರ್ಮದ ಬಣ್ಣದ ಬಗ್ಗೆ ಮಾತನಾಡುತ್ತ ಇಷ್ಟೆಲ್ಲ ಚಿಂತನೆಯ ಕಿಡಿಗಳನ್ನೆ ಸಿಡಿಸಿದ್ದಾರೆ.

ನಮ್ಮಲ್ಲಿ ಯಾವಾಗಲೂ ಚಂದವಿದ್ದವರು ಗೆಲ್ಲುತ್ತಾರೆ. ಚಂದಗಾಣಬೇಕು. ಅಂದಗಾಣಬೇಕು. ಗೌರವ ವರ್ಣ ಹೊಂದಿರಬೇಕು.  ಆಗಲೇ ಜೀವನದಲ್ಲಿ ಮುಂದೆ ಬರುತ್ತಾರೆ. ಆತ್ಮವಿಶ್ವಾಸ ಹೊಂದುತ್ತಾರೆ. ಚಂದದ ಹುಡುಗ ಸಿಗುತ್ತಾನೆ.. ಇಂಥವೇ ಪಾಠಗಳನ್ನು ಹೇಳುತ್ತ ಬರಲಾಗುತ್ತದೆ. ಅಷ್ಟೇ ಅಲ್ಲ ಹೆಣ್ಣುಮಕ್ಕಳು ತಮ್ಮಲ್ಲಿಯೇ ಕುಗ್ಗುವಂತೆ ಮಾಡಲಾಗುತ್ತದೆ.

ನಾವು.. ನಾವೆಲ್ಲ ಮಹಿಳೆಯರು, ನಾವಿದ್ದಂತೆಯೇ ನಮ್ಮನ್ನು ನಾವೇ ಸ್ವೀಕರಿಸಬೇಕು. ನಮ್ಮನ್ನು ಪ್ರೀತಿಸಿಕೊಳ್ಳಬೇಕು. ಬಣ್ಣ ತಿಳಿಗೊಳಿಸುವುದು ಹೇಗೆ? ತಾಯ್ತನದ ನಂತರ ಹೊಟ್ಟೆ ಕರಗಿಸುವುದು ಹೇಗೆ? ಹೊಟ್ಟೆ ಮೇಲಿನ ಗೆರೆಗಳನ್ನು ಮಾಸಲು ಮಾಡಿಸುವುದು ಹೇಗೆ? ಮತ್ತು ಇದೆಲ್ಲವೂ ಒಬ್ಬ ಪುರಷನನ್ನು ಸಂತುಷ್ಟಗೊಳಿಸಲು... ಎಂಬ ಲೇಖನಗಳನ್ನು ಓದುವುದು ಬಿಡಲಾರೆವೆ? ಈ ಪಾಠಗಳನ್ನು ನೀಡುವ ಪತ್ರಿಕೆಗಳ ಅಗತ್ಯ ನಮಗಿದೆಯೇ ಎಂದೂ ಪ್ರಶ್ನಿಸಿದ್ದಾರೆ.

ಜನರು ಯಾವಾಗಲೂ ಮಹಿಳೆಯರ ಸಾಮರ್ಥ್ಯವನ್ನು ಅನುಮಾನಿಸಿದ್ದಾರೆ. ಅವರು ಸಮರ್ಥರು ಎಂದು ಅರಿತಾಗಲೆಲ್ಲ ಅವರ ಕೊರತೆಗಳನ್ನು ಎತ್ತಿ ಹಿಡಿದು ಹಿಂಜರಿಯುವಂತೆ ಮಾಡಿದ್ದಾರೆ. ಹೀಗಾಗಿಯೇ ಮಹಿಳೆಯರು ಸ್ವತಂತ್ರವಾಗಿ ಉಸಿರಾಡುವುದನ್ನೂ ಮರೆತಂತೆ ಆಗಿದ್ದಾರೆ. ಮಹಿಳೆಯರ ಮನೋಭಾವ ಬದಲಾಗುವ ಮುನ್ನ ಸೌಂದರ್ಯದ ಬಗೆಗೆ ಪುರುಷರ ಧೋರಣೆ ಬದಲಾಗಬೇಕಿದೆ, ಬಣ್ಣ, ನಿಲುವು, ಕಾಯ ಇವು ಯಾವವೂ ಸೌಂದರ್ಯವನ್ನು ವ್ಯಾಖ್ಯಾನಿಸಲಾರವು’ ಎಂದು ಅಲ್ಲಿಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !