ಸೋಮವಾರ, ಮಾರ್ಚ್ 27, 2023
33 °C

ಸಹಜ ಸುಂದರಿ ಸಾಯಿ ಪಲ್ಲವಿಗೆ ನಟ ನಾಗಚೈತನ್ಯ ಮೇಲೆ ಲವ್‌ ಆಗಿದೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಸಹಜ ಸುಂದರಿ ಎಂದೇ ಖ್ಯಾತಿಯಾಗಿರುವ ಸಾಯಿ ಪಲ್ಲವಿಗೆ ಲವ್‌ ಆಗಿದ್ದು ಅವರು ನಾಗಚೈತನ್ಯ ಜೊತೆ ರೊಮ್ಯಾನ್ಸ್‌ ಮಾಡಲಿದ್ದಾರೆ.

ಸಾಯಿ ಪಲ್ಲವಿಗೆ ಲವ್‌ ಆಗಿರುವುದು ತೆಲುಗಿನ ‘ಲವ್‌ ಸ್ಟೋರಿ’ ಸಿನಿಮಾದಲ್ಲಿ. ಮೊದಲ ಬಾರಿಗೆ ನಾಗಚೈತನ್ಯ ಜತೆ ಸಾಯಿ ಪಲ್ಲವಿ ತೆರೆ ಹಂಚಿಕೊಂಡಿದ್ದಾರೆ.

ಪ್ರೇಮಿಗಳ ದಿನಾಚರಣೆ ಹಿನ್ನೆಲೆಯ ಚಿತ್ರತಂಡ ಯುಟ್ಯೂಬ್‌ನಲ್ಲಿ ಮ್ಯೂಸಿಕಲ್‌ ಪ್ರಿವ್ಯೂವ್‌ ಬಿಡುಗಡೆಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ರೆಸ್ಪಾನ್ಸ್‌ ದೊರೆತಿದೆ. 66 ಸೆಕೆಂಡ್‌ಗಳಿರುವ ಮ್ಯೂಸಿಕಲ್‌ ಪ್ರಿವ್ಯೂವ್‌ನಲ್ಲಿ ಸಾಯಿ ಪಲ್ಲವಿ ಮತ್ತು ನಾಗಚೈತನ್ಯ ಜೋಡಿ ಕ್ಯೂಟ್‌ ಆಗಿ ಕಾಣಿಸಿಕೊಂಡಿದೆ.

’ಏ ಪಿಲ್ಲಾ‘ ಎಂದು ಆರಂಭವಾಗುವ ಹಾಡು ಸುಮಧುರವಾಗಿದೆ. ಈ ಸಾಂಗಿನಲ್ಲಿ ಸಾಯಿ ಪಲ್ಲವಿ ಏಕಾಏಕಿ ನಾಗಚೈತನ್ಯಗೆ ಮುತ್ತು ಕೊಡುತ್ತಾರೆ. ಇದರಿಂದ ಗಾಬರಿಗೊಂಡ ನಾಗಚೈತನ್ಯ ಕಂಬನಿ ಮಿಡಿಯುತ್ತಾರೆ. ‘ಏನು, ಮುತ್ತು ಕೊಟ್ರೆ ಅಳ್ತಿರಾ‘ ಎಂದು ಸಾಯಿ ಪಲ್ಲವಿ ಕೇಳುವ ದೃಶ್ಯ ಆಪ್ತವಾಗುತ್ತದೆ.

ಶೇಖರ್‌ ಕಮುಲ್ಲಾ ಆ್ಯಕ್ಷನ್‌ ಕಟ್‌ ಹೇಳಿರುವ ರೊಮ್ಯಾಂಟಿಕ್‌ ಕತೆಯುಳ್ಳ ‘ಲವ್‌ ಸ್ಟೋರಿ’ ಏಪ್ರಿಲ್‌ 2ರಂದು ಬಿಡುಗಡೆಯಾಗಲಿದೆ. ನಾರಾಯಣ ದಾಸ್‌ ಕೆ.ನಾರಂಗ್‌ ಹಾಗೂ ಕೆ.ಪಿ ರಾಮ್‌ ಮೋಹನ್‌ ನಿರ್ಮಿಸಿರುವ ಈ ಚಿತ್ರದಲ್ಲಿ ತೆಲಂಗಾಣ ಶೈಲಿಯ ತೆಲುಗು ಭಾಷೆ ಪ್ರೇಕ್ಷಕರ ಮನರಂಜಿಸಲಿದೆ.

ಮಲಯಾಳದ ‘ಪ್ರೇಮಂ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ, ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಯಲ್ಲಿ ಬಿಗ್‌ ಹಿಟ್‌ಗಳನ್ನ ನೀಡಿದ್ದಾರೆ. ಶೇಖರ್ ಕಮ್ಮುಲಾ ಎರಡನೆ ಬಾರಿಗೆ ಸಾಯಿ ಪಲ್ಲವಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ 'ಫಿದಾ' ಸಿನಿಮಾ ಮಾಡಿದ್ದರು.

'ಲವ್ ಸ್ಟೋರಿ' ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು