ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸ್ಟ್‌ ಸ್ಟೋರಿಸ್‌ ಆಯ್ತು, ಈಗ ಘೋಸ್ಟ್‌ ಸ್ಟೋರಿಸ್

Last Updated 28 ನವೆಂಬರ್ 2019, 19:31 IST
ಅಕ್ಷರ ಗಾತ್ರ

ನಿರ್ದೇಶಕರಾದ ಕರಣ್ ಜೋಹರ್, ಜೋಯಾ ಅಖ್ತರ್, ಅನುರಾಗ್ ಕಶ್ಯಪ್ ಮತ್ತು ದಿವಾಕರ್ ಬ್ಯಾನರ್ಜಿ ಅವರು ಮತ್ತೆ ಒಂದಾಗಿದ್ದಾರೆ. ತಾವು ನಿರ್ದೇಶಿಸಿರುವ ‘ಘೋಸ್ಟ್‌ ಸ್ಟೋರಿಸ್’ ಸಿನಿಮಾ ಗುಚ್ಛ ನೆಟ್‌ಫ್ಲಿಕ್ಸ್‌ನಲ್ಲಿ 2020ರ ಜನವರಿ 1ರಂದು ಕಾಣಿಸಿಕೊಳ್ಳಲಿದೆ ಎಂದು ಪ್ರಕಟಿಸಿದ್ದಾರೆ.

ಹಿಂದೆ ನೆಟ್‌ಫ್ಲಿಕ್ಸ್‌ ಮೂಲಕ ಪ್ರಸಾರ ಆದ ‘ಲಸ್ಟ್‌ ಸ್ಟೋರಿಸ್‌’ (ಇದು ನಾಲ್ಕು ಸಿನಿಮಾಗಳ ಗುಚ್ಛ) ಇವರು ನಿರ್ದೇಶಿಸಿದ್ದು. ‘ಲಸ್ಟ್‌ ಸ್ಟೊರೀಸ್‌’ನ ಒಂದೊಂದು ಕಥೆಯನ್ನೂ ಒಬ್ಬೊಬ್ಬರು ನಿರ್ದೇಶಿಸಿದ್ದರು. ಇದು ಭಾರಿ ಯಶಸ್ಸು ಕಂಡಿತ್ತು. ಈಗ ಮತ್ತೆ ಒಂದಾಗಿರುವ ಈ ನಾಲ್ವರು, ಭೂತಗಳ ಕಥೆಯನ್ನು ಹೇಳಲು ಸನ್ನದ್ಧರಾಗಿದ್ದಾರೆ.

ಈ ವಿಚಾರವನ್ನು ಹೊರಗೆಡಹಿದ್ದು ನಿರ್ದೇಶಕ ಕರಣ್ ಜೋಹರ್. ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಸುದ್ದಿ ತಿಳಿಸಿದ್ದಷ್ಟೇ ಅಲ್ಲದೆ, ನಾಲ್ಕು ಕಥೆಗಳಲ್ಲಿ ಏನೇನು ಇರಲಿದೆ ಎಂಬುದನ್ನು ತಿಳಿಸುವ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.

‘ಹಿಂದಿನ ವರ್ಷ ನಾವು ಲಸ್ಟ್‌ ಸ್ಟೋರಿಸ್‌ ಸಿನಿಮಾ ಗುಚ್ಛ ಸಿದ್ಧಪಡಿಸಿದೆವು. ಅದು ಬಹಳ ಖುಷಿ ಕೊಟ್ಟಿತು. ಆ ಸಿನಿಮಾಗಳನ್ನು ನೀವು ನೋಡಿ, ಖುಷಿಪಟ್ಟಿದ್ದೀರಿ. ಈಗ ನಾವು ಒಂದು ಹೆಜ್ಜೆ ಮುಂದೆ ಹೋಗಲು ತೀರ್ಮಾನಿಸಿದ್ದೇವೆ. ಹಿಂದೆ ನಾವು ಯಾರೂ ಕಾಲಿರಿಸದಿದ್ದ ಲೋಕಕ್ಕೆ ಪ್ರವೇಶಿಸಿದ್ದೇವೆ’ ಎಂದು ನಾಲ್ವರೂ ಹೇಳಿಕೊಂಡಿದ್ದಾರೆ.

ಕರಣ್ ಅವರು ತಮ್ಮ ಸಿನಿಮಾ ‘ಭಾರಿ ವೆಚ್ಚದ ಮದುವೆ’ ಸುತ್ತ ಸುತ್ತುತ್ತದೆ ಎಂದು ಹೇಳಿದ್ದಾರೆ. ಜೋಯಾ ಅವರು ತಮ್ಮ ಸಿನಿಮಾ ‘ಮುಗ್ಧ ಅಂಗನವಾಡಿ ಪದ್ಯ’ಗಳ ಸುತ್ತ ಗಿರಕಿ ಹೊಡೆಯುತ್ತದೆ ಎಂದಿದ್ದಾರೆ. ‘ಹಕ್ಕಿಗಳ ಚಿಲಿಪಿಲಿ ಸಿಹಿಯಾಗಿ ಇರುವುದಿಲ್ಲ’ ಎಂದು ಅನುರಾಗ್ ಹೇಳಿದ್ದಾರೆ.

‘ವಿಚಿತ್ರವಾದ ಸೆಳೆತ ಮತ್ತು ನಿರ್ದಿಷ್ಟ ಆಹಾರದ ಬಗ್ಗೆ ಆಕರ್ಷಣೆ’ ಎಂದು ತಮ್ಮ ಸಿನಿಮಾ ವಿಚಾರವಾಗಿ ಹೇಳಿದ್ದಾರೆ ದಿವಾಕರ್. ಮೃಣಾಲ್ ಠಾಕೂರ್, ಅವಿನಾಶ್ ತಿವಾರಿ, ಜಾಹ್ನವಿ ಕಪೂರ್, ರಘುವೀರ್ ಯಾದವ್, ಶೋಭಿತಾ ಧುಲಿಪಾಲ, ವಿಜಯ್ ವರ್ಮ ಈ ಸಿನಿಮಾಗಳಲ್ಲಿ ಬಣ್ಣ ಹಚ್ಚಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT