ಸೋಮವಾರ, ನವೆಂಬರ್ 18, 2019
26 °C

ಹಣಕ್ಕಾಗಿ ಸಿನಿಮಾ ಬೇಡ: ಎಂ.ಡಿ. ಕೌಶಿಕ್

Published:
Updated:
Prajavani

‘ಕನಿಷ್ಠ ನಷ್ಟ ಅನುಭವಿಸಲು ತಯಾರಿದ್ದರೆ ಮಾತ್ರ ಸಿನಿಮಾ ಮಾಡಿ, ಹಣ ಗಳಿಸುವ ಏಕೈಕ ಉದ್ದೇಶದಿಂದ ಮಾತ್ರ ಸಿನಿಮಾ ಮಾಡಬೇಡಿ ಎಂದೇ ನಿರ್ಮಾಪಕರಿಗೆ ಹೇಳುತ್ತೇನೆ’ ಎಂದವರು ನಿರ್ದೇಶಕ ಎಂ.ಡಿ. ಕೌಶಿಕ್. ಅವರ ನಿರ್ದೇಶನದ ‘ಈಶ ಮಹೇಶ’ ಚಿತ್ರ ಈ ವಾರ ತೆರೆಕಾಣಲಿದ್ದು, ಈ ಮಾಹಿತಿ ಹಂಚಿಕೊಳ್ಳಲು ಅವರು ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

‘ನನ್ನ ಬಳಿ ಸಿನಿಮಾ ಮಾಡಿಕೊಡಿ ಎಂದು ಬಂದವರಿಗೆ ಲಾಭದ ಭರವಸೆ ಎಂದೂ ನೀಡುವುದಿಲ್ಲ. ಕಲೆ, ಕಲಾವಿದರ ಮೇಲೆ ಕಾಳಜಿ ಇದ್ದರೆ ಮಾತ್ರ ಸಿನಿಮಾ ಮೇಲೆ ಬಂಡವಾಳ ಹೂಡಿ ಎನ್ನುತ್ತೇನೆ’ ಎಂದರು.

ಚಿತ್ರದ ಒಂದು ಹಾಡಿಗೆ ಸಾಹಿತ್ಯ ಬರೆದಿರುವ ಸಾಹಿತಿ ದೊಡ್ಡ ರಂಗೇಗೌಡ, ‘ಮಲೆಮಹದೇಶ್ವರನ ಜಾತ್ರೆಯ ಬಗ್ಗೆ ಚಿತ್ರಕ್ಕೆ ಹಾಡು ಬರೆದುಕೊಡುವಂತೆ ಕೇಳಿದ್ದರು. ನಾನು ಮಾದೇಶ್ವರನ ಕುರಿತು ಬರೆದ ಎಲ್ಲ ಹಾಡುಗಳು ಹಿಟ್ ಆಗಿವೆ. ದೇಶಿ ಭಾಷೆಯ ಪದ ಪ್ರಯೋಗ ಮಾಡಿ ಈ ಹಾಡು ಬರೆದಿದ್ದೇನೆ’ ಎಂದರು.

ಈ ಚಿತ್ರ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಜಯಶ್ರೀ ಮತ್ತು ನಾರಾಯಣಸ್ವಾಮಿ ತಮ್ಮ ಪಾತ್ರದ ಬಗ್ಗೆ ಚುಟುಕಾಗಿ ಹೇಳಿದರು. ಕಥೆ ಮತ್ತು ಸಂಭಾಷಣೆ ಬರೆದಿರುವ ನಟರಾಜ್‌ ಮಂಚಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿ.ಮನೋಹರ್‌ ಸಂಗೀತ ನೀಡಿದ್ದಾರೆ. ರಮೇಶ್‌ಕೋಯಿರ ಛಾಯಾಗ್ರಹಣ, ನೃತ್ಯ ಮೋಹನ್, ಸಂಕಲನ ಎಲ್.ನರಸಿಂಹಪ್ರಸಾದ್ ಅವರದ್ದು. 

ಪ್ರತಿಕ್ರಿಯಿಸಿ (+)