ಆಲಿಯಾಗೆ ಮಾಧುರಿ ಕಥಕ್‌ ಟೀಚರ್‌!

ಮಂಗಳವಾರ, ಏಪ್ರಿಲ್ 23, 2019
27 °C

ಆಲಿಯಾಗೆ ಮಾಧುರಿ ಕಥಕ್‌ ಟೀಚರ್‌!

Published:
Updated:
Prajavani

ಅದ್ದೂರಿ ಚಿತ್ರಗಳ ಸರದಾರ ಕರಣ್‌ ಜೋಹರ್‌ ಅವರ ’ತಖ್ತ್‌‘ನಲ್ಲಿ ಕಥಕ್‌ ನೃತ್ಯ ಮಾಡಲು ಆಲಿಯಾ ಭಟ್‌ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಶಾಸ್ತ್ರೀಯವಾಗಿ ಕಥಕ್‌ ಕಲಿಯಲು ಅವರಿಗೆ ಪುರುಸೊತ್ತಿಲ್ಲ. ಹಾಗಾಗಿ ಕಥಕ್‌ನಲ್ಲಿ ಪಳಗಿದ ಕಲಾವಿದರಿಂದ ಕೆಲವು ಟಿಪ್ಸ್ ಪಡೆಯುವುದೇ ಸೂಕ್ತ ಎಂದು ತೀರ್ಮಾನಿಸಿದ್ದಾರೆ. 

ಹೀಗೆ ಯೋಚಿಸುತ್ತಿರುವ ಆಲಿಯಾಗೆ ಥಟ್‌ ಅಂತ ನೆನಪಾಗಿದ್ದು ಯಾರು ಗೊತ್ತೇ? ಹಲವು ನೃತ್ಯ ಪ್ರಕಾರಗಳಲ್ಲಿ ಸೈ ಎನಿಸಿಕೊಂಡಿರುವ ಪ್ರತಿಭೆ, ಬಾಲಿವುಡ್‌ನ ದಂತದ ಗೊಂಬೆ ಮಾಧುರಿ ದೀಕ್ಷಿತ್‌!

ಹೌದು, ಕಥಕ್‌ ನೃತ್ಯದ ಕೆಲವು ಮಟ್ಟುಗಳನ್ನು ಮಾಧುರಿ ಮೇಡಂ ಬಳಿ ಹೇಳಿಸಿಕೊಳ್ಳಲು ಆಲಿಯಾ ತೀರ್ಮಾನಿಸಿದ್ದಾರೆ. ನೃತ್ಯದ ಮಾತು ಬಂದಾಗಲೆಲ್ಲಾ ತಮಗೆ ಮಾಧುರಿ ಮೇಡಂ ಮಾದರಿ ಎಂದು ಎಷ್ಟೋ ಸಲ ಹೇಳಿಕೊಂಡಿದ್ದಾರೆ ಆಲಿಯಾ. ಇದೀಗ, ಮಾಂತ್ರಿಕ ನೃತ್ಯಗಾರ್ತಿಯ ಬಳಿಯೇ ಕೆಲವೊಂದು ಪಾಠಗಳನ್ನೂ ಮಾರ್ಗದರ್ಶನಗಳನ್ನೂ ಪಡೆದು ‘ತಖ್ತ್‌‘ ಸೆಟ್‌ನಲ್ಲಿ ತಮ್ಮ ಡಾನ್ಸಿಂಗ್‌ ತಾಕತ್ತು ತೋರಿಸಬೇಕು ಎಂದು ತೀರ್ಮಾನಿಸಿದ್ದಾರೆ.  

‘ಕಳಂಕ್‌‘ನ ಘರ್‌ ಮೇರೆ ಪರ್‌ದೇಸಿಯಾ ಹಾಡಿನ ಚಿತ್ರೀಕರಣಕ್ಕೂ ಮೊದಲು ಮಾಧುರಿ ದೀಕ್ಷಿತ್‌ ಅವರೇ ಆಲಿಯಾಗೆ ಕೆಲವು ಹೆಜ್ಜೆಗಳನ್ನು ಹೇಳಿಕೊಟ್ಟಿದ್ದರಂತೆ. ಅಷ್ಟೇ ಅಲ್ಲ, ಮುಂದಿನ ಸಲ ಯಾವುದಾದರೂ ಚಿತ್ರಕ್ಕೆ ನೃತ್ಯದ ಅವಶ್ಯಕತೆ ಬಿದ್ದರೆ ಮೂರೇ ದಿನಗಳಲ್ಲಿ ಕಲಿಸಿಕೊಡುವುದಾಗಿ ವಾಗ್ದಾನವನ್ನೂ ಕೊಟ್ಟಿದ್ದಾರಂತೆ. ಹಾಗಾಗಿ ಮಾಧುರಿ ಆಹ್ವಾನದ ಮೇರೆಗೇ ಆಲಿಯಾ ತೀರ್ಮಾನ ತೆಗೆದುಕೊಂಡಿದ್ದಾರೆ.‌

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !