ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಗ ಬಾರೋ’ಗೆ ಚಂದನ್ ಕಂಠ

Last Updated 18 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಹರೀಶ್ ಬಂಗೇರ ನಿರ್ಮಿಸಿರುವ‘ಅನುಕ್ತ’ ಸಿನಿಮಾದ ‘ಮಗ ಬಾರೋ’ ಪ್ರಮೋಷನಲ್ ಹಾಡನ್ನು ರ‍್ಯಾಪ್ ಗಾಯಕ ಚಂದನ್ ಶೆಟ್ಟಿ ಹಾಡಿದ್ದಾರೆ.

ಕೀರ್ತನ್ ಭಂಡಾರಿ ಎಂಬುವರು ಈ ಹಾಡನ್ನು ಬರೆದಿದ್ದಾರೆ. ಇದಕ್ಕೆ ನೊಬಿನ್ ಪಾಲ್ ಸಂಗೀತ ನೀಡಿದ್ದಾರೆ. ಈ ಹಾಡನ್ನುಈಗಾಗಲೇ ಯೂಟ್ಯೂಬ್‍ನಲ್ಲಿ ಅಪ್‌ಲೋಡ್ ಮಾಡಿದ್ದು, 6.64 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅಶ್ವತ್ ಸ್ಯಾಮುಯಲ್ ಚಿತ್ರಕಥೆ, ನಿರ್ದೇಶನದ ಈ ಚಿತ್ರಕ್ಕೆ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ.

ಎನ್.ಎಂ.ವಿಶ್ವ ಸಂಕಲನದ ಈ ಸಿನಿಮಾದ ಕಥೆಯನ್ನು ಸಂತೋಷ್ ಕುಮಾರ್ ಹಾಗೂ ಕಾರ್ತಿಕ್ ಅತ್ತಾವರ್ ಬರೆದಿದ್ದಾರೆ. ನವೀನ್ ಶರ್ಮ ಹಾಗೂ ಕಿರಣ್ ಶೆಟ್ಟಿ ಸಂಭಾಷಣೆ ಬರೆಯುವುದರೊಂದಿಗೆ ಸಹ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ.

ಕಾರ್ತಿಕ್ ಅತ್ತಾವರ್, ಸಂಗೀತಾ ಭಟ್ ಸಂಪತ್‍ರಾಜ್, ಅನುಪ್ರಭಾಕರ್ ಮುಖರ್ಜಿ, ಕೆ.ಎಸ್.ಶ್ರೀಧರ್, ಉಷಾ ಭಂಡಾರಿ, ಅನಿಲ್ ನೀನಾಸಂ, ಚಿದಾನಂದ ಪೂಜಾರಿ, ರಮೇಶ್ ರೈ, ಸ್ಟಾನಿ ಹಿಲ್ಟ್ರೀನ್, ಲಕ್ಷ್ಮೀ ಸಿದ್ದಯ್ಯ, ರೋಷನ್ ಶೆಟ್ಟಿ ಮುಂತಾದವರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಶೀಘ್ರವೇ ತೆರೆಗೆ ಬರಲು ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT