ಮಂಗಳವಾರ, ಮೇ 17, 2022
25 °C

ಮಂಗಳವಾರ ರಜಾದಿನ ಫೆಬ್ರುವರಿ 5ಕ್ಕೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆದಿರುವ ಮಂಗಳವಾರ ರಜಾದಿನ ಚಿತ್ರ ಫೆಬ್ರುವರಿ 5ಕ್ಕೆ ರಾಜ್ಯಾದಾದ್ಯಂತ ಬಿಡುಗಡೆಯಾಗಲಿದೆ. 

ಕ್ಷೌರಿಕನೊಬ್ಬನಿಗೆ ನಟ ಸುದೀಪ್‌ ಅವರಿಗೆ ಕೇಶ ವಿನ್ಯಾಸ ಮಾಡಬೇಕೆಂಬ ಆಸೆ ಇರುತ್ತದೆ. ಆ ಆಸೆ ಏನಾಗುತ್ತದೆ? ಎನ್ನುವುದೇ ಈ ಚಿತ್ರದ ಕಥಾಸಾರಾಂಶ.

ಸ್ಟುಡಿಯೊ 18ನ ಸುಧೀರ್ ಕೆ.ಎಂ(ಬ್ಯಾಡ್ ಮ್ಯಾನರ್ಸ್ ಚಿತ್ರದ ನಿರ್ಮಾಪಕರು) ಈ ಚಿತ್ರವನ್ನು ವೀಕ್ಷಿಸಿ ಸಂತಸಗೊಂಡು ತಾವೇ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ತ್ರಿವರ್ಗ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಯವಿನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಬಿಗ್‌ಬಾಸ್ ಖ್ಯಾತಿಯ ಚಂದನ್ ಆಚಾರ್ ಈ ಚಿತ್ರದಲ್ಲಿ ಕ್ಷೌರಿಕನ ಪಾತ್ರ ನಿರ್ವಹಣೆ ಮಾಡಿದ್ದಾರೆ. ಲಾಸ್ಯ ನಾಗರಾಜ್ ಈ ಚಿತ್ರದ ನಾಯಕಿ. ‌ಜಹಂಗೀರ್, ರಜನಿಕಾಂತ್, ಗೋಪಾಲ್ ದೇಶಪಾಂಡೆ, ನಂದನ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರಜೋತ್ ಡೇಸಾ ಸಂಗೀತ ನೀಡಿದ್ದಾರೆ. ಋತ್ವಿಕ್‌ ಮುರಳೀಧರ್ ಹಿನ್ನೆಲೆ ಸಂಗೀತ, ಉದಯ್ ಲೀಲಾ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಸಂಕಲನ ಈ ಚಿತ್ರಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು