ಸಿನಿ ತಾರೆಯರ ಶಿವನಾಮ ಸ್ಮರಣೆ

ಗುರುವಾರ , ಮಾರ್ಚ್ 21, 2019
26 °C

ಸಿನಿ ತಾರೆಯರ ಶಿವನಾಮ ಸ್ಮರಣೆ

Published:
Updated:
Prajavani

ಈ ಬಾರಿಯ ಮಹಾ ಶಿವರಾತ್ರಿ ಭಕ್ತಿ ಭಾವದಲ್ಲಿ ಸಾಮಾನ್ಯ ಜನರಷ್ಟೇ ಅಲ್ಲ, ಸಿನಿ ತಾರೆಯರೂ ಮುಳುಗಿಹೋದರು. ಶಿವನ ಕೃಪೆಗೆ ಪಾತ್ರರಾಗಲು ನಿಯಮ, ನಿಷ್ಠೆಯಿಂದ ಪೂಜೆ– ಪುನಸ್ಕಾರಗಳನ್ನು ಮಾಡಿದರು. ಸಿನಿಮಾ ಕೆಲಸಗಳ ಜಂಜಾಟದ ಮಧ್ಯೆ ಒಂದಷ್ಟು ಬಿಡುವು ಮಾಡಿಕೊಂಡು ನಟ–ನಟಿಯರು ಶಿವನಾಮ ಸ್ಮರಣೆ ಮಾಡಿದರು. 

ಇಷ್ಟಕ್ಕೂ ಈ ತಾರಾ ನಟರು ಯಾರು ಎಂದರೆ, ಬಾಹುಬಲಿ ಖ್ಯಾತಿಯ ರಾನಾ ದಗ್ಗುಬಾಟಿ, ಬಹುಭಾಷಾ ತಾರೆಯರಾದ ಕಾಜಲ್‌ ಅಗರ್‌ವಾಲ್‌, ಮಿಲ್ಕಿಬ್ಯೂಟಿ ತಮನ್ನಾ ಮತ್ತು ನವಾಬ್ ಬ್ಯೂಟಿ ಅದಿತಿ ರಾವ್ ಹೈದರಿ.

ಶಿವರಾತ್ರಿ ಅಂಗವಾಗಿ ಕೊಯಮತ್ತೂರಿನ ಸದ್ಗುರು ಆದಿಯೋಗಿ ಆಶ್ರಮದಲ್ಲಿ ಆಯೋಜಿಸಿದ್ದ ಉತ್ಸವದಲ್ಲಿ ಈ ತಾರೆಯರು ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದರು.

ಈ ಸಂದರ್ಭದಲ್ಲಿ ಕ್ಲಿಕ್ಕಿಸಿದ ಸೆಲ್ಫಿಗಳನ್ನು ಕಾಜಲ್ ಅಗರ್‌ವಾಲ್ ಮತ್ತು ತಮನ್ನಾ ಭಾಟಿಯಾ ತಮ್ಮ ಇನ್‌ಸ್ಟಾ ಗ್ರಾಂ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. 

ತಮನ್ನಾ ಅವರು ಹಂಚಿಕೊಂಡಿರುವ ಚಿತ್ರವನ್ನು ಒಂದೇ ದಿನದಲ್ಲಿ, ಸುಮಾರು 3 ಲಕ್ಷ ಜನ ಇಷ್ಟಪಟ್ಟಿರುವುದು ವಿಶೇಷ. ಕಾಜಲ್ ಅಗರ್ವಾಲ್‌ ಹಂಚಿಕೊಂಡಿರುವ ಚಿತ್ರಕ್ಕೆ ಒಂದೇ ದಿನದಲ್ಲಿ ಸುಮಾರು 6 ಲಕ್ಷ ಲೈಕ್ಸ್‌ ಬಂದಿವೆ.

ಪ್ರಸ್ತುತ ಬಹುಬೇಡಿಕೆ ಇರುವಂತಹ ಈ ನಟರು, ತಮ್ಮ ಕೆಲಸಗಳನ್ನೆಲ್ಲಾ ಬದಿಗಿಟ್ಟು ಒಂದೆಡೆ ಸೇರಿರುವುದಕ್ಕೆ ಶಿವಭಕ್ತಿಯೇ ಕಾರಣ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !