ಬುಧವಾರ, ಏಪ್ರಿಲ್ 14, 2021
29 °C

ಸಂದೀಪ್‌ ರೆಡ್ಡಿ ಚಿತ್ರದಲ್ಲಿ ಪ್ರಿನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕಬೀರ್‌ ಸಿಂಗ್‌’ ಖ್ಯಾತಿಯ ನಿರ್ದೇಶಕ ಸಂದೀಪ್‌ ರೆಡ್ಡಿ ವಾಂಗ ಅವರ ಮುಂದಿನ ಚಿತ್ರದಲ್ಲಿ ಟಾಲಿವುಡ್‌ನ ಸೂಪರ್‌ಸ್ಟಾರ್‌ ಪ್ರಿನ್ಸ್‌ ಮಹೇಶ್‌ ಬಾಬು ನಟಿಸುತ್ತಿದ್ದಾರೆ.

‘ನಾನು ಈಗಾಗಲೇ ಅವರಿಗೆ ಚಿತ್ರಕತೆ ಬಗ್ಗೆ ತಿಳಿಸಿದ್ದೇನೆ. ಚಿತ್ರಕತೆ ಬರೆದು ಮುಗಿಸಿದ ಬಳಿಕ ಅವರನ್ನು ಖುದ್ದು ಭೇಟಿ ಮಾಡಲಿದ್ದೇನೆ’ ಎಂದು ಸಂದೀಪ್‌ ತಿಳಿಸಿದ್ದಾರೆ. ಇದು ಸಂದೀಪ್‌ ನಿರ್ದೇಶನದ ಮೂರನೇ ಚಿತ್ರವಾಗಲಿದೆ. 

ವಿಜಯ್‌ ದೇವರಕೊಂಡ ಅಭಿನಯದ ‘ಅರ್ಜುನ್ ರೆಡ್ಡಿ’ ಸಿನಿಮಾದ ಮೂಲಕ ಸಂದೀಪ್‌ ನಿರ್ದೇಶಕಕ್ಕಿಳಿದಿದ್ದರು. ಆ ಚಿತ್ರವೂ ಬಾಕ್ಸಾಫೀಸಿನಲ್ಲಿ ಯಶಸ್ಸು ಕಂಡಿತ್ತು. ಅನಂತರ ಅದೇ ಚಿತ್ರವನ್ನು ಅವರು  ಹಿಂದಿಯಲ್ಲಿ  ‘ಕಬೀರ್‌ ಸಿಂಗ್‌’ ರಿಮೇಕ್‌ ಮಾಡಿದ್ದರು. ಆ ಚಿತ್ರವು ಹಿಟ್‌ ಆಗಿದೆ. ಇವರ ನಿರ್ದೇಶನದ ಎರಡೂ ಚಿತ್ರಗಳು ಭಾರಿ ಯಶಸ್ಸು ಗಳಿಸಿದ್ದರಿಂದ ಅವರ ಮುಂದಿನ ಚಿತ್ರದ ಬಗ್ಗೆ ಎಲ್ಲರ ದೃಷ್ಟಿ ಬಿದ್ದಿದೆ.   ಈ ಚಿತ್ರದಲ್ಲಿ ಮಹೇಶ್‌ಬಾಬು ನಟಿಸಲಿದ್ದಾರೆಯೇ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು