ಹೈದರಾಬಾದ್‌ಗೆ ಬರಲಿದೆ ‘ಪ್ರಿನ್ಸ್‌’ ಮೇಣದ ಪ್ರತಿಮೆ

7

ಹೈದರಾಬಾದ್‌ಗೆ ಬರಲಿದೆ ‘ಪ್ರಿನ್ಸ್‌’ ಮೇಣದ ಪ್ರತಿಮೆ

Published:
Updated:

ಟಾಲಿವುಡ್‌ನ ‘ಪ್ರಿನ್ಸ್‌’ ಮಹೇಶ್‌ಬಾಬು ಅವರ ಪ್ರತಿಮೆಗೆ ಇನ್ನೇನು ಅಂತಿಮ ಸ್ಪರ್ಶ ಬಾಕಿ. ಸಿಂಗಪುರದಲ್ಲಿರುವ ಮೇಡಂ ಟುಸ್ಸಾಡ್ಸ್‌ ಮೇಣದ ಪ್ರತಿಮೆಗಳ ಮ್ಯೂಸಿಯಂನಲ್ಲಿ ಈ ಕೆಲಸ ಭರದಿಂದ ಸಾಗಿದೆ. ತಮ್ಮ ಪ್ರತಿಮೆಯನ್ನು ಖುದ್ದು ಮಹೇಶ್‌ಬಾಬು ಅನಾವರಣ ಮಾಡಲಿರುವುದು ವಿಶೇಷ.

ಇದು ಪ್ರಿನ್ಸ್‌ ಅಭಿಮಾನಿಗಳ ಬೇಡಿಕೆಯೂ ಹೌದು. ಈ ಅವಿಸ್ಮರಣೀಯ ಸಂದರ್ಭ ತಮ್ಮ ಸಮಕ್ಷಮದಲ್ಲೇ ನಡೆಯಬೇಕು ಎಂದು ಅನೇಕ ದಿನಗಳಿಂದ ಅಭಿಮಾನಿಗಳು ಪ್ರಿನ್ಸ್‌ಗೆ ಒತ್ತಡ ಹೇರುತ್ತಿದ್ದರು. ಈ ತಿಂಗಳ ಕೊನೆಯಲ್ಲಿ ಒಂದು ದಿನದ ಮಟ್ಟಿಗೆ ಪ್ರತಿಮೆಯನ್ನು ಸಿಂಗಪುರದಿಂದ ಹೈದರಾಬಾದ್‌ಗೆ ತಂದು ಅನಾವರಣ ಮಾಡಿ ಮ್ಯೂಸಿಯಂಗೆ ಮರಳಿಸುವ ಯೋಜನೆ ಮಹೇಶ್‌ಬಾಬು ಅವರದ್ದು.

ಮಹೇಶ್‌ಬಾಬು ಒಡೆತನದ ಎಎಂಬಿ ಸಿನೆಮಾಸ್‌ ಥಿಯೇಟರ್‌ನಲ್ಲಿ ಪ್ರತಿಮೆಯನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲು ಮ್ಯೂಸಿಯಂ ಸಮ್ಮತಿ ನೀಡಿದೆ. ಹೈದರಾಬಾದ್‌ನಲ್ಲಿ ಅನಾವರಣಗೊಳಿಸಿದ ಬಳಿಕ ಪ್ರತಿಮೆಯನ್ನು ಲಂಡನ್‌ನಲ್ಲಿರುವ ಮೇಡಂ ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಇರಿಸಲಾಗುವುದು. ಟಾಲಿವುಡ್‌ ನಟರ ಪೈಕಿ ಮೊದಲ ಮೇಣದ ಪ್ರತಿಮೆ ನಿರ್ಮಾಣದ ಗೌರವಕ್ಕೆ ಪಾತ್ರರಾದವರು ಪ್ರಭಾಸ್‌. ‘ಪ್ರಿನ್ಸ್‌’ ಎರಡನೆಯವರು. 

‘ಪ್ರಿನ್ಸ್‌’ ಸದ್ಯಕ್ಕೆ ತಮ್ಮ ಮಹತ್ವಾಕಾಂಕ್ಷೆಯ ಚಿತ್ರ ‘ಮಹರ್ಷಿ’ಯ ಅಂತಿಮ ಹಂತದ ಚಿತ್ರೀಕರಣ ಮತ್ತು ಚಿತ್ರೀಕರಣೋತ್ತರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಪೂಜಾ ಹೆಗ್ಡೆ ನಾಯಕನಟಿಯಾಗಿರುವ ಈ ಚಿತ್ರ ಏಪ್ರಿಲ್‌ 25ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಆದರೆ ಅದಕ್ಕೂ ಮೊದಲು ಮಹೇಶ್‌ಬಾಬು ಮೇಣದ ಪ್ರತಿಮೆ ಲಂಡನ್‌ಗೆ ಪಯಣ ಬೆಳೆಸಲಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !