ಚಂದನವನದ ತೆರೆಗಳಲ್ಲಿ ಇಂದು(ಮಾರ್ಚ್ 6) ಎಂಟು ಕನ್ನಡ ಸಿನಿಮಾಗಳು ತೆರೆಕಾಣುತ್ತಿವೆ.

ಮೆಜೆಸ್ಟಿಕ್-2

ಅಮ್ಮಾ ಎಂಟರ್ಪ್ರೈಸಸ್ ಮೂಲಕ ಎಚ್.ಆನಂದಪ್ಪ ನಿರ್ಮಿಸಿರುವ ಚಿತ್ರವಿದು. ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ಕುಮಾರ್ ಈ ಚಿತ್ರದ ಮೂಲಕ ನಾಯಕನಾಗಿ ಹೆಜ್ಜೆ ಇಡುತ್ತಿದ್ದಾರೆ. ನಟಿ ಶೃತಿ ಅವರು ನಾಯಕನ ತಾಯಿಯ ಪಾತ್ರದಲ್ಲಿ ನಟಿಸಿದ್ದು, ನಟಿ ಸಂಹಿತಾ ವಿನ್ಯಾ ನಾಯಕಿಯಾಗಿ ಜೊತೆಯಾಗಿದ್ದಾರೆ. ಈಗಿನ ಮೆಜೆಸ್ಟಿಕ್ ಪ್ರದೇಶ ಹೇಗಿದೆ, ಅಲ್ಲಿ ನಡೆಯುವ ದಂಧೆಗಳು, ಅಕ್ರಮ ಚಟುವಟಿಕೆಗಳ ಬಗ್ಗೆ ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯ ಮೂಲಕ ಹೇಳಲಾಗುತ್ತಿದೆ ಎಂದಿದೆ ಚಿತ್ರತಂಡ. ನಟಿ ಮಾಲಾಶ್ರೀ ಅತಿಥಿ ಪಾತ್ರದಲ್ಲಿದ್ದಾರೆ. ವಿನು ಮನಸು ಸಂಗೀತ ಸಂಯೋಜನೆ, ವೀನಸ್ ಮೂರ್ತಿ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಶೇಷ 2016

ಕನ್ನಡ ಹಾಗೂ ಮಲಯಾಳ ಭಾಷೆಗಳಲ್ಲಿ ಚಿತ್ರೀಕರಣವಾಗಿರುವ ಈ ಸಿನಿಮಾ ಪೊಲೀಸ್ ವ್ಯವಸ್ಥೆಯ ಮೇಲೆ ಚಿತ್ರತವಾಗಿದೆ. ಪ್ರಮೋದ್ ಶೆಟ್ಟಿ, ಜಾನ್ ಕೈಪ್ಪಲ್ಲಿ ಹಾಗೂ ಅರ್ಚನಾ ಕೊಟ್ಟಿಗೆ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾವನ್ನು ಈಗಾಗಲೇ ಅಮೆಜಾನ್ ಪ್ರೈಮ್ ಖರೀದಿಸಿದೆ. ಪೊಲೀಸ್ ಇಲಾಖೆಯಲ್ಲಿರುವ ಭ್ರಷ್ಟ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಸಂಘರ್ಷದ ನಡುವೆ ಸಾಗುವ ಕುತೂಹಲಕಾರಿ ಕಥೆ ಸಿನಿಮಾದಲ್ಲಿದೆ. ಮರಡಿಗುಡ್ಡ ಎಂಟರ್ಟೇನ್ಮೆಂಟ್ ಮೂಲಕ ಉಮೇಶ್ ಗೌಡ , ಮಂಜುವಾಣಿ ವಿ.ಎಸ್ ಹಾಗೂ ವೀಣಾ. ಎಸ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪ್ರದೀಪ್ ಅರಸೀಕೆರೆ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಅವರ ಚೊಚ್ಚಲ ಚಿತ್ರ. 2016ರ ಕಾಲಘಟ್ಟದಲ್ಲಿ ಕರ್ನಾಟಕ ಹಾಗೂ ಕೇರಳ ಗಡಿಯಲ್ಲಿ ನಡೆಯುವಂತಹ ಕಾಲ್ಪನಿಕ ಘಟನೆಗಳ ಸುತ್ತ ಕಥೆ ಇದೆ. ಕನ್ನಡ ಹಾಗೂ ಮಲಯಾಳದಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ.

ಪಂಚ ರತ್ನಗಳು

ಇದು ಮಕ್ಕಳ ಚಿತ್ರ. ಪ್ರದರ್ಶಕ ಮತ್ತು ವಿತರಕರಾಗಿರುವ ಜಿ.ಆರ್.ನಾರಾಯಣ ಗೌಡ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಗೌತಮ್ ಆರ್. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ಪ್ರಥಮ್, ಯಶಸ್, ವಿಹಾನ್, ತನ್ವಿ, ಆದ್ಯ ಪ್ರಥಮ್, ತಾಯಿಯಾಗಿ ಬಿಂದು ಆಚಾರ್ಯ, ಆನಂದ್ ನಗರ್ಕರ್ ಮುಂತಾದವರು ನಟಿಸಿದ್ದಾರೆ.

ಉಳಿದಂತೆ ‘ಓರಿಯೋ’, ‘ಜಯಕೃಷ್ಣ’, ‘ಅಂತರ್ಯಾಮಿ’, ‘ನೀಲಿ’ ಹಾಗೂ ‘ಗಾರ್ಜಿಯಸ್ ರಾಸ್ಕಲ್’ ಎಂಬ ಸಿನಿಮಾಗಳೂ ತೆರೆಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.