ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಜ್ಜಿಗೆ ಹುಳಿಯ ರುಚಿ

Last Updated 4 ಜೂನ್ 2019, 19:45 IST
ಅಕ್ಷರ ಗಾತ್ರ

‘ಮಜ್ಜಿಗೆ ಹುಳಿ’ ಎಂದಾಕ್ಷಣ ಹಲವರ ಬಾಯಲ್ಲಿ ನೀರೂರುತ್ತದೆ. ಈ ಶೀರ್ಷಿಕೆ ಇಟ್ಟುಕೊಂಡೇ ನಿರ್ಮಾಣವಾಗಿರುವ ಚಿತ್ರವೊಂದು ಇದೇ ಶುಕ್ರವಾರ ತೆರೆಕಾಣುತ್ತಿದೆ. ರವೀಂದ್ರ ಕೊಟಕಿ ಇದರ ನಿರ್ದೇಶಕರು. ಕಥೆ, ಸಾಹಿತ್ಯದ ನೊಗವನ್ನೂ ಅವರೇ ಹೊತ್ತಿದ್ದಾರೆ.

ಕೋಣೆಯೊಂದರಲ್ಲಿ ಒಂದು ರಾತ್ರಿ ನಡೆಯುವುದು ಕಥೆ ಇದು. 28 ಪಾತ್ರಗಳ ಸುತ್ತ ಕಥೆ ಸುತ್ತಲಿದೆಯಂತೆ. ಹೊಸ ಜೋಡಿಯೊಂದು ಮೊದಲ ರಾತ್ರಿ ಸುಖ ಅನುಭವಿಸಲು ಹೋಟೆಲ್‍ಗೆ ಹೋಗುತ್ತದೆ. ಆಗ ಅವರ ಬದುಕಿನಲ್ಲಿ ಏನೆಲ್ಲಾ ಅವಘಡಗಳು ಸಂಭವಿಸುತ್ತವೆ ಎನ್ನುವುದೇ ‘ಮಜ್ಜಿಗೆ ಹುಳಿ’ಯ ಹೂರಣ. ಇದಕ್ಕೆ ನಿರ್ದೇಶಕರು ಹಾಸ್ಯದ ಲೇಪನ ಹಚ್ಚಿದ್ದಾರೆ.

‘ಚಿತ್ರದಲ್ಲಿ ಬಾಡೂಟ ಇದೆ ಎಂದು ಬರುವವರಿಗೆ ಮಜ್ಜಿಗೆ ಹುಳಿ ಸಿಗುವುದು ಗ್ಯಾರಂಟಿ’ ಎಂದು ನಕ್ಕರು ನಿರ್ದೇಶಕ ರವೀಂದ್ರ ಕೊಟಕಿ.

ಯೋಗರಾಜ ಭಟ್ಟರು ಚಿತ್ರದ ಒನ್ ಲೈನ್ ಸ್ಟೋರಿ ಕೇಳಿ ಪ್ರಾರಂಭ ಮತ್ತು ಅಂತ್ಯಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರಂತೆ.

ದೀಕ್ಷಿತ್‌ ವೆಂಕಟೇಶ್‌ ಈ ಚಿತ್ರದ ನಾಯಕ. ಚಿತ್ರದಲ್ಲಿ ಅವರು ಮುಗ್ಧ ಹಾಗೂ ಸೂಕ್ಷತೆ ಇರುವ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ.

ನಾಯಕಿ ರೂ‍ಪಿಕಾ, ‘ನಾನು ಮೂಲತಃ ಡಾನ್ಸರ್‌. ಮೊದಲ ಬಾರಿಗೆ ಈ ಚಿತ್ರದಲ್ಲಿ ಟಪ್ಪಾಂಗುಚ್ಚಿ ಹಾಡಿಗೆ ಹೆಜ್ಜೆ ಹಾಕಿರುವೆ. ಕಾಮಿಡಿ ಚಿತ್ರದಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ’ ಎಂದು ಹೇಳಿಕೊಂಡರು.

‘ಹೆಣ್ಣುಮಕ್ಕಳಿಗೂ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಗಿದೆ. ಸಂಭಾಷಣೆ ಬೋಲ್ಡ್ ಆಗಿದೆ. ಗಂಡನಿಗೆ ಕಷ್ಟಬಂದಾಗ ಅವರಿಗೆ ರಕ್ಷಣೆ ನೀಡುವುದು ನನ್ನ ಪಾತ್ರ’ ಎಂದು ಗುಟ್ಟು ಬಿಟ್ಟುಕೊಟ್ಟರು.

ಚಿತ್ರಕ್ಕೆ ಎಸ್. ರಾಮಚಂದ್ರ ಮತ್ತು ರಘುರಾಜು ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT