ಜೆನಿಫರ್, ಮಲೈಕಾ ‘ಯೋಗಾಯೋಗ’

ಮಂಗಳವಾರ, ಮೇ 21, 2019
32 °C
malaika arora

ಜೆನಿಫರ್, ಮಲೈಕಾ ‘ಯೋಗಾಯೋಗ’

Published:
Updated:
Prajavani

ಬಾಲಿವುಡ್‌ನ ಕಾಯಂ ಜೀರೊ ಫಿಗರ್ ಬೆಡಗಿ ಮಲೈಕಾ ಅರೋರ ಈಗಂತೂ ಸುದ್ದಿಯ ಕೇಂದ್ರಬಿಂದು. ಅರ್ಬಾಜ್ ಖಾನ್ ಜತೆಗಿನ ವಿಚ್ಛೇದನ, ಗೆಳಯ ಅರ್ಜುನ್‌ ಕಪೂರ್ ಜತೆಗಿನ ಸುತ್ತಾಟ, ಮದುವೆ ಕುರಿತ ಸುದ್ದಿಗಳಲ್ಲೇ ಮಲೈಕಾ ಮಾಧ್ಯಮಗಳ ಗಮನ ಸೆಳೆಯುತ್ತಿದ್ದರು. ವೈಯಕ್ತಿಕ ಜೀವನದ ಏರಿಳಿತಗಳ ನಡುವೆಯೂ ಮಲೈಕಾ ತಮ್ಮ ದೇಹಸಿರಿಯ ಬಗ್ಗೆ ನಿರ್ಲಕ್ಷ್ಯ ವಹಿಸಿದವರಲ್ಲ.

ಅವರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಗುಟ್ಟು ವರ್ಕೌಟ್ ಮತ್ತು ಯೋಗ. ಈ ಯೋಗವೇ ಇದೀಗ ಅಮೆರಿಕದ ಖ್ಯಾತ ಪಾಪ್ ಗಾಯಕಿ ಜೆನಿಫರ್ ಲೊಪೆಜ್ ಜತೆಗೂಡಿ ಯೋಗ ಸ್ಟಾರ್ಟ್‌ ಅಪ್ ಮಾಡಲು ಕಾರಣವಾಗಿದೆ. 

ಜೆನಿಫರ್ ತನ್ನ ಭಾವೀ ಪತಿ ಬೇಸ್‌ಬಾಲ್ ಆಟಗಾರ ಅಲೆಕ್ಸ್ ರೋಡ್ರಿಗಸ್ ಹಾಗೂ ಮಲೈಕಾ ಜತೆಗೂಡಿ ‘ಸರ್ವ’ ಅನ್ನುವ ಯೋಗ ಸ್ಟಾರ್ಟ್ಅಪ್ ಶುರು ಮಾಡಲಿದ್ದಾರಂತೆ. ಭಾರತೀಯ ಯೋಗದ ಕುರಿತು ಜಾಗತಿಕ ಮಾರುಕಟ್ಟೆಯಲ್ಲಿ ಅಪಾರವಾದ ಬೇಡಿಕೆ ಇದ್ದು, ಇದನ್ನು ಸ್ಟಾರ್ಟ್ಅಪ್ ಮೂಲಕ ಜಗತ್ತಿನಾದ್ಯಂತ ಯೋಗಪ್ರಿಯರಿಗೆ ತಲುಪಿಸುವ ಕೆಲಸ ಮಾಡಲಿದ್ದಾರಂತೆ ಜೆನಿಫರ್ ಮತ್ತು ಮಲೈಕಾ. 

ಯೋಗಿ ಕಂ ನವೋದ್ಯಮಿ ಸರ್ವೇಶ್ ಶಶಿ ಸ್ಟಾರ್ಟ್ಅಪ್ ಕಂಪನಿ ಆರಂಭಿಸಲಿದ್ದು, ಜೆನಿಫರ್, ಮಲೈಕಾ ಹಣ ಹೂಡಲಿದ್ದಾರೆ. ಜಾಗತಿಕ ಮಟ್ಟದಲ್ಲಿ ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮುದಾಯವೊಂದನ್ನು ರೂಪಿಸುವ ಉದ್ದೇಶವನ್ನು ಈ ಸ್ಟಾರ್ಟ್ಅಪ್ ಹೊಂದಿದೆ. ಯೋಗದ ಜತೆಗೆ ಆರ್ಟ್ ಸ್ಟುಡಿಯೊ, ಲೈಫ್ ಸ್ಟೈಲ್ ಉತ್ಪನ್ನಗಳಿಗೆ ಸಂಬಂಧಪಟ್ಟ ಕೆಲಸವನ್ನೂ ಇದು ಮಾಡಲಿದೆ. 

‘ಪ್ರತಿನಿತ್ಯ ಯೋಗಾಭ್ಯಾಸ ಮಾಡುವ ಮೂಲಕ ನಾನು ವೈಯಕ್ತಿಕ ನೆಲೆಯಲ್ಲಿ ಅಪಾರ ಪ್ರಯೋಜನ ಪಡೆದಿದ್ದೇನೆ. ಮಾನಸಿಕ ಮತ್ತು ದೈಹಿಕವಾಗಿ ಯೋಗದಿಂದ ನನ್ನ ಜೀವನದಲ್ಲಿ ಗಮನಾರ್ಹ ಬದಲಾವಣೆಯಾಗಿದೆ’ ಎಂದು ಜೆನಿಫರ್ ಹೇಳಿಕೊಂಡಿದ್ದಾರೆ. 

‘ಸ್ಟಾರ್ಟ್ ಅಪ್ ಕಂಪನಿಯ ಭಾಗವಾಗಿರುವುದು  ನನಗೆ ಹೆಮ್ಮೆ ತಂದಿದೆ. ಲಕ್ಷಾಂತರ ಮಂದಿ ತಮ್ಮ ಆರೋಗ್ಯ ಮತ್ತು ಫಿಟ್‌ನೆಸ್‌ಗಾಗಿ ಈ ಆ್ಯಪ್‌ನ ಭಾಗವಾಗಲಿದ್ದಾರೆ’ ಎಂದು ಮಲೈಕಾ ಹೆಮ್ಮೆಯಿಂದ ನುಡಿದಿದ್ದಾರೆ. 

ಮಲೈಕಾ, ಜೆನಿಫರ್ ಲೊಪೆಜ್ ಜತೆಗೂಡಿ ತೆಗೆಸಿಕೊಂಡಿರುವ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿ ಕೊಂಡಿರುವ ಸರ್ವೇಶ್, ‘ಇಬ್ಬರು ಪ್ರಭಾವಿ ಮಹಿಳೆಯರಿಗೆ ನಾನು ಧನ್ಯವಾದ ಹೇಳಬಯಸುತ್ತೇನೆ. ಇವರು ನನಗಷ್ಟೇ ಅಲ್ಲ ಲಕ್ಷಾಂತರ ಮಂದಿಗೆ ಸ್ಫೂರ್ತಿ ತುಂಬಬಲ್ಲವರು’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.  ಮಲೈಕಾ ಮತ್ತು ಜೆನಿಫರ್ ದೇಹ ಸೌಂದರ್ಯದ ಗುಟ್ಟಿನ ಬಗ್ಗೆ ತಲೆಕೆಡಿಸಿಕೊಂಡಿದ್ದ ಅಭಿಮಾನಿಗಳೀಗ ಯೋಗ ಸ್ಟಾರ್ಟ್ಅಪ್‌ ಮೂಲಕ ಫಿಟ್‌ನೆಸ್ ಕಾಯ್ದುಕೊಳ್ಳಬಹುದು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !