ಸೋಮವಾರ, ಜನವರಿ 27, 2020
24 °C

ಮಲಾಲಾ ಬಯೋಪಿಕ್‌ ಜನವರಿ 31ಕ್ಕೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಧ್ವನಿ ಎತ್ತಿದ ಕಾರಣಕ್ಕೆ ತಾಲಿಬಾನ್‌ ಉಗ್ರರ ದಾಳಿಗೆ ಒಳಗಾದ ಪಾಕಿಸ್ತಾನದ ಧೀರ ಬಾಲಕಿ ಮಲಾಲಾ ಯುಸೂಫ್‌ಝೈ ಅವರ ಜೀವನಕತೆಯಾಧಾರಿತ ‘ಗುಲ್‌ ಮಕಾಯ್‌’ ಚಿತ್ರವು ಜನವರಿ 31ರಂದು ಬಿಡುಗಡೆಯಾಗುತ್ತಿದೆ.

 ಈ ಚಿತ್ರವನ್ನು ನಿರ್ದೇಶಿಸಿದವರು ಎಚ್‌ಇ ಅಜ್ಮದ್‌ ಖಾನ್‌. ಬಂಡವಾಳ ಹೂಡಿದ್ದು ಸಂಜಯ್‌ ಸಿಂಗ್ಲಾ. ಈ ಚಿತ್ರದಲ್ಲಿ ಮಲಾಲಾ ಪಾತ್ರ ನಿರ್ವಹಿಸಿದವರು ನಟಿ ರೀಮ್‌ ಶೇಖ್‌. ಈ ಚಿತ್ರದಲ್ಲಿ ದಿವ್ಯಾ ದತ್ತಾ, ಪಂಕಜ್‌ ತ್ರಿಪಾಠಿ, ಅತುಲ್‌ ಕುಲಕರ್ಣಿ ಹಾಗೂ ಮುಕೇಶ್‌ ರಿಷಿ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಧ್ವನಿ ಎತ್ತಿದ್ದ ಕಾರಣಕ್ಕೆ ಮಲಾಲಾ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿ ಆಕೆಯ ಮೇಲೆ ಗುಂಡು ಹಾರಿಸಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡ ಮಲಾಲಾಳನ್ನು ಪಾಕಿಸ್ತಾನದಿಂದ ಬ್ರಿಟನ್‌ಗೆ ಕರೆತಂದು ಕ್ವೀನ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹಲವು ಶಸ್ತ್ರಚಿಕಿತ್ಸೆಗಳ ನಂತರ ಮಲಾಲಾ ಚೇತರಿಸಿಕೊಂಡಿದ್ದರು. ಮಲಾಲಾ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಪಾತ್ರವಾಗಿದ್ದರು. ಇದೇ ಕತೆಯನ್ನು ಚಿತ್ರ ಹೊಂದಿದೆ ಎನ್ನಲಾಗಿದೆ.

ಇದನ್ನೂ ಓದಿ: ಕಾಶ್ಮೀರದ ಬಗ್ಗೆ ಮಲಾಲಾ ಮಾತು;ಪಾಕ್‌ ಅಲ್ಪಸಂಖ್ಯಾತ ಹೆಣ್ಣುಮಕ್ಕಳ ನೆನಪಿಸಿದ ಶೋಭಾ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು