‘ಹೀರೊ’ಗೆ ಜತೆಯಾದ ಮಾಳವಿಕಾ

ಬುಧವಾರ, ಜೂನ್ 19, 2019
26 °C
ವಿಜಯ್ ದೇವರಕೊಂಡಗೆ ನಾಯಕಿಯಾದ ಮಾಳವಿಕಾ

‘ಹೀರೊ’ಗೆ ಜತೆಯಾದ ಮಾಳವಿಕಾ

Published:
Updated:
Prajavani

‘ಅರ್ಜುನ್ ರೆಡ್ಡಿ’ ಖ್ಯಾತಿ ನಟ ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾ ‘ಹೀರೊ’ದಲ್ಲಿ ನಾಯಕಿಯಾಗಿ ನಟಿ ಮಾಳವಿಕಾ ಮೋಹನನ್ ಆಯ್ಕೆಯಾಗಿದ್ದಾರೆ. ತಮಿಳು, ತೆಲುಗು ದ್ವಿಭಾಷೆಯಲ್ಲಿ ಏಕಕಾಲಕ್ಕೆ ಚೀತ್ರೀಕರಣವಾಗಲಿರುವ ಈ ಚಿತ್ರದ ಮುಹೂರ್ತ ಈಚೆಗೆ ಹೈದರಾಬಾದ್‌ನಲ್ಲಿ ನಡೆಯಿತು. 

‘ಪೆಟ್ಟಾ’ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್‌ಗೆ ಜೋಡಿಯಾಗಿ ಅಭಿನಯಿಸಿದ್ದ ಮಾಳವಿಕಾ, ‘ಹೀರೊ’ದಲ್ಲಿ ಸಂಗೀತಗಾರ್ತಿಯ ಪಾತ್ರ ಮಾಡುತ್ತಿದ್ದಾರೆ. ವಿಜಯ್ ಅವರದ್ದು ಬೈಕ್ ರೇಸರ್ ಪಾತ್ರ. ಆನಂದ ಅಣ್ಣಾಮಲೈ ನಿರ್ದೇಶನದ ಈ ಚಿತ್ರ, ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ವಿಶೇಷ. 

‘ವಿಜಯ್ ದೇವರಕೊಂಡ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅವರೊಂದಿಗೆ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಸಂತಸ ತಂದಿದೆ. ಕಾಕಾ ಮುಟೈ ಸಿನಿಮಾಕ್ಕೆ ಸಂಭಾಷಣೆ ಬರೆದು ರಾಷ್ಟ್ರಪ್ರಶಸ್ತಿ ಪಡೆದಿದ್ದ ಆನಂದ್ ಈ ಚಿತ್ರದ ನಿರ್ದೇಶಕರು. ಅವರೊಂದಿಗೆ ಕೆಲಸ ಮಾಡುವುದು ಹುರುಪು ತಂದಿದೆ’ ಎಂದು ಮಾಳವಿಕಾ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !