ಶುಕ್ರವಾರ, ಸೆಪ್ಟೆಂಬರ್ 20, 2019
27 °C
ತುಂಡುಡುಗೆ ತೊಟ್ಟಿದ್ದಕ್ಕಾಗಿ ಮಾಳವಿಕಾ ಮೋಹನನ್ ಟ್ರೋಲ್ ಆಗಿದ್ದಾರೆ

ಉಡುಗೆಗಾಗಿ ಮಾಳವಿಕಾ ಟ್ರೋಲ್

Published:
Updated:
Prajavani

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಜತೆ ‘ಪೆಟ್ಟಾ’ದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿ ಮಾಳವಿಕಾ ಮೋಹನನ್ ನೆಟ್ಟಿಗರ ಟ್ರೋಲ್‌ಗೆ ಗುರಿಯಾಗಿದ್ದಾರೆ.

ತೋಳಿಲ್ಲದ ಮೇಲುಡುಗೆ, ತಿಳಿ ನೀಲಿಯ ಶಾರ್ಟ್ಸ್‌ ಧರಿಸಿ ಮಾದಕ ಭಂಗಿಯಲ್ಲಿ ಕುಳಿತಿರುವ ಚಿತ್ರವೊಂದನ್ನು ಮಾಳವಿಕಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದರು. ಈ ಚಿತ್ರಕ್ಕಾಗಿ ನೆಟ್ಟಿಗರಿಂದ ಮಾಳವಿಕಾ ಟ್ರೋಲ್‌ಗೊಳಗಾಗಿದ್ದಾರೆ. ‘ಸಭ್ಯವಾಗಿ ಉಡುಪು ಧರಿಸಿ’, ‘ಮಹಿಳೆಯಾಗಿ ಇಂಥ ಉಡುಪು ಧರಿಸುವುದು ಸರಿಯಿಲ್ಲ...’ ಬುದ್ಧಿಮಾತುಗಳು ಸೇರಿದಂತೆ ಮಹಿಳೆ ಧರಿಸಬೇಕಾದ ಉಡುಪುಗಳ ಬಗ್ಗೆಯೇ ನೆಟ್ಟಿಗರು ಉಚಿತವಾಗಿ ಸಲಹೆ ನೀಡಿದ್ದಾರೆ.

ಇದಕ್ಕೆ ತಲೆಕೆಡಿಸಿಕೊಳ್ಳದ ಮಾಳವಿಕಾ, ಮತ್ತೊಂದು ಚಿತ್ರವನ್ನು ಹಂಚಿಕೊಂಡು, ‘ಗೌರವಯುತವಾಗಿರುವ ಹುಡುಗಿ ಏನು ಧರಿಸಬೇಕೆಂಬ ಬಗ್ಗೆ ಎಷ್ಟೊಂದು ಕಾಮೆಂಟ್‌ಗಳು, ಅಭಿಪ್ರಾಯಗಳು... ಇದೇ ಟಿಪ್ಪಣಿಗೆ... ತಗೊಳ್ಳಿ ಮತ್ತೊಂದು ನನ್ನ ಚಿತ್ರ. ನನ್ನಷ್ಟಿದ ಗೌರವಯುತವಾದ ಉಡುಗೆ ತೊಟ್ಟು ಕುಳಿತಿರುವೆ...’ ಎಂದು ಮಾಳವಿಕಾ ಇನ್‌ಸ್ಟಾಗ್ರಾಂನಲ್ಲಿ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ. 

ಖ್ಯಾತ ಸಿನಿಮಾಟೋಗ್ರಾಫರ್ ಕೆ.ಯು. ಮೋಹನನ್ ಅವರ ಮಗಳಾಗಿರುವ ಮಾಳವಿಕಾ, ಪೆಟ್ಟಾ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಸದ್ಯಕ್ಕೆ ಮಾಳವಿಕಾ, ವಿಜಯ್ ದೇವರಕೊಂಡ ಜೊತೆಗೆ ‘ಹೀರೊ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. 

Post Comments (+)