ಮಲಯಾಳ ಕಿರುತೆರೆ ನಟ ಸಿದ್ದಾರ್ಥ ವೇಣುಗೋಪಾಲ್ (41) ಅವರು ಮೃತಪಟ್ಟಿದ್ದಾರೆ. ಈ ಕುರಿತು ನಟಿ ಸೀಮಾ ಜಿ. ನಾಯರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.

‘ವೇಣುಗೋಪಾಲ್ ಇನ್ನಿಲ್ಲ ಎಂದು ಹೇಳಲು ಮನಸ್ಸಿಗೆ ತುಂಬಾ ಭಾರವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರನ್ನು ಗುಣಮುಖರಾಗಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದೇವೆ. ಅವರು ಹೆಚ್ಚು ನೋವು ಅನುಭವಿಸುವುದು ಬೇಡ ಎಂದು ದೇವರು ಇಂದು ನಿರ್ಧರಿಸಿದಂತಿದೆ. ಅವರ ನೆನಪು ನಮ್ಮ ಜೊತೆ ಶಾಶ್ವತವಾಗಿ ಉಳಿಯಲಿದೆ' ಎಂದು ಸೀಮಾ ಅವರು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಿದ್ದಾರ್ಥ ಅವರಿಗೆ ಸಂತಾಪ ಸೂಚಿಸಿದ ನಟ ಕಿಶೋರ್ ಸತ್ಯ, ‘ಮತ್ತೊಬ್ಬ ಕಲಾವಿದ ಅಕಾಲಿಕವಾಗಿ ಅಗಲಿದ್ದಾರೆ. ವೇಣುಗೋಪಾಲ್ ಅವರು ಕಿರುತೆರೆಯ ಧಾರಾವಾಹಿಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದರು. ಸೀಮಾ, ಸಿದ್ದಾರ್ಥ ಅವರ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದರು. ವೇಣುಗೋಪಾಲ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಹಾಗೂ ಸೀಮಾ ಅವರ ಸಹಕಾರ ಮನೋಭಾವಕ್ಕೆ ಕೃತಜ್ಞತೆ ತಿಳಿಸುತ್ತೇನೆ’ ಎಂದಿದ್ದಾರೆ

ಕೇರಳದ ತ್ರಿಶೂರ್ ಚಾಲಕುಡಿಯವರಾದ ಸಿದ್ಧಾರ್ಥ, ಕಾಲೇಜು ದಿನಗಳಲ್ಲೇ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದರು. ಆರಂಭದಲ್ಲಿ ನಿರೂಪಕರಾಗಿ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ 'ಕಸ್ತೂರಿಮಾನ್' ಮತ್ತು 'ಭಾಗ್ಯಜಾತಕಂ' ನಂತಹ ಧಾರಾವಾಹಿಗಳ ಮೂಲಕ ನಟರಾಗಿ ಗುರುತಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.