‘ಮಾಲ್ಗುಡಿ ಡೇಸ್’ಗೆ ಧನರಾಜ್ ಎಂಟ್ರಿ

ಮಂಗಳವಾರ, ಏಪ್ರಿಲ್ 23, 2019
31 °C

‘ಮಾಲ್ಗುಡಿ ಡೇಸ್’ಗೆ ಧನರಾಜ್ ಎಂಟ್ರಿ

Published:
Updated:
Prajavani

ನಟ ವಿಜಯ್‌ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿರುವ ‘ಮಾಲ್ಗುಡಿ‌ ಡೇಸ್’ ಚಿತ್ರ‌ ಶೂಟಿಂಗ್‌ಗೂ ಮೊದಲೇ ಟೈಟಲ್‌ನಿಂದ ಸುದ್ದಿಯಾಗಿತ್ತು. ಪ್ರಸ್ತುತ‌ ಚಿತ್ರತಂಡ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸುತ್ತಮುತ್ತ ಶೂಟಿಂಗ್‌ ನಡೆಸುತ್ತಿದೆ.

ಬಿಗ್‌ಬಾಸ್‌ ಸೀಸನ್ 6ರ ಸ್ಪರ್ಧಿ ಧನರಾಜ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೂಲತಃ ಅವರು ಡಬ್ಬಿಂಗ್ ಆರ್ಟಿಸ್ಟ್. ಚಿತ್ರನಟರಾಗಿರುವ ಅವರಿಗೆ ಸಿನಿಮಾ‌ ಹೊಸದಲ್ಲ.

ಅವರ ಪಾತ್ರ ಕುರಿತು ಚಿತ್ರದ ನಿರ್ದೇಶಕ ಕಿಶೋರ್ ಮೂಡಬಿದ್ರೆ ಹೇಳುವುದು ಹೀಗೆ: ‘ಸಿನಿಮಾದಲ್ಲಿ ಧನರಾಜ್ ಅವರದ್ದು ಪ್ರಮುಖ ಪಾತ್ರ. ಚಿತ್ರಕತೆ ಸಾಗುವಿಕೆಯಲ್ಲಿ ಅವರ ಪಾತ್ರ ಬಹಳ ಗಮನ ಸೆಳೆಯುತ್ತದೆ’ ಎನ್ನುತ್ತಾರೆ.

ಈಗಾಗಲೇ ಸತತ ಹತ್ತು ದಿನಗಳ ಕಾಲ ವಿಜಯ್‌ ರಾಘವೇಂದ್ರ ಸೇರಿದಂತೆ ಸಹನಟರೊಟ್ಟಿಗೆ ಧನರಾಜ್‌ ಚಿತ್ರೀಕರಣದಲ್ಲಿ ಬ್ಯುಸಿಯಾಗಿರಲಿದ್ದಾರೆ. ಕೆ. ರತ್ನಾಕರ್ ಕಾಮತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !