‘ಮಳ್ಳಿ ಮಳ್ಳಿ ಚೂಸಾ’ ಟೀಸರ್‌ ಬಿಡುಗಡೆ

7

‘ಮಳ್ಳಿ ಮಳ್ಳಿ ಚೂಸಾ’ ಟೀಸರ್‌ ಬಿಡುಗಡೆ

Published:
Updated:

ತೆಲುಗಿನ ಸ್ಟಾರ್‌ ನಿರ್ದೇಶಕ ಕೆ. ಕೋಟೇಶ್ವರ ರಾವ್‌ ತಮ್ಮ ಮಗ ಅನುರಾಗ್‌ನನ್ನು ಚಿತ್ರರಂಗಕ್ಕೆ ಪರಿಚಯಿಸಲೆಂದೇ ನಿರ್ಮಿಸಿರುವ ಚಿತ್ರ ‘ಮಳ್ಳಿ ಮಳ್ಳಿ ಚೂಸಾ’ ದ ಮೋಷನ್‌ ಟೀಸರ್‌ ಬಿಡುಗಡೆಯಾಗಿದೆ. 

ಸಾಯಿದೇವ ರಾಮನ್‌ ತಮ್ಮ ಕೃಷಿ ಕ್ರಿಯೇಷನ್ಸ್‌ ಬ್ಯಾನರ್‌ನಡಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅನುರಾಗ್‌ ಇಬ್ಬರು ನಾಯಕನಟಿಯರ ಜೊತೆ ಡುಯೆಟ್‌ ಹಾಡಿದ್ದಾರೆ. ಶ್ವೇತಾ ಅವಸ್ಥಿ ಮತ್ತು ಕೈರ್ವಿ ಠಕ್ಕರ್‌ ಈ ಪ್ರೇಮ ಕಥಾನಕವುಳ್ಳ ಚಿತ್ರದ ನಾಯಕಿಯರು. ಇಟಿವಿ ಪ್ರಭಾಕರ್‌, ಟಿಎನ್ಆರ್‌, ಮಿರ್ಚಿ ಅಪ್ಪಾಜಿ, ಬ್ಯಾಂಕ್‌ ಶ್ರೀನು, ಮಧುಮಣಿ, ಪಾವನಿ, ಪ್ರಭಾವತಿ, ಜಯಲಕ್ಷ್ಮಿ, ರಿತು ಚೌಧರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಿರುಪತಿ ಜಶುವಾ ಬರೆದಿರುವ ಹಾಡುಗಳಿಗೆ ಶ್ರವಣ್‌ ಭಾರದ್ವಾಜ್‌ ಸಂಗೀತ ನೀಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !