ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಪತ್ರಕರ್ತೆಯರು ನನ್ನ ದಬಾವಣೆ ಮಾಡಿದ್ದರು -ಮಲ್ಲಿಕಾ ಶೆರಾವತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲ ಪತ್ರಕರ್ತೆಯರು ನನ್ನ ದಬಾವಣೆ ಮಾಡಿದ್ದರು ಎಂದು ಬಾಲಿವುಡ್‌ನಲ್ಲಿ ಬೋಲ್ಡ್‌ ಬೆಡಗಿ ಎಂದೇ ಖ್ಯಾತಿಯಾಗಿರುವ ಮಲ್ಲಿಕಾ ಶೆರಾವತ್‌ ಹೇಳಿದ್ದಾರೆ. 

’ಬಾಲಿವುಡ್‌ ಬಬ್ಲಿ’ ಸಿನಿಮಾ ಸುದ್ದಿ ತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ. 

ನನ್ನ ಬೋಲ್ಡ್‌ ನಟನೆಯನ್ನು ಸಹಿಸದ ಕೆಲ ಮಹಿಳಾ ಜರ್ನಲಿಸ್ಟ್‌ಗಳು ನನ್ನ ಟೀಕೆ ಮಾಡುತ್ತಿದ್ದರು. ಅವರ ಕಾಟ ತಡೆಯಲಾರದೆ ನಾನು ವಿದೇಶಕ್ಕೆ ಹೋದೆ. ಆದರೆ ಪುರುಷ ಪತ್ರಕರ್ತರು ನನಗೆ ಯಾವುದೇ ತೊಂದರೆ ಮಾಡಲಿಲ್ಲ, ನನ್ನ ನಟನೆಯನ್ನು ಅವರು ಇಷ್ಟಪಟ್ಟಿದ್ದರು ಎಂದು ಮಲ್ಲಿಕಾ ಹೇಳಿದ್ದಾರೆ. 

ಆ ಮಹಿಳಾ ಜರ್ನಲಿಸ್ಟ್‌ಗಳು ನನ್ನ ’ಪೋರ್ನ್‌ ಸ್ಟಾರ್’ ಎಂಬಂತೆ ಬಿಂಬಿಸಿದ್ದರು ಎಂದು ಮಲ್ಲಿಕಾ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ವೆಬ್‌ ಸೀರಿಸ್‌ವೊಂದರಲ್ಲಿ ಮಲ್ಲಿಕಾ ಕಾಣಿಸಿಕೊಳ್ಳುತ್ತಿದ್ದಾರೆ.

ಸೋಮಿಕ್‌ ಸೇನ್‌ ನಿರ್ದೇಶನ ಮಾಡುತ್ತಿರುವ ’ನಬಾಕ್‌’ ಸರಣಿಯಲ್ಲಿ ಮಲ್ಲಿಕಾ ನಟಿಸುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು