ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ದಾಖಲೆ ಬರೆದ ಮಮ್ಮುಟ್ಟಿ

Last Updated 1 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಮಲಯಾಳ ಚಿತ್ರರಂಗದ ಸೂಪರ್ ಸ್ಟಾರ್‌ ಮಮ್ಮುಟ್ಟಿ ಅವರಿಗೆ 2019 ಅತ್ಯಂತ ಹೆಚ್ಚು ಖುಷಿ ನೀಡಿದ ವಿಶೇಷವಾದ ವರ್ಷ. ಈ ವರ್ಷ ಅವರು ನಟಿಸಿದ ಎಲ್ಲ ಚಿತ್ರಗಳೂ ಭಾರಿ ಯಶಸ್ಸು ಕಂಡಿದ್ದು ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್‌ ಮಾಡಿವೆ. ಅಭಿಮಾನಿಗಳು ಮತ್ತು ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿವೆ.

ವಿಷಯ ಅದಲ್ಲ. ಭಾರತೀಯ ಚಲನಚಿತ್ರರಂಗದ ಪ್ರತಿಷ್ಠಿತ ಫಿಲ್ಮ್‌ಫೇರ್‌ ಪ್ರಶಸ್ತಿಗೆಈ ವರ್ಷ ಮೂರು ಬೇರೆ, ಬೇರೆ ಭಾಷೆಗಳಲ್ಲಿ ಮಮ್ಮುಟ್ಟಿ ಹೆಸರು ನಾಮನಿರ್ದೇಶನಗೊಂಡಿದೆ. ಒಬ್ಬ ನಟ ಏಕಕಾಲಕ್ಕೆ ಮೂರು ಬಾರಿ ನಾಮ ನಿರ್ದೇಶನಗೊಳ್ಳುತ್ತಿರುವುದು ಅಪರೂಪದ ಸಾಧನೆ. ಫಿಲ್ಮ್‌ಫೇರ್ ಪ್ರಶಸ್ತಿ ಇತಿಹಾಸದಲ್ಲಿ ಇದೇ ಮೊದಲು.

ತಮಿಳು ಚಿತ್ರ ‘ಪೆರಂಬು’, ತೆಲುಗಿನಲ್ಲಿ ಭಾರಿ ಸದ್ದು ಮಾಡಿದ ‘ಯಾತ್ರಾ’ ಮತ್ತು ಮಲಯಾಳದ ‘ಉಂಡಾ’ ಚಿತ್ರಗಳ ನಟನೆಗಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ಅವರ ಹೆಸರು ನಾಮನಿರ್ದೇಶನಗೊಂಡಿದೆ.

ಮಲಯಾಳ ಚಿತ್ರರಂಗದ ಐದು ದಶಕಗಳ ಪಯಣದಲ್ಲಿಅತ್ಯುತ್ತಮ ನಟನೆಗಾಗಿಮಮ್ಮುಟ್ಟಿ ಇದುವರೆಗೂ 12 ಬಾರಿ ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿದ್ದಾರೆ. ಅವರ ಸಮಕಾಲೀನ ಮತ್ತೊಬ್ಬ ನಟ ಮೋಹನ್‌ ಲಾಲ್‌ 8 ಬಾರಿ ಕಪ್ಪುಸುಂದರಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಂತೋಷ್‌ ವಿಶ್ವನಾಥನ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಒನ್‌’ ಚಿತ್ರದಲ್ಲಿ ಕೇರಳ ಮುಖ್ಯಮಂತ್ರಿ ಪಾತ್ರದಲ್ಲಿ ಮಮ್ಮುಟ್ಟಿ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಮೊನ್ನೆತಾನೇ ಪೋಸ್ಟರ್‌ನ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ.

ಕಳರಿಪಯಟ್ಟು ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪದ್ಮಕುಮಾರ್‌ ನಿರ್ದೇಶನದ ಐತಿಹಾಸಿಕ ಚಿತ್ರ ‘ಮಾಮಾಂಕಂ’ ಮತ್ತು ಅಜಯ್‌ ವಾಸುದೇವನ್‌ ನಿರ್ದೇಶನದ ಆಕ್ಷನ್‌ ಚಿತ್ರ ‘ಶೈಲಾಕ್‌’ ಬಿಡುಗಡೆಗೆ ಸಿದ್ಧವಾಗಿವೆ. ‘ಮಾಮಾಂಕಂ’ ಮಮ್ಮುಟ್ಟಿ ನಟಿಸುತ್ತಿರುವ ಅತ್ಯಂತ ದೊಡ್ಡ ಬಜೆಟ್‌ ಚಿತ್ರ ಎಂದು ಹೇಳಲಾಗಿದೆ.

ಮಮ್ಮುಟ್ಟಿ
ಮಮ್ಮುಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT