ಶನಿವಾರ, ನವೆಂಬರ್ 16, 2019
21 °C

‘ಮಾಮಾಂಗಂ’ ಟೀಸರ್ ಹವಾ

Published:
Updated:
Prajavani

ಮಲಯಾಳಂ ನಟ ಮಮ್ಮುಟ್ಟಿ ಅಭಿನಯದ ಪೌರಾಣಿಕ ಚಿತ್ರ ‘ಮಾಮಾಂಗಂ’ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.

ಈ ಸಿನಿಮಾದಲ್ಲಿ ಮಮ್ಮುಟ್ಟಿ ಹೇಗೆ ಕಾಣಿಸಲಿದ್ದಾರೆ ಎಂಬ ಕುತೂಹಲಕ್ಕೆ ಸಿನಿಮಾ ತಂಡ ತೆರೆ ಎಳೆದಿದೆ. ಅವರ ಮೊದಲ ಲುಕ್‌ ಬಿಡುಗಡೆಯಾಗಿದೆ.

ಹಬ್ಬದ ಸಂಭ್ರಮದಲ್ಲಿದ್ದ ಅಭಿಮಾನಿಗಳು ಹಾಗೂ ನಟರು ಈ ಟೀಸರ್‌ ಹಾಗೂ ಮೊದಲ ಲುಕ್‌ ನೋಡಿ ಖುಷಿಯಾಗಿದ್ದಾರೆ. ‘ಮಮ್ಮುಟ್ಟಿ ಇದುವರೆಗೂ ಕಾಣಿಸಿಕೊಳ್ಳದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣುತ್ತಿದ್ದಾರೆ’ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

‘ಮಮ್ಮುಟ್ಟಿ ಅವರನ್ನು ಗುರುತಿಸುವುದೇ ಕಷ್ಟ. ಅವರ ಹೊಸ ಅವತಾರ ಇಷ್ಟವಾಯಿತು’ ಎಂದು ಟ್ವಿಟರ್‌ನಲ್ಲಿ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ಇದಕ್ಕೆ ನೂರಾರು ಲೈಕ್‌ ದೊರೆತಿದ್ದು, ಹೌದು ಎಂಬ ಅಭಿಪ್ರಾಯವನ್ನು ಹೆಚ್ಚಿನ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ತಮ್ಮ 68ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟ ಮಮ್ಮುಟ್ಟಿ, ತಮ್ಮ ಹೊಸ ಸಿನಿಮಾದ ಬಗ್ಗೆ ಉತ್ಸುಕರಾಗಿದ್ದಾರಂತೆ. ಎಂ.ಪದ್ಮಕುಮಾರ್‌ ಅವರ ನಿರ್ದೇಶನದ ಈ ಸಿನಿಮಾ ₹45 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. ಕಾವ್ಯಾ ಫಿಲ್ಮ್‌ ಕಂಪನಿ ನಿರ್ಮಾಣದ ಹೊಣೆ ಹೊತ್ತಿದೆ. ಪ್ರಾಚಿ ತೆಹ್ಲನ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಪ್ರತಿಕ್ರಿಯಿಸಿ (+)