ಮಂಗಳವಾರ, ಮಾರ್ಚ್ 9, 2021
28 °C

ಮಮ್ಮೂಟ್ಟಿ ‘ಪ್ರೀಸ್ಟ್‌’ ಫಸ್ಟ್‌ಲುಕ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲಯಾಳ ಚಿತ್ರರಂಗದ ಸೂಪರ್‌ಸ್ಟಾರ್‌ ಮಮ್ಮೂಟ್ಟಿ ಮೊದಲ ಬಾರಿಗೆ ಮಂಜು ವಾರಿಯರ್‌ ಜತೆ ನಟಿಸುತ್ತಿರುವ ಹಾರರ್‌, ಥ್ರಿಲ್ಲರ್‌ ಚಿತ್ರಕ್ಕೆ ‘ದ ಪ್ರೀಸ್ಟ್‌’ ಎಂದು ಹೆಸರಿಡಲಾಗಿದ್ದು, ಚಿತ್ರದ ಪೋಸ್ಟರ್‌ನ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ.    

ದಟ್ಟವಾಗಿ ಆವರಿಸಿರುವ ಕಾರ್ಮೋಡಗಳ ನಡುವೆ ಚರ್ಚ್‌ ಮುಂದೆ ಪಾದ್ರಿಯ ಧಿರಿಸಿನಲ್ಲಿ ಮಮ್ಮೂಟ್ಟಿ ಬೈಬಲ್‌ ಓದುತ್ತಿರುವ ಚಿತ್ರ ಭಯ ಬೀಳಿಸುವಂತಿದೆ. ಚಿತ್ರ ಹಾರರ್‌–ಥ್ರಿಲ್ಲರ್‌ ಕತೆ ಹೊಂದಿದೆ ಎಂಬ ಮಾತುಗಳಿಗೆ ಪುಷ್ಠಿ ನೀಡುವಂತಿದೆ. ಮಮ್ಮೂಟ್ಟಿ ಕೂಡ ಈ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಶೀಘ್ರದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದು, ಭಾರಿ ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.  

ಮಮ್ಮೂಟ್ಟಿ ನಟಿಸಿದ ಕಿಟ್ಟಿ, ಶೈಲಾಕ್ ಮತ್ತು ಒನ್‌ ಬಿಡುಗಡೆಗೆ ಸಿದ್ಧವಾಗಿವೆ. ಶೈಲಾಕ್‌ ಜ.23ರಂದು ತೆರೆಗೆ ಬರಲಿದೆ. ರಾಜಕೀಯ ಚಿತ್ರ ‘ಒನ್‌’ ಮಾರ್ಚ್‌–ಏಪ್ರಿಲ್‌ಗೆ ಬರಲಿದೆ. ‘ದ ಪ್ರೀಸ್ಟ್‌’ ಕೂಡ ಇದೇ ವರ್ಷ ಬಿಡುಗಡೆಯಾಗುವ ನಿರೀಕ್ಷೆ ಇದೆ. 

ಜಾಫಿನ್‌ ಟಿ. ಚಾಕೋ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಕತೆ ಕೂಡ ಅವರದ್ದೇ. ನಿಖಿಲ್‌ ವಿಮಲ್‌, ಶ್ರೀನಾಥ್‌ ಭಾಸಿ, ಸಾನಿಯಾ ಅಯ್ಯಪ್ಪನ್‌, ಬೇಬಿ ಮೋನಿಕಾ ರಮೇಶ್‌ ಪಿಶರೋಡಿ, ಜಗದೀಶ್‌ ಮತ್ತು ಮಧುಪಾಲ್‌ ತಾರಾಗಣದಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು