ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮ್ಮುಟ್ಟಿ ಕೇರಳ ಮಖ್ಯಮಂತ್ರಿ!

Last Updated 26 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಕೇರಳದ ಖ್ಯಾತ ನಟ ಮಮ್ಮುಟ್ಟಿ ಕೇರಳದ ಮುಖ್ಯಮಂತ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಥದೊಂದು ಪಾತ್ರಕ್ಕಾಗಿ ಅವರ ಅಭಿಮಾನಿಗಳ ಬಹಳ ದಿನಗಳ ಕಾತರದಿಂದ ಕಾಯುತ್ತಿದ್ದರು. ಮುಂಬರುವ ‘ಒನ್‌’ ಚಿತ್ರದ ಪೋಸ್ಟರ್‌ನ ಫಸ್ಟ್‌ಲುಕ್‌ ಅನ್ನು ಮಮ್ಮುಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೇರಳದ ಅಪ್ಪಟ ರಾಜಕಾರಣಿಯಂತೆ ಬಿಳಿ ಪಂಜೆ ಮತ್ತು ಅಂಗಿಯಲ್ಲಿ ಕುರ್ಚಿಯ ಮೇಲೆ ಆಸೀನರಾಗಿರುವ ಅವರು ಕನ್ನಡಕ ಧರಿಸಿದ್ದಾರೆ.ಈ ಚಿತ್ರವನ್ನು ಸಂತೋಷ್‌ ವಿಶ್ವನಾಥನ್‌ ನಿರ್ದೇಶಿಸಲಿದ್ದಾರೆ.

ರಾಜಕೀಯ ಥ್ರಿಲ್ಲರ್‌ ಚಿತ್ರಕತೆ ಕೇರಳದ ಮಾಜಿ ಮುಖ್ಯಮಂತ್ರಿ ಕಡಕ್ಕಲ್‌ ಚಂದ್ರನ್‌ ಅವರ ಜೀವನದ ಸುತ್ತ ಹೆಣೆಯಲಾಗಿದೆ. ಮಕ್ಕಳ್‌ ಅಚ್ಚಿ ತಮಿಳು ಚಿತ್ರದಲ್ಲಿ ಮಮ್ಮುಟ್ಟಿ ರಾಜಕಾರಣಿಯ ಪಾತ್ರ ನಿರ್ವಹಿಸಿದ್ದರು. ಈಚೆಗೆ ಬಿಡುಗಡೆಯಾದ ತೆಲುಗು ಚಿತ್ರ ‘ಯಾತ್ರಾ’ದಲ್ಲಿಯೂ ರಾಜಕಾರಣಿಯ ಗೆಟಪ್‌ನಲ್ಲಿ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT