ಭಾನುವಾರ, ಜೂನ್ 26, 2022
26 °C

ಮನಸ್ಸು, ನಗು ಇದು ‘ಮನಸ್ಮಿತ’: ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಚಿತ್ರ ‘ಮನಸ್ಮಿತ’. ಅಪ್ಪಣ್ಣ ಸಂತೋಷ್ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ತಾಯಿ ಸೀತಮ್ಮ ವಿ.ಟಿ. ಹೆಸರಿನೊಂದಿಗೆ ಜಮುನ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ದೀಪಿಕಾ ವಿ.ಎ. ಸಹ ನಿರ್ಮಾಪಕರು.

‘ಸಂಗೀತಮಯ ರೋಮ್ಯಾಂಟಿಕ್ ಥ್ರಿಲ್ಲರ್ ವಿಭಾಗದಲ್ಲಿ ಸಂಗೀತದ ನಾನಾ ಮಜಲುಗಳು ಹಾಗೂ ಪ್ರೇಮ ಕಥೆಯನ್ನು ತೋರಿಸಲಾಗಿದೆ. ಈ ಕಥೆ ಎರಡು ಕಾಲಘಟ್ಟದಲ್ಲಿ ನಡೆಯುತ್ತದೆ. ಹುಡುಗಿಯ ಪ್ರೀತಿಯನ್ನು ಪಡೆಯಲು ಹುಡುಗ ತನ್ನನ್ನು ಹೇಗೆ ಸಮರ್ಪಿಸಿಕೊಳ್ಳುತ್ತಾನೆ. ಕುಟುಂಬದಲ್ಲಿ ಆದ ನೋವು, ಕೆಟ್ಟದಾಗಿರುವುದನ್ನು ಹೋಗಲಾಡಿಸಲು ಯಾವ ರೀತಿ ಹೋರಾಡುತ್ತಾನೆ ಎಂಬುದನ್ನು ಮನೋರಂಜನಾತ್ಮಕವಾಗಿ ತೋರಿಸಲಾಗಿದೆ’ ಎಂದಿದೆ ಚಿತ್ರತಂಡ. 

‘ಕಾಲೇಜು ಹುಡುಗನಾಗಿ ಮಡಿಕೇರಿಯ ಚರಣ್‌ಗೌಡ ನಾಯಕ. ಹಲವು ಶೇಡ್ಸ್‌ಗಳಲ್ಲಿ ಕಾಣಿಸಿಕೊಳ್ಳುವ ಬೆಂಗಳೂರಿನ ಸಂಜನಾದಾಸ್ ನಾಯಕಿ. ಗಾಯಕನಾಗಿ ಬಾಲಿವುಡ್‌ನ ಅತುಲ್‌ ಕುಲಕರ್ಣಿ, ನೃತ್ಯಗಾರ್ತಿಯಾಗಿ ಪಲ್ಲವಿ ಪುರೋಹಿತ್, ಮನೆಹಾಳು ಮಾಡುವ ರಾಜೇಂದ್ರ ಕಾರಂತ್, ನಾಯಕನ ತಾಯಿಯಾಗಿ ಶಿಲ್ಪ, ಉಳಿದಂತೆ ಸುಚೇಂದ್ರ ಪ್ರಸಾದ್, ಮೂಗು ಸುರೇಶ್, ಕರಿಸುಬ್ಬು, ವೀಣಾಪೊನ್ನಪ್ಪ, ಸೌಭಾಗ್ಯ, ಪ್ರದೀಪ್‌ಶಾಸ್ತ್ರೀ, ಪ್ರದೀಪ್‌ ಪೂಜಾರಿ ನಟಿಸಿದ್ದಾರೆ.

ಮುದ್ದಾದ ಬಾನುಲಿ ವರದಿ ಹಾಡನ್ನು ಕೆ.ಕಲ್ಯಾಣ್ ಬರೆದಿದ್ದು, ಅದಕ್ಕೆ ಕ್ಲಾಸಿಕಲ್ ಸಂಗೀತವನ್ನು ಒದಗಿಸಿರುವುದು ಹರಿಕಾವ್ಯ. ಇನ್ನುಳಿದಂತೆ, ಮನಮಂದಿರದಿ ಮತ್ತು ಶಂಭೋ ಶಂಕರ ಹಾಡನ್ನು ಸ್ವತಃ ಸಂಗೀತ ನಿರ್ದೇಶಕ ಹರಿಕಾವ್ಯ ಬರೆದಿದ್ದಾರೆ. ನೀಲ ಮೇಘಶ್ಯಾಮ ಕಂಡ ಹಾಡನ್ನು ಮಂಜು ಎಂ. ದೊಡ್ಡಮನಿ ಅವರು ರಚಿಸಿದ್ದಾರೆ. ಈ ಪೈಕಿ ದೇವರ ಹಾಡಿಗೆ ಶಂಕರ್‌ ಮಹದೇವನ್ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಕೆ.ಎಸ್.ಚಂದ್ರಶೇಖರ್, ಸಂಕಲನ ಮಧುತುಂಬಕೆರೆ, ನೃತ್ಯ ಕಲೈ, ಸಾಹಸ ಕೌರವವೆಂಕಟೇಶ್ ಚಿತ್ರಕ್ಕಿದೆ. ಬೆಂಗಳೂರು, ಮರಳವಾಡಿ, ಕೊಡಗಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು