ನಟ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಸಿನಿಮಾ ಮೂಲಕ ನಾಯಕನಾಗಿ ತೆರೆಗೆ ಬರುತ್ತಿದ್ದಾರೆ. ಸಿನಿಮಾ ಜೂನ್ 5ರಂದು ತೆರೆಕಾಣುತ್ತಿದ್ದು, ಶೀಘ್ರದಲ್ಲೇ ಟ್ರೇಲರ್ ರಿಲೀಸ್ ಆಗಲಿದೆ ಎಂದಿದೆ ಚಿತ್ರತಂಡ.

ಇತ್ತೀಚೆಗೆ ಸುದೀಪ್ ಅವರು ಚಿತ್ರದ ತುಣುಕೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಿನಿಮಾದೊಳಗಿನ ಪಾತ್ರಗಳನ್ನು ತಮ್ಮ ದನಿಯಲ್ಲೇ ಪರಿಚಯಿಸಿದ್ದಾರೆ. 2002ರಲ್ಲಿ ಮೈಸೂರಿನಲ್ಲಿ ನಡೆಯುವ ಘಟನೆಗಳ ಸುತ್ತ ಚಿತ್ರದ ಕಥೆ ಇದೆ. ‘ಪದ್ಮ’ ಎಂಬ ಪಾತ್ರದಲ್ಲಿ ಹರಿಣಿ ಶ್ರೀಕಾಂತ್, ‘ಸುಜಿ’ಯಾಗಿ ಕಾಜಲ್ ಕುಂದರ್, ‘ಶ್ಯಾಮ’ನಾಗಿ ಜೈ, ‘ನಾಗಪ್ಪ’ ಎಂಬ ಪಾತ್ರದಲ್ಲಿ ಮಯೂರ್ ಪಟೇಲ್, ‘ಶ್ರೀಧರ್’ ಆಗಿ ಮಂಜು, ‘ಮಹೇಂದ್ರ’ ಎಂಬ ಪಾತ್ರದಲ್ಲಿ ಪ್ರಶಾಂತ್ ಹಿರೇಮಠ ನಟಿಸಿದ್ದಾರೆ. ಇನ್ನು ನಾಯಕ ಸಂಚಿತ್ ‘ಪಚ್ಚ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆತನ ಕಥೆಯೇ ಸಿನಿಮಾ ಎಂದಿದೆ ಚಿತ್ರತಂಡ.

‘ಮ್ಯಾಂಗೋ ಪಚ್ಚ’ ವಿವೇಕ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಮೈಸೂರು ಭಾಗದಲ್ಲಿ ನಡೆಯುವ ಕಥೆಯುಳ್ಳ ಈ ಸಿನಿಮಾ ಕ್ರೈಂ ಥ್ರಿಲ್ಲರ್ ಜಾನರ್ನಲ್ಲಿದೆ. ಈ ಹಿಂದೆ ಜ.15ರಂದು ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತ್ತು. ಚಿತ್ರವನ್ನು ಕೆಆರ್ಜಿ ಮತ್ತು ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡಿದೆ. ಶೇಖರ್ ಚಂದ್ರ ಛಾಯಾಚಿತ್ರಗ್ರಹಣ, ಚರಣ್ ರಾಜ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-51-523819285

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.