‘ಜಮ್‌ ಜಮ್‌’ ಮಂಜಿಮಾ

7

‘ಜಮ್‌ ಜಮ್‌’ ಮಂಜಿಮಾ

Published:
Updated:

ಮಲೆಯಾಳಿ ಕುಟ್ಟಿ ಮಂಜಿಮಾ ಮೋಹನ್ ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಪರಿಚಿತ ಹೆಸರು. ಅವರು ನಾಯಕಿಯಾಗಿ ನಟಿಸಿರುವ ‘ಮಿಖಾಯೆಲ್’ ಚಿತ್ರ ಇದೇ 18ರಂದು ತೆರೆಕಾಣಲಿದೆ. ಮಲಯಾಳಂನ ಮೊದಲ ವೈಜ್ಞಾನಿಕ, ಕಾಲ್ಪನಿಕ ಮತ್ತು ಥ್ರಿಲ್ಲರ್‌ ಸಿನಿಮಾ ಎಂಬುದು ‘ಮಿಖಾಯೆಲ್‌’ನ ಹೆಗ್ಗಳಿಕೆ. 

ಮಾಲಿವುಡ್‌ನ ಅತಿ ಬೇಡಿಕೆ ಬಾಲನಟಿಯಾಗಿ ಮನೆ ಮಾತಾಗಿದ್ದ ಮಂಜಿಮಾ ಈಗ ಪ್ರೌಢ ನಟಿ. 1998ರಿಂದ 2002ವರೆಗೂ ಬಾಲನಟಿಯ ಪಾತ್ರಕ್ಕೆ ನಿರ್ದೇಶಕರ ಮೊದಲ ಆಯ್ಕೆ ಮಂಜಿಮಾನೇ ಆಗಿರುತ್ತಿದ್ದರು. ಅದು ಅವರ ಮನೋಜ್ಞ ನಟನೆಗೆ ಸಂದ ಗೌರವವಾಗಿತ್ತು. ಸಿನಿಮಾ ಮತ್ತು ಕಿರುತೆರೆಯ ಮೂಲಕ ಮಲೆಯಾಳಿಗಳ ಮುದ್ದಿನ ಕೂಸು ಆಗಿ ಬೆಳೆದ ಮಂಜಿಮಾಗೆ ಈಗಲೂ ಕೈತುಂಬಾ ಅವಕಾಶಗಳಿವೆ. ಮಂಜಿಮಾ, ಮಲಯಾಳಂ ಚಿತ್ರರಂಗದ ಸಿನೆಮಾಟೊಗ್ರಾಫರ್‌ ವಿಪಿನ್ ಮೋಹನ್ ಮತ್ತು ನೃತ್ಯ ವಿದ್ವಾಂಸರಾದ ಕಲಾಮಂಡಲಂ ಗಿರಿಜಾ ಅವರ ಮಗಳು. ಮಗಳು ತಮ್ಮಂತೆ ನೃತ್ಯ ಕ್ಷೇತ್ರದಲ್ಲಿ ಬೆಳಗಲಿ ಎಂಬುದು ತಾಯಿಯ ಬಯಕೆಯಾಗಿತ್ತು. ಮಗಳ ಮನಸ್ಸಿನಲ್ಲಿದ್ದುದೂ ಇದೇ ಕನಸು. ಆದರೆ ಅವಕಾಶಗಳು ಒಂದಾದ ಮೇಲೊಂದರಂತೆ ಬರತೊಡಗಿದ್ದರಿಂದ ಪರಿಸ್ಥಿತಿಯ ಒತ್ತಡಕ್ಕೆ ಕಟ್ಟುಬಿದ್ದು ನಟಿಯಾದವರು ಮಂಜಿಮಾ. 

‘ಕಂಗನಾ ಆಗಲಾರೆ’

ಹಿಂದಿಯ ‘ಕ್ವೀನ್‌’, ಮಲಯಾಳಂನಲ್ಲಿ ‘ಜಮ್‌ ಜಮ್‌’ ಶೀರ್ಷಿಕೆಯಲ್ಲಿ ಸಿದ್ಧಗೊಳ್ಳುತ್ತಿದೆ. ಹಿಂದಿಯಲ್ಲಿ ಕಂಗನಾ ರನೋಟ್‌ ನಟನೆ ಪ್ರೇಕ್ಷಕರು ಮನಸೋತಿದ್ದಲ್ಲದೆ ಹತ್ತಾರು ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು. ಕಂಗನಾ ಮಾಡಿದ ರಾಣಿ ಮೆಹ್ರಾ ಪಾತ್ರವನ್ನು ಮಲಯಾಳಂನಲ್ಲಿ ಮಂಜಿಮಾ ಮಾಡುತ್ತಿದ್ದಾರೆ. ಪಾತ್ರದ ಹೆಸರು ಜಮಾ ನಸ್ರೀನ್‌. ‘ಕ್ವೀನ್‌’ ಮತ್ತು ಕಂಗನಾಗೆ ಸಿಕ್ಕಿದ ಯಶಸ್ಸು ಮಂಜಿಮಾ ಮೇಲೆ ಒತ್ತಡವಾಗಿ ಪರಿಣಮಿಸಿತ್ತು. ನಿರ್ದೇಶಕ ಜಿ. ನೀಲಕಂಠ ರೆಡ್ಡಿ ಅವರೂ ಕಂಗನಾಗೆ ಸಮಾನವಾಗಿ ಮಂಜಿಮಾ ನಟಿಸಬೇಕು ಎಂದೇ ನಿರೀಕ್ಷೆ ಇಟ್ಟುಕೊಂಡಿದ್ದರು. 

ಚಿತ್ರೀಕಣರದ ಮೊದಲ ದಿನವೇ ಮಂಜಿಮಾಗೆ, ತಾನು ಕಂಗನಾ ಪಾತ್ರ ಮತ್ತು ನಿರ್ವಹಣೆಯನ್ನು ಮಾದರಿಯಾಗಿಟ್ಟುಕೊಂಡರೆ ಸೋಲುವುದು ಖಚಿತ ಎಂಬುದು ಸ್ಪಷ್ಟವಾಯಿತು. ‘ಜಮ್‌ ಜಮ್‌ ಚಿತ್ರವನ್ನು ಹಿಂದಿಯ ರೀಮೇಕ್ ಎಂದು ನಾನು ಭಾವಿಸುವುದಿಲ್ಲ. ಯಾವ ಭಾಷೆಯಲ್ಲಿ ಬಂದಿದೆ ಎಂಬುದನ್ನು ಮರೆತು ಹೊಚ್ಚ ಹೊಸ ಸಿನಿಮಾ ಮತ್ತು ಪಾತ್ರ ಎಂಬಂತೆ ನಾನು ಸ್ವೀಕರಿಸುತ್ತೇನೆ. ಯಾರ ನಟನೆಗೂ ನನ್ನನ್ನು ಹೋಲಿಸಬೇಡಿ, ನಿರೀಕ್ಷೆಯನ್ನೂ ಇಟ್ಟುಕೊಳ್ಳಬೇಡಿ. ಜಮಾ ನಸ್ರೀನ್‌ ಪಾತ್ರವನ್ನು ಮಂಜಿಮಾ ಆಗಿ ಮಾಡುತ್ತೇನೆ. ಇದಕ್ಕೆ ಒಪ್ಪುವುದಾದರೆ ಮಾತ್ರ ನಾನು ಮುಂದುವರಿಯುತ್ತೇನೆ’ ಎಂದು, ನೀಲಕಂಠ ಅವರಿಗೆ ಕಡ್ಡಿಮುರಿದಂತೆ ಹೇಳಿಯೂ ಬಿಟ್ಟರು. 

‘ಮಿಖಾಯೆಲ್‌’ನಲ್ಲಿ ನಿವಿನ್‌ ಪೌಳಿ ಅವರದು ವಿಜ್ಞಾನಿಯ ಪಾತ್ರ. ಮಂಜಿಮಾ–ನಿವಿನ್ ಜೋಡಿಗೆ ಇದು ಎರಡನೇ ಚಿತ್ರ. ‘ಒರು ವಡಕ್ಕನ್‌ ಸೆಲ್ಫಿ’ಯಲ್ಲಿ ನಿವಿನ್‌ ಜೊತೆಗೆ ಮಂಜಿಮಾ ಕೆಮಿಸ್ಟ್ರಿ ಮಲೆಯಾಳಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಎರಡನೇ ಚಿತ್ರದ ಬಗ್ಗೆಯೂ ಮಂಜಿಮಾ ಸಹಜವಾಗಿ ಕಾತರರಾಗಿದ್ದಾರೆ. ಈ ಮಲೆಯಾಳಿ ಕುಟ್ಟಿ ನಟಿಸಿದ ತಮಿಳಿನ ‘ಸತ್ರಿಯಾ’ ಮತ್ತು ಮಲಯಾಳಂನ ‘ಇಪ್ಪಡೈ ವೆಳ್ಳಂ’ 2017ರಲ್ಲಿ ತೆರೆಕಂಡಿದ್ದವು. ತೆಲುಗಿನ ‘ಎನ್‌.ಟಿ.ಆರ್. ಮಹಾನಾಯಕುಡು’ ಹಾಗೂ ಮಲಯಾಳಂನ ‘ಜಮ್‌ ಜಮ್‌ ಜಮಾ’, ಚಿತ್ರೀಕರಣ ಭರದಿಂದ ಸಾಗಿದೆ.

ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಕೈತುಂಬಾ ಅವಕಾಶಗಳು ಈ ಮಲೆಯಾಳಿ ಕುಟ್ಟಿಯ ಕೈಯಲ್ಲಿವೆ. ಉಧಯನಿಧಿ ಸ್ಟಾಲಿನ್‌ ಮತ್ತು ವಿಕ್ರಮ್‌ ಪ್ರಭು ಜೊತೆ ನಾಯಕಿಯಾಗಿ ನಟಿಸಿರುವ ತಮಿಳು ಸಿನಿಮಾಗಳು ಇನ್ನೇನು ಬಿಡುಗಡೆಯಾಗಬೇಕಿದೆ. ಒಟ್ಟಿನಲ್ಲಿ ಮಂಜಿಮಾಗೆ 2019 ಅದೃಷ್ಟ ತರುತ್ತದೆ ಎಂಬುದು ಅವರ ಅಭಿಮಾನಿಗಳ ಲೆಕ್ಕಾಚಾರ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !