ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನದ ಚಿತ್ರ ಹಬ್ಬ: ಇಂದು ಹಲವು ಚಿತ್ರಗಳು ತೆರೆಗೆ

Last Updated 7 ಜುಲೈ 2022, 19:30 IST
ಅಕ್ಷರ ಗಾತ್ರ

ಚಂದನವನದಲ್ಲಿ ಇಂದು (ಜುಲೈ 8) ಹಲವು ಚಿತ್ರಗಳು ಬಿಡುಗಡೆಯಾಗುತ್ತಿವೆ. ಪ್ರಮುಖ ಚಿತ್ರಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಅಂಗೈಲಿ ಅಕ್ಷರ

ಕೆ.ಎಚ್.ಎಸ್. ಬ್ಯಾನರ್ ಅಡಿಯಲ್ಲಿ ಜ್ಞಾನೇಶ ಎಂ.ಬಿ. ಗೋರೂರು ಅವರು ನಿರ್ಮಿಸಿರುವ ಚಿತ್ರ ‘ಅಂಗೈಲಿ ಅಕ್ಷರ’. ತಾಯಿಯಿಂದ ದೂರಾದ ಬಡ ಕುಟುಂಬದ ಹುಡುಗನ ಶಿಕ್ಷಣದ ಹಾದಿ, ತಾಯಿ ಮಗನ ನಡುವಿನ ಬಾಂಧವ್ಯದ ಕಥೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಹೇಳುವ ಚಿತ್ರವಿದು. ‌ಈ ಚಿತ್ರಕ್ಕೆ ಸಿದ್ದರಾಜು ಎಚ್. ಕಾಳೇನಹಳ್ಳಿ ಕಥೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.ತನುಷರಾಜ್, ‘ಕಾನಿಷ್ಕ ರವಿ ದೇಸಾಯಿ, ಅಮೋಘ ಕೃಷ್ಣ, ಪುಟಾಣಿ ಪಂಟ್ರು ಮಧುಸೂದನ್, ಬೇಬಿ ಅಂಕಿತ ಜಯರಾಮ್ ನಟಿಸಿದ್ದಾರೆ. ಎ.ಟಿ.ರವೀಶ್ ಸಂಗೀತ ಸಂಯೋಜನೆ, ರಮೇಶ್-ನರಸಿಂಹ ಛಾಯಾಗ್ರಹಣವಿದೆ.

ನಮ್ಮ ಹುಡುಗರು

ಗೋಲ್ಡನ್ ಹಾರ್ಟ್ಸ್ ಸಂಸ್ಥೆ ಅಡಿಯಲ್ಲಿ ಕೆ.ಕೆ. ಅಶ್ರಫ್ ನಿರ್ಮಿಸಿ, ಎಚ್.ಬಿ. ಸಿದ್ದು ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿರುವ ಚಿತ್ರ ‘ನಮ್ಮ ಹುಡುಗರು’. ಈ ಚಿತ್ರದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸಿದ್ದಾರೆ.ರಾಧ್ಯಾ ಈಚಿತ್ರದ ನಾಯಕಿ. ಚಿತ್ರಕ್ಕೆ ಚಿದಾನಂದ್ ಎಚ್.ಕೆ. ಛಾಯಾಗ್ರಹಣ ಚಿತ್ರಕ್ಕಿದೆ.

ಗಿರ್ಕಿ

ಖ್ಯಾತ ಹಾಸ್ಯ ನಟ ತರಂಗ ವಿಶ್ವ ನಟನೆ, ನಿರ್ಮಾಣದ ‘ಗಿರ್ಕಿ’ ಬಿಡುಗಡೆಯಾಗಿದೆ. ಚಿತ್ರ ನಿರ್ಮಾಣಕ್ಕೆ ವಾಸುಕಿ ಭುವನ್‌ ಕೈಜೋಡಿಸಿದ್ದಾರೆ. ವೀರೇಶ್ ಪಿ.ಎಂ ನಿರ್ದೇಶನವಿದೆ. ನಟಿ ದಿವ್ಯಾ ಉರುಡಗ ಚಿತ್ರದ ನಾಯಕಿ.ವಿಲೋಕ್ ರಾಜ್ ತಾರಾ ಬಳಗದಲ್ಲಿದ್ದಾರೆ.

ತೂತುಮಡಿಕೆ

ಚಂದ್ರಕೀರ್ತಿ ನಾಯಕ, ನಿರ್ದೇಶಕರಾಗಿರುವ ‘ತೂತುಮಡಿಕೆ’ ಸಿನಿಮಾ ರಾಜ್ಯದ 80 ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿದೆ. ಶಿವಕುಮಾರ್‌ ನಿರ್ಮಾಪಕರು. ‘ತೂತುಮಡಿಕೆ’ ಕಾಮಿಡಿ ಥ್ರಿಲ್ಲರ್ ಸಿನಿಮಾ. ಕಥೆ ಮತ್ತು ಚಿತ್ರಕಥೆಯನ್ನು ಚಂದ್ರ ಕೀರ್ತಿ, ಎಎಸ್‌ಜಿ ಮತ್ತು ಡಾಲರ್ ಬರೆದಿದ್ದಾರೆ ಚಂದ್ರಕೀರ್ತಿ ಜೊತೆ ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಪ್ರಮೋದ್‌ ಶೆಟ್ಟಿ, ಉಗ್ರಂ ಮಂಜು, ಗಿರೀಶ್ ಶಿವಣ್ಣ, ಶಂಕರ್ ಅಶ್ವತ್ಥ್, ಸಿತಾರಾ ನರೇಶ್ ಭಟ್ ತಾರಾಬಳಗದಲ್ಲಿದ್ದಾರೆ. ಸರ್ವತ ಸಿನಿ ಗ್ಯಾರೇಜ್ ಮತ್ತು ಸ್ಪ್ರೆಡಾನ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಮಧುಸೂದನ್ ಮತ್ತು ಗಿರಿಬಸವ ಪ್ರೊಡಕ್ಷನ್ಸ್‌ನವರು ಬಂಡವಾಳ ಹೂಡಿದ್ದಾರೆ. ನವೀನ್ ಚಲ್ಲ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ ಈ ಸಿನಿಮಾಕ್ಕಿದೆ.

ಶುಗರ್‌ಲೆಸ್‌

ಪೃಥ್ವಿ ಅಂಬಾರ್‌ ಹಾಗೂ ಪ್ರಿಯಾಂಕ ತಿಮ್ಮೇಶ್‌ ನಟನೆಯ, ಕೆ.ಎಂ.ಶಶಿಧರ್‌ ನಿರ್ದೇಶನದ ‘ಶುಗರ್‌ಲೆಸ್‌’ ಬಿಡುಗಡೆಯಾಗಿದೆ. ಸಕ್ಕರೆ ಕಾಯಿಲೆ ಇರುವ ಯುವಕನ ತಳಮಳಗಳು, ಸಂಕಟ ತೆರೆದಿಡುವುದರ ಜೊತೆಗೆ ಸಕ್ಕರೆ ಕಾಯಿಲೆ ಇದ್ದರೂ ಹೇಗೆ ಸುಖಮಯ ಜೀವನ ನಡೆಸಬಹುದು ಎನ್ನುವುದು ಚಿತ್ರದ ಕಥಾಹಂದರ. ದಿಶಾ ಎಂಟರ್‌ಟೈನ್ಮೆಂಟ್ ಹಾಗೂ ಜಾಜಿ ಪ್ರೊಡಕ್ಷನ್ಸ್ ಈ ಚಿತ್ರ ನಿರ್ಮಿಸಿವೆ. ಚಿತ್ರಕ್ಕೆ ಲವಿತ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತವಿದೆ.

ವೆಡ್ಡಿಂಗ್ ಗಿಫ್ಟ್

ನಿಶಾಂತ್ - ಸೋನುಗೌಡ ನಾಯಕ, ನಾಯಕಿಯಾಗಿ ನಟಿಸಿರುವ ‘ವೆಡ್ಡಿಂಗ್ ಗಿಫ್ಟ್’ ಇಂದು ತೆರೆ ಕಂಡಿದೆ. ವಿಕ್ರಂ ಪ್ರಭು ನಿರ್ದೇಶನದ ಈ ಚಿತ್ರದಲ್ಲಿ ಖ್ಯಾತ ನಟಿ ಪ್ರೇಮಾ ವಕೀಲರ ಪಾತ್ರದಲ್ಲಿದ್ದಾರೆ.

ಮದುವೆಯಾದ ಹೊಸತರಲ್ಲೇ ಈ ಸಂಬಂಧದಲ್ಲಿ ಬಿರುಕು ಬಂದರೆ ಏನಾಗುತ್ತದೆ? ಎಂಬ ಕಥಾವಸ್ತು ಈ ಚಿತ್ರದ್ದು. ನಿಶಾಂತ್, ಸೋನು ಗೌಡ, ಅಚ್ಯುತಕುಮಾರ್, ಪವಿತ್ರಾ ಲೋಕೇಶ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹೆಚ್ಚಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಚಿತ್ರ ತೆರೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT