ಶನಿವಾರ, ಡಿಸೆಂಬರ್ 5, 2020
25 °C

ಮದುವೆ–ಸಿನಿಮಾ ಅನುಷ್ಕಾ ಆಯ್ಕೆ ಯಾವುದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಾಹುಬಲಿ’ ಖ್ಯಾತಿಯ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಹೆಸರು ಗಳಿಸಿದವರು. ಕಳೆದ ಕೆಲ ವರ್ಷಗಳಿಂದ ಮಾಧ್ಯಮಗಳಲ್ಲಿ ಅನುಷ್ಕಾ ಮದುವೆಯ ಬಗ್ಗೆ ಚರ್ಚೆಗಳು ಕೇಳಿಬರುತ್ತಿದ್ದವು. ಅಲ್ಲದೇ ನಟ ಪ್ರಭಾಸ್ ಹಾಗೂ ಅನುಷ್ಕಾ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಆದರೆ ಈ ಎಲ್ಲದರ ಬಗ್ಗೆ ತಲೆ ಕೆಡಿಸಿಕೊಳ್ಳದ ಅನುಷ್ಕಾ ಒಳ್ಳೆಯ ಚಿತ್ರಗಳನ್ನು ಮಾಡುವತ್ತ ಗಮನ ಹರಿಸಿದ್ದರು. ಅಲ್ಲದೇ ತಮ್ಮ ಮದುವೆಯ ಯೋಚನೆಯನ್ನು ಮುಂದಕ್ಕೆ ಹಾಕುತ್ತಾ ಬಂದಿದ್ದರು.

ಆದರೆ ಇತ್ತೀಚೆಗೆ ಅನುಷ್ಕಾ ತಮಗೆ ಹೊಂದುವಂತಹ ಬಾಳಸಂಗಾತಿ ಸಿಕ್ಕರೆ ಮದುವೆಯಾಗುತ್ತೇನೆ, ಅಲ್ಲದೇ ಮಕ್ಕಳೊಂದಿಗೆ ಸಂತೋಷದ ಜೀವನ ನಡೆಸಲು ಬಯಸುತ್ತೇನೆ ಎಂದು ಹೇಳಿದ್ದರು.

ಅನುಷ್ಕಾಗೆ ಈಗ 38 ವರ್ಷ. ಸದ್ಯ ಅವರ ಕೈಯಲ್ಲಿರುವ ಸಿನಿಮಾಗಳನ್ನು ಮುಗಿಸುವಾಗ ಅವರ ವಯಸ್ಸು ನಲವತ್ತಾಗಬಹುದು. ಇತ್ತೀಚೆಗೆ ನಟಿಯರು ತಮ್ಮ ವೃತ್ತಿಬದುಕಿಗಾಗಿ ವೈಯಕ್ತಿಕ ಜೀವನವನ್ನು ತ್ಯಾಗ ಮಾಡುವುದು ಸಾಮಾನ್ಯವಾಗಿದೆ.

ಬಾಹುಬಲಿ ನಂತರ ಈ ಸ್ಟಾರ್ ನಟಿ ಸಿನಿಮಾಗಳನ್ನು ಆಯ್ಕೆಯಲ್ಲಿ ತುಂಬಾನೇ ಯೋಚಿಸುತ್ತಿದ್ದಾರೆ. ಇಷ್ಟು ವರ್ಷಗಳಲ್ಲಿ ಕಾಣಿಸಿಕೊಂಡ ಪಾತ್ರಗಳಿಗಿಂತ ಭಿನ್ನ ಪಾತ್ರಗಳಲ್ಲಿ ನಟಿಸುವತ್ತ ದೃಷ್ಟಿ ನೆಟ್ಟಿದ್ದಾರೆ ಈ ಚೆಲುವೆ.

ಇತ್ತೀಚೆಗೆ ಇವರ ‘ನಿಶಬ್ದಂ’ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದ ಬಗ್ಗೆ  ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿರಲಿಲ್ಲ. ‌ಅಲ್ಲದೇ ವಯಸ್ಸಿನ ಕಾರಣದಿಂದ ಅನುಷ್ಕಾ ನಟನೆಗೆ ನಿವೃತ್ತಿ ಘೋಷಿಸಬಹುದು ಎಂಬ ಮಾತಿತ್ತು.

ಆದರೆ ಇದೆಲ್ಲವನ್ನು ಸುಳ್ಳು ಮಾಡಿರುವ ಅನುಷ್ಕಾ ಹೊಸ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ. ಮೂಲಗಳ ಪ್ರಕಾರ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಸಿನಿಮಾದಲ್ಲಿ ಅನುಷ್ಕಾ ಬಣ್ಣ ಹಚ್ಚಲಿದ್ದಾರೆ. ಈ ಹಿಂದೆ ‘ಎನ್ನೈ ಅರಿಂದಾಳ್’ ಸಿನಿಮಾದಲ್ಲಿ ಗೌತಮ್ ಹಾಗೂ ಅನುಷ್ಕಾ ಒಟ್ಟಿಗೆ ಕೆಲಸ ಮಾಡಿದ್ದರು. ಇದರಲ್ಲಿ ಅಜಿತ್ ನಾಯಕನಾಗಿ ನಟಿಸಿದ್ದರು. ಈ ಸಿನಿಮಾವು ಅಜಿತ್ ಹಾಗೂ ಅನುಷ್ಕಾಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು