ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ 29ಕ್ಕೆ ಅಮೆಜಾನ್‌ ಪ್ರೈಮ್ ವಿಡಿಯೊದಲ್ಲಿ ಸಿಗಲಿದೆ ಮಾಸ್ಟರ್‌

Last Updated 27 ಜನವರಿ 2021, 10:35 IST
ಅಕ್ಷರ ಗಾತ್ರ

ದಳಪತಿ ವಿಜಯ್‌ ಹಾಗೂ ವಿಜಯ್ ಸೇತುಪತಿ ಕಾಂಬಿನೇಷನ್‌ನ ಆ್ಯಕ್ಷನ್ ಥ್ರಿಲ್ಲರ್ 'ಮಾಸ್ಟರ್' ಸಿನಿಮಾ ಜನವರಿ 29ರಂದು ಅಮೆಜಾನ್ ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಇಂದು ಅಧಿಕೃತ ಮಾಹಿತಿ ತಿಳಿಸಿದೆ ಚಿತ್ರತಂಡ. ‌

ಲೋಕೇಶ್‌ ಕನಕರಾಜ್‌ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ, ಕ್ಸೇವಿಯರ್ ಬ್ರಿಟ್ಟೊ ನಿರ್ಮಾಣದ ಈ ಚಿತ್ರ ಜನವರಿ 13ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅಲ್ಲದೇ ಲಾಕ್‌ಡೌನ್‌ ಬಳಿಕ ಬಿಡುಗಡೆಯಾಗಿ ಅತೀ ಹೆಚ್ಚು ಯಶಸ್ಸು ಗಳಿಸಿದ ಚಿತ್ರ ಎಂಬ ಖ್ಯಾತಿಗೂ ಭಾಜನವಾಗಿತ್ತು.

ಚಿತ್ರ ಅಮೆಜಾನ್‌ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗುತ್ತಿರುವ ಬಗ್ಗೆ ಮಾತನಾಡಿರುವ ನಟ ವಿಜಯ್ ಸೇತುಪತಿ ‘ನಮ್ಮ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಅಲ್ಲದೇ ಆ ಮೂಲಕ ಮನೆಯಲ್ಲೇ ಇರುವ ಹಲವರನ್ನು ಚಿತ್ರ ತಲುಪಲಿದೆ. ಅಲ್ಲದೇ ಅಮೆಜಾನ್ ಮೂಲಕ ಸಿನಿಮಾ ನೋಡಲು ಸಾಧ್ಯವಾಗದ ಪ್ರದೇಶವನ್ನು ತಲುಪಲಿದ್ದೇವೆ. ಈಗ ಪರಿಪೂರ್ಣ ಎನ್ನಿಸುತ್ತಿದೆ’ ಎಂದಿದ್ದಾರೆ.

‘ಮಾಸ್ಟರ್ ಈ ವರ್ಷದ ತಮಿಳು ಚಿತ್ರಗಳಲ್ಲೇ ಬಹುನಿರೀಕ್ಷಿತ ಸಿನಿಮಾವಾಗಿದೆ, ಇದನ್ನು ಅಮೆಜಾನ್ ಪ್ರೈಮ್ ಮೆಂಬರ್‌ಗಳಿಗೆ ತಲುಪಿಸುತ್ತಿರುವುದಕ್ಕೆ ಖುಷಿ ಇದೆ. ಭಾರತ ಸೇರಿ 240 ದೇಶವನ್ನು ಇದು ಈ ತಿಂಗಳಿನಲ್ಲಿ ತಲುಪಲಿದೆ’ ಎಂದಿದ್ದಾರೆ ಅಮೆಜಾನ್ ಪ್ರೈಮ್‌ನ ವಿಡಿಯೊದ ಕಂಟೆಂಟ್ ವಿಭಾಗದ ಮುಖ್ಯಸ್ಥರಾಗಿರುವ ವಿಜಯ್ ಸುಬ್ರಮಣಿಯನ್‌.

ಮಾಸ್ಟರ್‌ನಲ್ಲಿ ಮಾಳವಿಕಾ ಮೋಹನ್‌, ಅಂಡ್ರೆಡಾ ಜೆರೆವಿಯಾ, ಶಾಂತನು ಭಾಗ್ಯರಾಜ್ ಹಾಗೂ ಅರ್ಜುನ್ ದಾಸ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT